IPS ದಂಪತಿ ಕಲಹ: ಮಕ್ಕಳಿಗಾಗಿ ಪತಿರಾಯ ಯೂನಿಫಾರಂನಲ್ಲೇ ಧರಣಿ!

ಬೆಂಗಳೂರು: ಯಾರ್ ಹೇಳಿದ್ರು ನಾನ್ ಇಲ್ಲೇ ಕೂತಿರುತ್ತೇನೆ ಅನ್ನೋ ಮಾತು ಅಷ್ಟೇ.. ಹೀಗೆ ಮಾಜಿ ಪತ್ನಿ ಮನೆ ಮುಂದೆ ಧರಣಿ ಕೂತಿರೋ ಇವರ ಹೆಸರು ಅರುಣ್ ರಂಗರಾಜನ್. ಕಲಬುರಗಿಯಲ್ಲಿ ಆಂತರಿಕ‌ ಭದ್ರತಾ ವಿಭಾಗದ ಎಸ್​​ಪಿಯಾಗಿ ಕಾರ್ಯನಿರ್ವಹಿಸ್ತಿದ್ದಾರೆ. ಆದ್ರೆ, ಕೆಲ ವರ್ಷಗಳ ಹಿಂದಷ್ಟೇ IPS ಅಧಿಕಾರಿ ಇಲಾಕಿಯಾ ಕರುಣಾಕರನ್​ ಜೊತೆ ಲವ್ ಆಗಿ ಇಬ್ರೂ ಪ್ರೀತಿಸಿ ಮದ್ವೆಯಾಗಿದ್ರಂತೆ. ಬಳಿಕ ಪ್ರೀತಿಗೆ ಸಾಕ್ಷಿ ಎಂಬಂತೆ ಒಂದು ಮುದ್ದಾದ ಮಗು ಕೂಡ ಆಗಿದೆ. ಆದ್ರೆ, ಸಂಸಾರದಲ್ಲಿ ಮನಸ್ತಾಪ ಮೂಡಿ ಡೈವೋರ್ಸ್ ಪಡೆದಿದ್ರಂತೆ. […]

IPS ದಂಪತಿ ಕಲಹ: ಮಕ್ಕಳಿಗಾಗಿ ಪತಿರಾಯ ಯೂನಿಫಾರಂನಲ್ಲೇ ಧರಣಿ!
Follow us
ಸಾಧು ಶ್ರೀನಾಥ್​
|

Updated on:Feb 10, 2020 | 10:47 AM

ಬೆಂಗಳೂರು: ಯಾರ್ ಹೇಳಿದ್ರು ನಾನ್ ಇಲ್ಲೇ ಕೂತಿರುತ್ತೇನೆ ಅನ್ನೋ ಮಾತು ಅಷ್ಟೇ.. ಹೀಗೆ ಮಾಜಿ ಪತ್ನಿ ಮನೆ ಮುಂದೆ ಧರಣಿ ಕೂತಿರೋ ಇವರ ಹೆಸರು ಅರುಣ್ ರಂಗರಾಜನ್. ಕಲಬುರಗಿಯಲ್ಲಿ ಆಂತರಿಕ‌ ಭದ್ರತಾ ವಿಭಾಗದ ಎಸ್​​ಪಿಯಾಗಿ ಕಾರ್ಯನಿರ್ವಹಿಸ್ತಿದ್ದಾರೆ. ಆದ್ರೆ, ಕೆಲ ವರ್ಷಗಳ ಹಿಂದಷ್ಟೇ IPS ಅಧಿಕಾರಿ ಇಲಾಕಿಯಾ ಕರುಣಾಕರನ್​ ಜೊತೆ ಲವ್ ಆಗಿ ಇಬ್ರೂ ಪ್ರೀತಿಸಿ ಮದ್ವೆಯಾಗಿದ್ರಂತೆ. ಬಳಿಕ ಪ್ರೀತಿಗೆ ಸಾಕ್ಷಿ ಎಂಬಂತೆ ಒಂದು ಮುದ್ದಾದ ಮಗು ಕೂಡ ಆಗಿದೆ.

ಆದ್ರೆ, ಸಂಸಾರದಲ್ಲಿ ಮನಸ್ತಾಪ ಮೂಡಿ ಡೈವೋರ್ಸ್ ಪಡೆದಿದ್ರಂತೆ. ಆದ್ರೀಗ, ಬೆಂಗಳೂರಿನ ವಸಂತನಗರದಲ್ಲಿರೋ VIP ಭದ್ರತಾ ವಿಭಾಗದ ಡಿಸಿಪಿ, ಮಾಜಿ ಪತ್ನಿ ಇಲಾಕಿಯಾರ ಸರ್ಕಾರಿ ನಿವಾಸದೆದುರು ಅಹೋರಾತ್ರಿ ಧರಣಿ ಕುಳಿತಿದ್ರು. ಕೊನೆಗೆ ಪೊಲೀಸರು ಎಸ್‌ಪಿ ಅರುಣ್ ರಂಗರಾಜನ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ರಿಗೂ ಡೈವೋರ್ಸ್​​ ಆದ ಬಳಿಕ ಐಪಿಎಸ್ ಅಧಿಕಾರಿ ಅರುಣ್​​​ ರಂಗರಾಜನ್ ಛತ್ತೀಸ್​ಘಡ್ ವರ್ಗಾವಣೆ ಆಗಿದ್ರಂತೆ. ಅದ್ಯಾವಾಗ ಚಿತ್ರದುರ್ಗಕ್ಕೆ ವರ್ಗಾವಣೆ ಆಗಿ ಬಂದ್ರೋ ಮತ್ತೆ ಇಲಾಕಿಯಾ ಜೊತೆ ಬಾಂಧವ್ಯ ಬೆಳೆದಿತ್ತಂತೆ.

ಇದಾದ ಬಳಿಕ ಅರುಣ್ ಬಳ್ಳಾರಿಯಲ್ಲಿ ಎಸ್​ಪಿಯಾಗಿ ಕಾರ್ಯನಿರ್ವಹಿಸೋ ವೇಳೆ ಮತ್ತೊಂದು ಮಗು ಜನಿಸಿದೆ. ಹೀಗೆ ಆಗಿದೆಲ್ಲಾ ಆಯ್ತು, ನಮ್ಮ ಸಂಸಾರ ಆನಂದ ಸಾಗರ ಅಂತ ಬದುಕೋಣ ಅಂತ ಅರುಣ್ ಅಂದ್ಕೊಂಡಿದ್ದಾರೆ.

ಆದ್ರೆ, ಮರುಮದುವೆಗೆ ಐಪಿಎಸ್ ಅಧಿಕಾರಿ ಇಲಾಕಿಯಾ ಸಮ್ಮತಿ ನೀಡ್ತಿಲ್ಲ. ಮನೆಗೂ ಬರೋಕು ಬಿಡ್ತಿಲ್ಲ. ಮಕ್ಕಳನ್ನೂ ಭೇಟಿಯಾಗಲು ಅವಕಾಶ ನೀಡ್ತಿಲ್ಲ ಅಂತಾ ಅರುಣ್ ರಂಗರಾಜನ್ ಗಂಭೀರ ಆರೋಪ ಮಾಡಿದ್ರು.

ಇದೀಗ ಪತ್ನಿ, ಮಕ್ಕಳನ್ನ ಭೇಟಿಯಾಗದೆ ಮಾನಸಿಕವಾಗಿ ನೊಂದಿರೋ IPS​ ಅಧಿಕಾರಿ ನ್ಯಾಯಕ್ಕಾಗಿ ಮಾಜಿ ಪತ್ನಿ ಮನೆ ಮುಂದೆ ಧರಣಿ ಕೂತಿದ್ರು. ಒಟ್ನಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡೋ ಐಪಿಎಸ್​ ಅಧಿಕಾರಿ ಕುಟುಂಬ ಕಲಹ ಬೀದಿಗೆ ಬಂದಿರೋದು ಖಾಕಿ ಪಡೆ ಶಾಕ್ ಆಗಿದೆ.

Published On - 7:41 am, Mon, 10 February 20

ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್