ಶ್ರೀಲಂಕಾದಲ್ಲಿ ಕ್ಯಾಸಿನೊ: JDS ಶಾಸಕ ಸುರೇಶ್​ ಗೌಡ ಕೊಟ್ರು ಅದ್ಭುತ ಐಡಿಯಾ!

ಶ್ರೀಲಂಕಾದಲ್ಲಿ ಕ್ಯಾಸಿನೊ: JDS ಶಾಸಕ ಸುರೇಶ್​ ಗೌಡ ಕೊಟ್ರು ಅದ್ಭುತ ಐಡಿಯಾ!

ಮಂಡ್ಯ: ಡ್ರಗ್ಸ್ ಪ್ರಕರಣ ಸಂಬಂಧ ನಾಗಮಂಗಲದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ‌ ಸುರೇಶ್ ಗೌಡ ಕರ್ನಾಟಕದ ದುಡ್ಡೆಲ್ಲಾ ಶ್ರೀಲಂಕಾದ ಕ್ಯಾಸಿನೋಗೆ ಹೋಗ್ತಿದೆ ಎಂದಿದ್ದಾರೆ. ಕ್ಯಾಸಿನೋನಾ ಕರ್ನಾಟಕದಲ್ಲೇ ಒಪನ್ ಮಾಡಿ.. ನಮ್ಮ ದುಡ್ಡು ನಮ್ಮಲ್ಲೆ ಇರಲಿ ಕರ್ನಾಟಕದಲ್ಲಿ ಯಾರ್ ಯಾರು ಹೆಚ್ಚಿಗೆ ದುಡ್ಡು ಮಾಡಿದ್ದಾರೆ ಅವ್ರೆಲ್ಲರೂ ಕ್ಯಾಸಿನೋಗೆ ಹೋಗಿ ದುಡ್ಡು ಕಳೆಯುತ್ತಿದ್ದಾರೆ. ಕ್ಯಾಸಿನೋನಾ ಕರ್ನಾಟಕದಲ್ಲೇ ಒಪನ್ ಮಾಡಿ ನಮ್ಮ ದುಡ್ಡು ನಮ್ಮಲ್ಲೆ ಇರಲಿ ಎಂದು ಸರ್ಕಾರಕ್ಕೆ ಸಲಹೆ ಕೊಡಬೇಕೆಂದಿದ್ದೇನೆ ಎಂದು ಹಾಸ್ಯಮಯವಾಗಿ ಹೇಳಿದ್ರು. ಜಮೀರಣ್ಣ ಒಬ್ಬರೇ ಅಲ್ಲ ಒಂದು ಟೀಂ ಹೋಗುತ್ತೆ […]

Ayesha Banu

| Edited By: sadhu srinath

Sep 16, 2020 | 9:53 AM

ಮಂಡ್ಯ: ಡ್ರಗ್ಸ್ ಪ್ರಕರಣ ಸಂಬಂಧ ನಾಗಮಂಗಲದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ‌ ಸುರೇಶ್ ಗೌಡ ಕರ್ನಾಟಕದ ದುಡ್ಡೆಲ್ಲಾ ಶ್ರೀಲಂಕಾದ ಕ್ಯಾಸಿನೋಗೆ ಹೋಗ್ತಿದೆ ಎಂದಿದ್ದಾರೆ.

ಕ್ಯಾಸಿನೋನಾ ಕರ್ನಾಟಕದಲ್ಲೇ ಒಪನ್ ಮಾಡಿ.. ನಮ್ಮ ದುಡ್ಡು ನಮ್ಮಲ್ಲೆ ಇರಲಿ ಕರ್ನಾಟಕದಲ್ಲಿ ಯಾರ್ ಯಾರು ಹೆಚ್ಚಿಗೆ ದುಡ್ಡು ಮಾಡಿದ್ದಾರೆ ಅವ್ರೆಲ್ಲರೂ ಕ್ಯಾಸಿನೋಗೆ ಹೋಗಿ ದುಡ್ಡು ಕಳೆಯುತ್ತಿದ್ದಾರೆ. ಕ್ಯಾಸಿನೋನಾ ಕರ್ನಾಟಕದಲ್ಲೇ ಒಪನ್ ಮಾಡಿ ನಮ್ಮ ದುಡ್ಡು ನಮ್ಮಲ್ಲೆ ಇರಲಿ ಎಂದು ಸರ್ಕಾರಕ್ಕೆ ಸಲಹೆ ಕೊಡಬೇಕೆಂದಿದ್ದೇನೆ ಎಂದು ಹಾಸ್ಯಮಯವಾಗಿ ಹೇಳಿದ್ರು.

ಜಮೀರಣ್ಣ ಒಬ್ಬರೇ ಅಲ್ಲ ಒಂದು ಟೀಂ ಹೋಗುತ್ತೆ ಕ್ಯಾಸಿನೋಗೆ. ಎಲ್ಲರ ಪಾಸ್‌ಪೋರ್ಟ್ ತೆಗೆದು ನೋಡಿದ್ರೆ ಎಲ್ಲಾ ಮಾಹಿತಿ ಸಿಕ್ಕಿಬಿಡುತ್ತೆ. ದುಡ್ಡೊಂದಿದ್ದರೆ ಪ್ರಪಂಚದಲ್ಲಿ ಸಿಗುವ ಎಲ್ಲಾ ವಸ್ತುಗಳು ಕ್ಯಾಸಿನೋದಲ್ಲೆ ಸಿಗುತ್ತೆ. ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರ ತನ್ನ ತಪ್ಪುಗಳನ್ನ ಮುಚ್ಚಿಕೊಳ್ಳಲು ಕೆಜಿ ಡಿಜೆ ಹಳ್ಳಿ ಅಂತ ಶುರು ಮಾಡಿ ಅದು ಮುಗಿದ ಬಳಿಕ ಈಗ ಡ್ರಗ್ ವಿಚಾರ ಶುರು ಮಾಡಿದ್ದಾರೆ.

ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು. ರಾಜ್ಯದಲ್ಲಿ ಕಷ್ಟಕರ ಸಮಸ್ಯೆಗಳಿವೆ ಆದ್ರೆ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗ್ತಿದೆ. ಡ್ರಗ್ ದಂಧೆ ಇರೋದು ಪೊಲೀಸರಿಗೆ ಗೊತ್ತಿರಲಿಲ್ವ ಎಂದು ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ಜೆಡಿಎಸ್ ಬಿಜೆಪಿ ಜಮೀರ್ ಟಾರ್ಗೆಟ್ ಮಾಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸುರೇಶ್ ಗೌಡ ನಾವು ಕಾಂಗ್ರೆಸ್ ಪರ ಇದ್ದು ಸರ್ಕಾರ ಮಾಡಿದ್ದವರು ನಾವ್ಯಾಕೆ ಜಮೀರವ್ರನ್ನ ಟಾರ್ಗೆಟ್ ಮಾಡ್ತೀವಿ, ಇದೆಲ್ಲಾ ಊಹಾಪೋಹಗಳು ಎಂದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada