AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಲತಾಣದಲ್ಲಿ ಜಾತಿವಾರು ಸಮೀಕ್ಷೆ ಸುಳ್ಳು ವರದಿ ವೈರಲ್​​: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ದೂರು

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಹೀಗಿರುವಾಗ ಜಾತಿವಾರು ಸಮೀಕ್ಷೆಯ ಸುಳ್ಳು ಅಂಕಿಅಂಶಗಳನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳುಲಾಗುತ್ತಿದೆ. ಈ ನಿಟ್ಟಿನಲ್ಲಿ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುಂತೆ ಆಯೋಗದ ಕಾರ್ಯದರ್ಶಿಯಿಂದ ದೂರು ನೀಡಲಾಗಿದೆ.

ಜಾಲತಾಣದಲ್ಲಿ ಜಾತಿವಾರು ಸಮೀಕ್ಷೆ ಸುಳ್ಳು ವರದಿ ವೈರಲ್​​: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ದೂರು
ಜಾತಿವಾರು ಸಮೀಕ್ಷೆ
ಗಂಗಾಧರ​ ಬ. ಸಾಬೋಜಿ
|

Updated on: Nov 17, 2025 | 10:46 PM

Share

ಬೆಂಗಳೂರು, ನವೆಂಬರ್​ 17: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ (Karnataka Caste Census) ಸುಳ್ಳು ಅಂಕಿಅಂಶಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್​ ಪ್ರಕರಣ (Criminal case) ದಾಖಲಿಸುವಂತೆ ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ ದಯಾನಂದ್​ ಅವರು ಹೈಗ್ರೌಂಡ್ಸ್​ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟೆಂಬರ್​ 22ರಿಂದ ಪ್ರಾರಂಭಿಸಿ ಅಕ್ಟೋಬರ್​ 31ರವರೆಗೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಸಾರ್ವಜನಿಕರಿಗೆ ಆನ್​​ಲೈನ್​​ ಮೂಲಕ ಪಾಲ್ಗೊಳ್ಳಲು ನವೆಂಬರ್​ 30ರವರೆಗೆ ಅವಕಾಶ ನೀಡಲಾಗಿದೆ. ಅದರಂತೆ ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಜಾತಿ ಸಮೀಕ್ಷೆ ಅವಧಿ ವಿಸ್ತರಣೆ: ಕರ್ನಾಟಕದಾದ್ಯಂತ ಶಾಲಾ ಸಮಯವೂ ಬದಲಾವಣೆ

ಇನ್ನು ಈ ಸಂಬಂಧ ಹೈಕೋರ್ಟ್​ನಲ್ಲಿ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಆಯೋಗವು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಯಾವುದೇ ವ್ಯಕ್ತಿಗೆ ಮಾಹಿತಿಯನ್ನು ಸೋರಿಕೆಯಾಗದಂತೆ ಅಫಿಡವಿಟ್ ಗೌಪ್ಯತೆಯನ್ನು ಕಾಪಾಡಲಾಗುವುದೆಂದು ಸೆಪ್ಟೆಂಬರ್​ 26 ರಂದು ಸಲ್ಲಿಸಲಾಗಿದೆ. ಅದರಂತೆ ಆಯೋಗದ ವತಿಯಿಂದ ಗೌಪ್ಯತೆಯನ್ನು ಕಾಪಾಡಲಾಗಿದೆ.

ಆದಾಗ್ಯೂ ಕೆಲ ವಾಟ್ಸ್​ಆ್ಯಪ್​ ಗ್ರೂಪ್​​ಗಳಲ್ಲಿ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ಲಿಂಗಾಯಿತರು-65 ಲಕ್ಷ, ಒಕ್ಕಲಿಗರು-60 ಲಕ್ಷ, ಕುರುಬರು-45 ಲಕ್ಷ, ಈಡಿಗರು-15 ಲಕ್ಷ, ಪರಿಶಿಷ್ಟ ಪಂಗಡ-40.45 ಲಕ್ಷ, ವಿಶ್ವಕರ್ಮ-15 ಲಕ್ಷ, ಬೆಸ್ತರು 15 ಲಕ್ಷ, ಬ್ರಾಹ್ಮಣರು-14 ಲಕ್ಷ, ಗೊಲ್ಲರು-10 ಲಕ್ಷ, ಮುಸ್ಲಿಮರು-60 ಲಕ್ಷ, ಕ್ರೈಸ್ತರು-12 ಲಕ್ಷ, ಸವಿತಾ ಸಮಾ -5 ಲಕ್ಷ, ಗೊಲ್ಲರು – 10 ಲಕ್ಷ, ಕುಂಬಾರ -5 ಲಕ್ಷ ಮತ್ತು ಮಡಿವಾಳ -6 ಲಕ್ಷ ಇತರ ಎಂದು ಗ್ರೂಪ್​​ಗೆ ಶೇರ್ ಮಾಡಲಾಗಿದೆ.

ಶಿವ ಎನ್ನುವವರನ್ನು ಅವರ ಮೊಬೈಲ್ ನಂಬ‌ರ್ ಮೂಲಕ ಸಂಪರ್ಕಿಸಿದಾಗ ಅವರು ಚಿಕ್ಕಮಗಳೂರಿನವರು  ಎಂದು ಹೇಳಿದ್ದು ಅವರಿಗೆ ಇತರೆ ಮೊಬೈಲ್​​ ನಂಬರ್​ನಿಂದ ವಿಷಯವು ವಾಟ್ಸ್​ಆ್ಯಪ್​ ಮೂಲಕ ಬಂದಿರುತ್ತದೆ ಎಂದು ತಿಳಿಸಿರುತ್ತಾರೆ.

ಇದನ್ನೂ ಓದಿ: ಜಾತಿ ಗಣತಿ ಡೆಡ್​ಲೈನ್ ಅ.7ಕ್ಕೆ ಅಂತ್ಯ: ಅವಧಿ ಮುಂದೂಡುತ್ತಾ ಸರ್ಕಾರ? ಎಲ್ಲೆಲ್ಲಿ ಎಷ್ಟಾಯ್ತು ಸಮೀಕ್ಷೆ? ಮಾಹಿತಿ ಇಲ್ಲಿದೆ

ಹೈಕೋರ್ಟ್ ಆದೇಶದಂತೆ ಆಯೋಗದ ವತಿಯಿಂದ ಸಂಗ್ರಹಿಸಲಾಗುತ್ತಿರುವ ಮಾಹಿತಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಆಯೋಗದ ವಿಶ್ವಾಸಾರ್ಹತೆ ಹಾಗೂ ನಂಬಿಕೆಯನ್ನು ನಿರ್ವಹಿಸುವುದು ಅತಿ ಮುಖ್ಯವಾಗಿದೆ. ಸಮೀಕ್ಷಾ ದತ್ತಾಂಶಗಳನ್ನು ಸಂಗ್ರಹಿಸುವ ಹಂತದಲ್ಲಿರುವಾಗ ಈ ರೀತಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿಯನ್ನು ನೀಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿರುವುದರ ಬಗ್ಗೆ ಹಾಗೂ ವಿಷಯದ ಸತ್ಯತೆಯ ಬಗ್ಗೆ ಪರಿಶೀಲಿಸುವುದು ಅವಶ್ಯವಾಗಿದೆ. ಹಾಗಾಗಿ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡು ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳುವಂತೆ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗಂಗಾಧರ​ ಬ. ಸಾಬೋಜಿ
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ