ಜೈಲಿನಲ್ಲಿ ಕಟ್ಟುನಿಟ್ಟು: ತಂಬಾಕು ಕೊಡುವಂತೆ ಜಡ್ಜ್​ ಮುಂದೆಯೇ ಬೇಡಿಕೆ ಇಟ್ಟ ಕೈದಿಗಳು

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ವಿಚಾರ ಇಡೀ ರಾಜ್ಯದಲ್ಲಿ ‌ಸಂಚಲನ ಸೃಷ್ಟಿಸಿದೆ. ಸರ್ಕಾರಕ್ಕೆ ಇದು ದೊಡ್ಡ ಮುಜುಗರವಾಗಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಕಾರಾಗೃಹ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಪರಿಣಾಮ ಕೈದಿಗಳಿಗೆ ತಟ್ಟಿದ್ದು, ಜೈಲಿನಲ್ಲಿ ತಂಬಾಕು ಕೊಡುವಂತೆ ಜಡ್ಜ್​ಗೆ ಮನವಿ ಮಾಡಿದ್ದಾರೆ.

ಜೈಲಿನಲ್ಲಿ ಕಟ್ಟುನಿಟ್ಟು: ತಂಬಾಕು ಕೊಡುವಂತೆ ಜಡ್ಜ್​ ಮುಂದೆಯೇ ಬೇಡಿಕೆ ಇಟ್ಟ ಕೈದಿಗಳು
ಜೈಲಿನ ಕಟ್ಟುನಿಟ್ಟು: ತಂಬಾಕು ಕೊಡುವಂತೆ ಜಡ್ಜ್​ ಮುಂದೆಯೇ ಬೇಡಿಕೆ ಇಟ್ಟ ಕೈದಿಗಳು
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 02, 2024 | 7:05 PM

ಕಾರವಾರ, ಸೆಪ್ಟೆಂಬರ್​​ 02: ನಟ ದರ್ಶನಗೆ (Darshan) ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗಿದೆ ಎಂಬ ಫೋಟೋ, ವಿಡಿಯೋ ವೈರಲ್​ ​ಆಗುತ್ತಿದ್ದಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಕೈದಿಗಳಿಗೆ (Prisoners) ಭಾರಿ ಕಷ್ಟವಾದಂತಾಗಿದೆ. ನಿನ್ನೆ  ಬೆಳಗಾವಿಯ ಹಿಂಡಲಗಾ ಜೈಲಿನ ಖೈದಿಗಳು ವಿಶೇಷ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಮಾಡಿದ್ದರು. ಇದೀಗ  ಜೈಲಿನಲ್ಲಿ ತಂಬಾಕು ಕೊಡುವಂತೆ ನ್ಯಾಯಾಧೀಶರ ಬಳಿ ಕೈದಿಗಳು ಮನವಿ ಮಾಡಿದ್ದಾರೆ.

ಅಗಸ್ಟ್ 29 ರಂದು ಕಾರವಾರ ಜಿಲ್ಲಾ ಕಾರಗೃಹಕ್ಕೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಜೆಎಂ ನ್ಯಾಯಾಧೀಶರು ಭೇಟಿ ನೀಡಿದ್ದರು. ಈ ವೇಳೆ ಜೈಲಿನಲ್ಲಿ ತಂಬಾಕು ಕೊಡುವಂತೆ ಜಡ್ಜ್​ಗೆ ಕೈದಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ರಾಜಾತಿಥ್ಯದಿಂದ ಕಟ್ಟುನಿಟ್ಟಾದ ಜೈಲುಗಳು​​​: ಹಿಂಡಲಗಾ ಖೈದಿಗಳ ಪ್ರತಿಭಟನೆ

ನಮಗೆ ತಂಬಾಕು ಕೊಡದೆ ಇದ್ದರೆ ಇರೋಕೆ ಕಷ್ಟ ಆಗುತ್ತದೆ. ದಯವಿಟ್ಟು ನಮಗೆ ತಂಬಾಕು ಕೊಡುವಂತೆ ಕೈದಿಗಳು ಪಟ್ಟುಹಿಡಿದಿದ್ದರು. ಇನ್ನು ಆಗಸ್ಟ್ 29ರಂದು ತಂಬಾಕು ಮತ್ತು ಖಾಸಗಿ ಟಿವಿ ಚಾನಲ್ ನೀಡುವಂತೆ ಕೈದಿಗಳು ಧರಣಿ ಮಾಡಿದ್ದರು. ಸುಮಾರು 20ಕ್ಕೂ ಹೆಚ್ಚು ಕೈದಿಗಳಿಂದ ಗಲಾಟೆ ಮಾಡಲಾಗಿತ್ತು. ಈ ಪೈಕಿ ಇಬ್ಬರು ಕೈದಿಗಳು ತಲೆಗೆ ಕಲ್ಲಿನಿಂದ ಹೊಡೆದುಕೊಂಡಿದ್ದರು. ಎರಡು ದಿನಗಳ ಹಿಂದಷ್ಟೇ ಕೈದಿಗಳು ಬೀಡಿ, ಸಿಗರೇಟ್​ಗಾಗಿ ಗಲಾಟೆ ಮಾಡಿದ್ದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಹೆಚ್ಚಾಯ್ತು ಡ್ರಗ್ಸ್ ಹಾವಳಿ; ಆರು ತಿಂಗಳಲ್ಲಿ ನಗರದಲ್ಲಿ ಸಿಕ್ಕ ಗಾಂಜಾ ಎಷ್ಟು?

ಜೈಲಿನಲ್ಲಿ ಸಿಗುತ್ತಿದ್ದ ಬಿಡಿ, ಸಿಗರೇಟ್ ಕೂಡ ಇದೀಗ ಬಂದ್ ಮಾಡಲಾಗಿದೆ. ಇದರ ಪರಿಣಾಮದಿಂದಾಗಿ ನಿನ್ನೆ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳೇ ಇದೇ ಮೊದಲ ಬಾರಿಗೆ ಪ್ರತಿಭಟನೆಗೆ ಇಳಿದಿದ್ದರು. ನಿನ್ನೆ ಬೆಳಗಿನ ಜಾವ ಉಪಹಾರ ಸೇವನೆ ಮಾಡಿಲ್ಲ, ಮಧ್ಯಾಹ್ನದ ಊಟ ಕೂಡ ಮಾಡದೇ ಅಸಹಕಾರ ಚಳುವಳಿ ಆರಂಭಿಸಿದ್ದರು. ಬೀಡಿ, ಸಿಗರೇಟ್ ಕೊಡುವವರೆಗೂ ಉಪಹಾರ, ಊಟ ಮಾಡಲ್ಲ ಎಂದು ಪಟ್ಟು ಹಿಡಿದಿದ್ದರು. ಕೈದಿಗಳ ಬೇಡಿಕೆ ಕೇಳಿ ಜೈಲಧಿಕಾರಿಗಳಿಗೆ ತಲೆ ನೋವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:37 pm, Mon, 2 September 24

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ