
ಬೆಂಗಳೂರು, ಮಾರ್ಚ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ ತನ್ನ ಗಾತ್ರದಲ್ಲೂ ದಾಖಲೆ ಮಾಡಿದೆ. 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಇದಾಗಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಇದಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆಂದೇ 50,000 ಕೋಟಿ ರೂಗೂ ಹೆಚ್ಚು ಹಣವನ್ನು ಮೀಸಲಿರಿಸಲಾಗಿದೆ. ಅದರ ಜೊತೆ ಜೊತೆಗೆ ಇತರ ಅಭಿವೃದ್ದಿ ಯೋಜನೆಗಳಿಗೂ ಹಣದ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಇದೇ ವೇಳೆ ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ರೂನಷ್ಟಿದೆ. ಸರ್ಕಾರಕ್ಕೆ ಎಲ್ಲೆಲ್ಲಿಂದ ಆದಾಯ ಮತ್ತು ಹಣ ಹರಿದುಬರುತ್ತದೆ, ಯಾವ್ಯಾವುದಕ್ಕೆ ಆ ಹಣ ವೆಚ್ಚವಾಗುತ್ತದೆ ಎನ್ನುವ ವಿವರ ಇಲ್ಲಿದೆ…
ಒಟ್ಟು ಬಜೆಟ್ ಗಾತ್ರ: 4,09,549 ಕೋಟಿ ರೂ
ಒಟ್ಟು ವ್ಯಯ (ಎಕ್ಸ್ಪೆಂಡಿಚರ್): 4,09,549 ಕೋಟಿ ರೂ
ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ಸಿಂಹಪಾಲು ಅನುದಾನ: ಯಾವ ಇಲಾಖೆ ಎಷ್ಟೆಷ್ಟು ಸಿಕ್ತು? ಇಲ್ಲಿದೆ ವಿವರ
ಒಟ್ಟು ರೆವಿನ್ಯೂ ರೆಸಿಪ್ಟ್: 2,92,477 ಕೋಟಿ ರೂ
ಬಂಡವಾಳ ಸ್ವೀಕೃತಿ: 1,16,170 ಕೋಟಿ ರೂ
ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ಯೂನಿವರ್ಸಿಟಿ ಎಂದು ಮರುನಾಮಕರಣ
ಕರ್ನಾಟಕ ಮೊದಲಿಂದಲೂ ಹಣಕಾಸು ಶಿಸ್ತು ಬೆಳೆಸಿಕೊಂಡ ರಾಜ್ಯ. ಸಾಲ ಕೂಡ ತೀರಾ ಹೆಚ್ಚಿಲ್ಲ. ಬಜೆಟ್ನಲ್ಲಿ ಘೋಷಿಸಿದ ಪ್ರಕಾರ ಕರ್ನಾಟಕದ ಸಾಲ 7,64,655 ಕೋಟಿ ರೂ ಇದೆ. ಇದು ರಾಜ್ಯ ಜಿಡಿಪಿಯ ಶೇ. 24.91ರಷ್ಟಿದೆ.
ರಾಜಸ್ವ ಕೊರತೆ ಅಥವಾ ರೆವಿನ್ಯೂ ಡೆಫಿಸಿಟ್ 19,262 ಕೋಟಿ ರೂ ಇದೆ. ಇದು ಜಿಡಿಪಿಯ ಶೇ 0.63ರಷ್ಟಾಗುತ್ತದೆ. ಇನ್ನು, ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫಿಸಿಟ್ 90,428 ಕೋಟಿ ರೂನಷ್ಟಾಗುತ್ತದೆ. ಇದು ಜಿಡಿಪಿಯ ಶೇ. 2.95ರಷ್ಟಾಗುತ್ತದೆ.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ