AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KPSC ಕರ್ಮಕಾಂಡ: ಕೇಸ್​​ನಲ್ಲಿ ಕೇಳಿಬಂತು ಹೊಸ ಹೆಸರು, ಆತ ಯಾರೆಂಬುದೇ ಇನ್ನೂ ಸಸ್ಪೆನ್ಸ್​​!

ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ‘ದುಗ್ಗಪ್ಪ’ ಎಂಬ ಹೊಸ ಹೆಸರು ಕೇಳಿಬಂದಿದ್ದು, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪಿಎ ಹಾಗೂ ಆತನ ನಡುವಿನ ವಾಟ್ಸಾಪ್ ಚಾಟ್‌ಗಳನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮತ್ತೊಂದೆಡೆ  ಶಿವಶಂಕರಪ್ಪ ಮತ್ತು ಗೀತಾ ನಡುವೆ ನಡೆದಿದ್ದ ಹಣದ ವ್ಯವಹಾರದ ಬಗ್ಗೆಯೂ ತನಿಖೆ ವೇಳೆ ಗೊತ್ತಾಗಿದೆ.

KPSC ಕರ್ಮಕಾಂಡ: ಕೇಸ್​​ನಲ್ಲಿ ಕೇಳಿಬಂತು ಹೊಸ ಹೆಸರು, ಆತ ಯಾರೆಂಬುದೇ ಇನ್ನೂ ಸಸ್ಪೆನ್ಸ್​​!
KPSC ಕರ್ಮಕಾಂಡ: ಕೇಸ್​​ನಲ್ಲಿ ಕೇಳಿಬಂತು ಹೊಸ ಹೆಸರುImage Credit source: Tv9 Kannada
ರಾಚಪ್ಪಾಜಿ ನಾಯ್ಕ್
| Edited By: |

Updated on: Oct 09, 2026 | 12:39 PM

Share

ಬೆಂಗಳೂರು, ಅಕ್ಟೋಬರ್​​ 09: KPSC ಪರೀಕ್ಷಾ ಅಕ್ರಮದಲ್ಲಿ ದುಗ್ಗಪ್ಪ ಎಂಬಾತನ ತಳುಕು ಹಾಕಿಕೊಂಡಿದ್ದು, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪಿಎ ಹಾಗೂ ದುಗ್ಗಪ್ಪ ನಡುವಿನ ವಾಟ್ಸಾಪ್​ ಚಾಟ್ ಬಹಿರಂಗಗೊಂಡಿದೆ. ಅಭ್ಯರ್ಥಿಗಳ ವಿವರವನ್ನು ದುಗ್ಗಪ್ಪ ಕಳುಹಿಸುತ್ತಿದ್ದ, ವಾಟ್ಸಾಪ್​ ಮೂಲಕವೇ ಸಾಹುಕಾರ್ ಪಿಎ ಹಾಗೂ ದುಗ್ಗಪ್ಪ ಡೀಲ್ ನಡೆಸುತ್ತಿದ್ದರು ಎಂಬುದು ಗೊತ್ತಾಗಿದೆ. ಹೀಗಾಗಿ ಈ ದುಗ್ಗಪ್ಪ KPSC ಮಾಜಿ ಸದಸ್ಯನಾ ಅನ್ನೋದರ ಬಗ್ಗೆ ಇಡಿಯಿಂದ ತನಿಖೆ ನಡೆಯುತ್ತಿದೆ.

ED ದಾಳಿ ವೇಳೆ ಪತ್ತೆಯಾಗಿದ್ದ ಹಲವು ದಾಖಲೆ

ಶಿವಶಂಕರಪ್ಪ ಸಾಹುಕಾ‌ರ್ ಪಿಎ ಮೋಹನ್‌ ಮನೆ ಮೇಲೆ ED ದಾಳಿ ವೇಳೆ ಹಲವು ದಾಖಲೆಗಳು ಪತ್ತೆಯಾಗಿದ್ದವು. ಮೋಹನ್​ ಮೊಬೈಲ್​ನಲ್ಲಿ ವಾಟ್ಸಾಪ್​ ಡೇಟಾ ಪರಿಶೀಲನೆ ವೇಳೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ವಿವರ, ನೋಂದಣಿ ಸಂಖ್ಯೆ ಪತ್ತೆಯಾಗಿತ್ತು. ದಾವಣಗೆರೆಯ ದುಗ್ಗಪ್ಪ ಅಭ್ಯರ್ಥಿಗಳ ವಿವರ ಕಳುಹಿಸಿದ್ದು ಕೂಡ ಕಂಡುಬಂದಿತ್ತು. ಈ ದುಗ್ಗಪ್ಪ ಯಾರು?, ಸಾಹುಕಾರ್​ಗೂ ಈತನಿಗೂ ಏನು ಸಂಬಂಧ? ಎಂಬ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ದುಗ್ಗಪ್ಪನಿಗೆ ಇಡಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಕೆಪಿಎಸ್​ಸಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್,ಸದಸ್ಯೆ ಗೀತಾ ಇಡಿ ಕಸ್ಟಡಿಗೆ

ಶಿವಶಂಕರಪ್ಪ-ಗೀತಾ ನಡುವಿನ ಹಣದ ವ್ಯವಹಾರ ಬಯಲು

ಮತ್ತೊಂದೆಡೆ ಕೆಪಿಎಸ್​​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮತ್ತು ಗೀತಾ ನಡುವೆ ನಡೆದಿದ್ದ ಹಣದ ವ್ಯವಹಾರದ ಬಗ್ಗೆಯೂ ಗೊತ್ತಾಗಿದೆ. ಆಗಾಗ ಗೀತಾ, ಚಂದ್ರ ಹಾಸ ಮತ್ತು ಗೀತಾ ಪುತ್ರಿಯ ಖಾತೆಗಳಿಗೆ ಶಿವಶಂಕರಪ್ಪ ಹಣ ಹಾಕುತ್ತಿದ್ದರು. 2021-22ರಲ್ಲಿ ಕೆಪಿಎಸ್ಸಿ ಸದಸ್ಯರಾದ ಬಳಿಕ ಬಿ.ವಿ ಗೀತಾ ಬೆಂಗಳೂರಿಗೆ ಆಗಮಿಸಿದ್ದರು. ಆರಂಭದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಈಕೆಗೆ ಶಿವಶಂಕರಪ್ಪ ಸಾಹುಕಾರ್ ಹಣದ ಸಹಾಯ ಮಾಡಿದ್ದರು. ಅಪಾರ್ಟ್ಮೆಂಟ್ ಫ್ಲಾಟ್​​ನ ಮಾಲೀಕ ಚಂದ್ರಹಾಸ ಖಾತೆಗೆ 2023ರ ಫೆಬ್ರವರಿ 23ರಂದು 22,500 ರೂ., ಅದೇ ದಿನ ಮತ್ತೆ 45,000 ಹಣ ಹಾಕಿದ್ದರು. 2022ರ ಡಿಸೆಂಬರ್​​ 06, ನವೆಂಬರ್​​ 08 ಮತ್ತು ಸೆಪ್ಟೆಂಬರ್​​ 06ರಂದು ತಲಾ 45 ಸಾವಿರ ಹಣ ವರ್ಗಾಯಿಸಿದ್ದರು. ಹಾಗೆಯೇ 2022ರ ಅಕ್ಟೋಬರ್​​ 01ರಂದು 5 ಲಕ್ಷ, ಫೆಬ್ರವರಿ 01ರಂದು 3 ಲಕ್ಷ ಹಣವನ್ನು ಗೀತಾರ ಖಾತೆಗೆ ಹಾಕಲಾಗಿತ್ತು. 2023ರ ಜೂನ್​​ 28ರಂದು 40 ಸಾವಿರ ಮತ್ತು ಮೇ 29ರಂದು 44 ಸಾವಿರ ಹಣವನ್ನು ಗೀತಾ ಪುತ್ರಿಯ ಅಕೌಂಟ್​​ಗೂ ಶಿವಶಂಕರಪ್ಪ ವರ್ಗಾಯಿಸಿರುವುದನ್ನು ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More