ಅಗಲಿದ ಮಾಲೀಕನ ದಾರಿ ಕಾಯುತ್ತಾ ಕುಳಿತ ಮೂಕಜೀವಿಗಳ ಸ್ವಾಮಿನಿಷ್ಠೆ

ಅಗಲಿದ ಮಾಲೀಕನ ದಾರಿ ಕಾಯುತ್ತಾ ಕುಳಿತ ಮೂಕಜೀವಿಗಳ ಸ್ವಾಮಿನಿಷ್ಠೆ

ಬೆಳಗಾವಿ: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ ಆತನ ಸಂಬಂಧಿಕರು ದುಃಖದಲ್ಲಿ ಎರಡ್ಮೂರು ದಿನ ಅತ್ತು ನಾಲ್ಕನೇ ದಿನಕ್ಕೆ ಸುಮ್ಮನಾಗುತ್ತಾರೆ. ಆದರೆ ಇಲ್ಲಿ ಎರಡು ಮೂಕಜೀವಿಗಳು ತನ್ನ ಮಾಲೀಕನ ಅಕಾಲಿಕ ನಿಧನದ ಬಳಿಕ ಊಟ ನೀರು ತೊರೆದು ಕೂತಿದ್ದಾರೆ. ಮ‌ನೆ ಮಾಲೀಕ ತೀರಿ ಹೋಗಿ 8 ದಿನ ಕಳೆದರೂ ಸಹ ತುತ್ತು ಅನ್ನವನ್ನು ಮುಟ್ಟದೆ ಮೂಕರೋಧನೆ ಮಾಡುತ್ತಿವೆ. ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಶಂಕರಪ್ಪ, ಬೀದಿಯಲ್ಲಿ ಅಲೆದಾಡಿಕೊಂಡಿದ್ದ ನಾಯಿ ಹಾಗೂ ಕೋತಿಯನ್ನ ಒಂದು […]

KUSHAL V

|

Sep 15, 2020 | 7:23 PM

ಬೆಳಗಾವಿ: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ ಆತನ ಸಂಬಂಧಿಕರು ದುಃಖದಲ್ಲಿ ಎರಡ್ಮೂರು ದಿನ ಅತ್ತು ನಾಲ್ಕನೇ ದಿನಕ್ಕೆ ಸುಮ್ಮನಾಗುತ್ತಾರೆ. ಆದರೆ ಇಲ್ಲಿ ಎರಡು ಮೂಕಜೀವಿಗಳು ತನ್ನ ಮಾಲೀಕನ ಅಕಾಲಿಕ ನಿಧನದ ಬಳಿಕ ಊಟ ನೀರು ತೊರೆದು ಕೂತಿದ್ದಾರೆ. ಮ‌ನೆ ಮಾಲೀಕ ತೀರಿ ಹೋಗಿ 8 ದಿನ ಕಳೆದರೂ ಸಹ ತುತ್ತು ಅನ್ನವನ್ನು ಮುಟ್ಟದೆ ಮೂಕರೋಧನೆ ಮಾಡುತ್ತಿವೆ.

ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಶಂಕರಪ್ಪ, ಬೀದಿಯಲ್ಲಿ ಅಲೆದಾಡಿಕೊಂಡಿದ್ದ ನಾಯಿ ಹಾಗೂ ಕೋತಿಯನ್ನ ಒಂದು ದಿನ ಮನೆಗೆ ಕರೆತಂದ್ರು. ನಾಯಿಗೆ ಕಡ್ಡಿ ಅಂತಲೂ, ಕೋತಿಗೆ ರಾಮು ಅಂತಾ ಹೆಸರಿಟ್ಟು ಎರಡು ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ಸಾಕ್ತಿದ್ರು. ಅವರು ಎಲ್ಲೇ ಹೋಗಲಿ ಇವರೆಡು ಜಂಟಿಯಾಗಿ ಅವರ ಹಿಂದೆ ಹೋಗ್ತಾಯಿದ್ವು. ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ರೂ, ಯಜಮಾನ ಕೊಟ್ಟ ತಿಂಡಿ ಮಾತ್ರ ತಿನ್ನುತ್ತಿದ್ವು.

ಆದ್ರೆ ಕಳೆದ ಎಂಟು ದಿನಗಳ ಹಿಂದೆ ಶಂಕರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಯಜಮಾನನ ಸಾವಿನಿಂದ ಶ್ವಾನ ಹಾಗೂ ಕೋತಿ ಶೋಕಸಾಗರದಲ್ಲಿ ಮುಳುಗಿವೆ. 8 ದಿನಗಳಿಂದ ಆಹಾರ ಸೇವಿಸದೆ ಯಜಮಾನ ಬಂದೇ ಬರ್ತಾನೆ ಅಂತಾ ಕಾಯುತ್ತಿವೆ. ಶಂಕರಪ್ಪ ಎಲ್ಲೇ ಹೋದರೂ ತಮ್ಮ ಜೊತೆಗೆ ಬರುತ್ತಿದ್ದ ಕಡ್ಡಿ ಹಾಗೂ ರಾಮುವನ್ನು ತುಂಬಾ ಪ್ರೀತಿಯಿಂದ ಸಾಕಿದ್ರು. ತಾನು ಮಲಗುವ ಕೋಣೆಯೊಳಗೂ ಸಹ ಬಿಟ್ಟುಕೊಳ್ಳುತ್ತಿದ್ದ ಶಂಕರಪ್ಪನಿಗೆ ಅವುಗಳು ನಿಜವಾದ ಸ್ನೇಹಿತರಾಗಿದ್ವು. ಅಷ್ಟೇ ಅಲ್ಲ, ಶಂಕರಪ್ಪ ತನ್ನ ಕಿರಾಣಿ ಅಂಗಡಿ ಮುಂಭಾಗದಲ್ಲೂ ಮೂರ್ನಾಲ್ಕು ಶ್ವಾನಗಳನ್ನ ಸಾಕಿದ್ರು. ಇದೀಗ ಶಂಕರಪ್ಪ ಕಣ್ಮುಚ್ಚಿದ ಬಳಿಕ ಅವರ ಸಾಕು ಪ್ರಾಣಿಗಳು ಊಟ ಸಹ ಮಾಡದೇ ಮೂಕವೇದನೆ ಅನುಭವಿಸ್ತಿವೆ.

ಮನುಷ್ಯ ತೀರಿ ಹೋದ ಮೂರೇ ದಿನಕ್ಕೆ ಹಾಲುತುಪ್ಪ ಬಿಟ್ಟು ಕೈತೊಳೆದುಕೊಳ್ಳುವ ಮನುಷ್ಯ ಸಂಬಂಧಗಳ ಮಧ್ಯೆ ಈ ಶ್ವಾನ ಹಾಗೂ ಕೋತಿ ಪಡುತ್ತಿರುವ ನೋವು, ತೋರುತ್ತಿರುವ ಸ್ವಾಮಿನಿಷ್ಠೆ ಎಂಥ ಕಲ್ಲುಹೃದಯವನ್ನು ಸಹ ಕರಗಿಸಿ ಬಿಡುತ್ತದೆ. -ಸಹದೇವ ಮಾನೆ

Follow us on

Related Stories

Most Read Stories

Click on your DTH Provider to Add TV9 Kannada