AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಂಪತಿ ಕಲಹಕ್ಕೆ 4 ವರ್ಷ ಮಗು ಬಲಿ: ಮಗನನ್ನೇ ಕೊಂದು ಡ್ಯಾಂಗೆ ಬಿಸಾಡಿದ್ದ ತಂದೆ ಅರೆಸ್ಟ್​​

Kalaburagi Father kills son: ಕಲಬುರಗಿಯಲ್ಲಿ ಹೃದಯ ವಿದ್ರಾವಕ ಘಟನೆವೊಂದು ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ತನ್ನ 4 ವರ್ಷದ ಮಗನನ್ನು ನಾಗರಾಳ ಜಲಾಶಯಕ್ಕೆ ನೂಕಿ ತಂದೆ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಸದ್ಯ ಚಿಂಚೋಳಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ದಂಪತಿ ಕಲಹಕ್ಕೆ 4 ವರ್ಷ ಮಗು ಬಲಿ: ಮಗನನ್ನೇ ಕೊಂದು ಡ್ಯಾಂಗೆ ಬಿಸಾಡಿದ್ದ ತಂದೆ ಅರೆಸ್ಟ್​​
ಸೋಮರಾವ್​​ ಹೂಗಾರ್​Image Credit source: tv9 kannada
ದತ್ತಾತ್ರೇಯ ಪಾಟೀಲ್​
| Edited By: |

Updated on: Aug 28, 2026 | 3:54 PM

Share

ಕಲಬುರಗಿ, ಆಗಸ್ಟ್​ 28: ಗಂಡ-ಹೆಂಡತಿ ಮಧ್ಯೆ ಕೂಸು ಬಡವಾಯಿತು ಎಂಬ ಗಾದೆ ಮಾತೊಂದಿದೆ. ಆದರೆ  ಗಂಡ-ಹೆಂಡತಿ ಜಗಳಕ್ಕೆ‌ ಇಲ್ಲಿ ನಾಲ್ಕು ವರ್ಷದ ಗಂಡು ಮಗುವೊಂದು ಸಾವನ್ನಪ್ಪಿದೆ (Kill). ಪತ್ನಿ ಜೊತೆಗಿನ ಕೌಟುಂಬಿಕ ಕಲಹಕ್ಕೆ ತನ್ನ ಕರುಳ ಕುಡಿಯನ್ನೇ ತಂದೆ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ (kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ.

ನಡೆದಿದ್ದೇನು?

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಲಿನ ಹಸರಗುಂಡಗಿ ಗ್ರಾಮದ ನಿವಾಸಿ ಸೋಮರಾವ್ ಹೂಗಾರ್  ತನ್ನ ನಾಲ್ಕು ವರ್ಷದ ಗುಂಡೇಶ್​​​ ನನ್ನು ಕೊಲೆ ಮಾಡಿರುವ ತಂದೆ. ಅಷ್ಟಕ್ಕೂ ಸೋಮರಾವ್ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದ ಕಲ್ಪನಾ ಅವರೊಂದಿಗೆ ಮದುವೆ ಆಗಿದ್ದರು. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ದಂಪತಿ ಮಧ್ಯೆ ಕೌಟುಂಬಿಕ ಕಲಹ ಉಂಟಾಗಿತ್ತು. ಹೀಗಾಗಿ ಪದೇ ಪದೇ ಪತ್ನಿಯ ಜೊತೆ ಜಗಳ ತೆಗೆಯುವುದು ಮತ್ತು ದೈಹಿಕವಾಗಿ ಹಲ್ಲೆ‌ ಮಾಡುತ್ತಿದ್ದನಂತೆ.

ಇದನ್ನೂ ಓದಿ: ವಿಜಯಪುರದ ಭೂತನಾಳ ಕೆರೆಯಲ್ಲಿ 6 ಶವ ಪತ್ತೆ ಕೇಸ್​​: ತಾಯಿ ಮತ್ತು ಮಕ್ಕಳ ಸಾವಿಗೆ ಕಾರಣ ರಿವೀಲ್​​

ಗಂಡಿನ ಈ ವರ್ತನೆಗೆ ಬೇಸತ್ತ ಪತ್ನಿ ಕಲ್ಪನಾ, ಗಂಡನ ಮನೆಯಾದ ದೋಟಿಕೋಳ ಗ್ರಾಮವನ್ನ ತೊರೆದು ತನ್ನ ತವರು ಮನೆಗೆ ಬಂದಿದ್ದರು. ಅತ್ತ ಪತ್ನಿ ತವರು ಮಗೆ ಹೋಗುತ್ತಿದ್ದಂತೆ ಸೋಮರಾವ್ ಮತ್ತಷ್ಟು ಕೋಪಗೊಂಡದ್ದರು. ಕಳೆದ ಮೂರು ದಿನಗಳ ಹಿಂದೆ ಪತ್ನಿ ಮನೆಗೆ ಬಂದಿದ್ದು, ಎಲ್ಲರೊಂದಿಗೆ ಚೆನ್ನಾಗಿದ್ದರು. ಅಲ್ಲದೇ ತನ್ನ ಮಗುವನ್ನ ಖುಷಿಯಿಂದಲೇ ಆಟವಾಡಿಸುತ್ತಿದ್ದರು. ಹೀಗಾಗಿ ಎಲ್ಲರೂ ಆತನನ್ನ ನಂಬಿದ್ದರು.‌ ಆದರೆ ಆತ ನಾಟಕವಾಡುತ್ತಿದ್ದಾನೆ ಎನ್ನೋದು ಗೊತ್ತಾಗಿರಲಿಲ್ಲ.

ಮಗವನ್ನ ಕೊಂದು ಡ್ಯಾಂಗೆ ಬಿಸಾಡಿದ್ದ ತಂದೆ ಅರೆಸ್ಟ್​​

ಹೀಗಾಗಿ ಮಗುವನ್ನ ಆಟವಾಡೋಕೆ ಕರೆದುಕೊಂಡು ಹೋಗುತ್ತೇನೆ ಅಂತ ಕರೆದುಕೊಂಡು ಹೋಗಿದ್ದಾರೆ. ಸಮೀಪದ ನಾಗರಾಳ ಜಲಾಶಯದ ಹಿನ್ನಿರಿನಲ್ಲಿ ಮಗುವನ್ನ ನೂಕಿ ಕೊಂದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಂಚೋಳಿ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಇನ್ನು ಹಸರಗುಂಡಗಿ ಗ್ರಾಮದ ಮಡಿವಾಳಪ್ಪ ಹೂಗಾರ್ ಹಾಗೂ ಕರುಣಾದೇವಿ ಎನ್ನುವವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರಲ್ಲಿ ಎರಡನೇ ಪುತ್ರಿ ಕಲ್ಪಾನಾರನ್ನು ಸೋಮರಾವ್​​ಗೆ ಮದುವೆ ಮಾಡಿಕೊಡಲಾಗಿತ್ತು. ಅಲ್ಲದೇ ತಮಗೆ ಗಂಡು ಮಕ್ಕಳಿಲ್ಲ ಎಂಬ ಕಾರಣಕ್ಕೆ ಸೋಮರಾವ್​​​ನನ್ನ ಮನೆ ಅಳಿಯನ್ನಾಗಿ ಮಾಡಿಕೊಂಡಿದ್ದರು.‌ ಮನೆ ಅಳಿಯನಾಗಿ ಎಲ್ಲವನ್ನ‌ ನೋಡಿಕೊಂಡು ಹೋಗುತ್ತಾರೆ ಎಂದು ತಿಳಿದುಕೊಂಡಿದ್ದರು. ಆದರೆ ಕ್ರಮೇಣ ದಂಪತಿ ಮಧ್ಯೆ ಬಿರುಕು ನೋಡಿದೆ.

ಗಂಡನ ಉಪಟಳ ತಾಳದೆ ತವರು ಮನೆ ಸೇರಿದ್ದ ಪತ್ನಿ

ಇನ್ನು ಇತ್ತೀಚೆಗೆ ಸೋಮರಾವ್​​ ಕಲ್ಪಾನಾರನ್ನು ತವರು ಮನೆಯಿಂದ ಕರೆದುಕೊಂಡು ಹೋಗಿದ್ದರು. ಅಲ್ಲಿಯೂ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು. ಹೀಗಾಗಿ ಗಂಡನ ಉಪಟಳ ತಾಳದೆ ಪತ್ನಿ ಕಲ್ಪನಾ ಕಳೆದ ಕೆಲ ದಿನಗಳ ಹಿಂದಷ್ಟೆ ತವರು ಮನೆಗೆ ಬಂದಿದ್ದಳು.‌ ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಗಂಡ, ಪತ್ನಿ ಮೇಲಿನ ಕೋಪದಿಂದ ಮಗುವನ್ನು ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ವಿಜಯಪುರ: ಐತಿಹಾಸಿಕ ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ!

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಂಚೋಳಿ ಪೊಲೀಸರು ತನೀಖೆ ಮುಂದುವರೆಸಿದ್ದಾರೆ. ಪತ್ನಿಯ ಜೊತೆ ಯಾವ ಕಾರಣಕ್ಕೆ ಕಲಹ ಉಂಟಾಗಿತ್ತು ಎನ್ನುವ ಕುರಿತು ತನಿಖೆ ನಡೆಸಿದ್ದಾರೆ. ಒಟ್ಟಿನಲ್ಲಿ ಗಂಡ ಹೆಂಡತಿ ಕಲಹಕ್ಕೆ ಕರುಳ ಕುಡಿಯನ್ನೇ ಕೊಲೆ ಮಾಡಿದ್ದು ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us