ಕರ್ನಾಟಕದಲ್ಲಿ ಯಾವ ಜಾತಿಯ ಜನಸಂಖ್ಯೆ ಎಷ್ಟು? ಜಾತಿಗಣತಿಯ ಅಂಕಿ-ಅಂಶ ಬಹಿರಂಗ

| Updated By: ಸುಷ್ಮಾ ಚಕ್ರೆ

Updated on: Apr 12, 2025 | 8:19 PM

ದೇಶಾದ್ಯಂತ ಜಾತಿಗಣತಿಯ ಪರ-ವಿರೋಧದ ಚರ್ಚೆ, ವಾಗ್ವಾದಗಳು ನಡೆಯುತ್ತಿದೆ. ಇದರ ಮಧ್ಯೆ ಕೊನೆಗೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿಯ ವರದಿಯನ್ನು ಮಂಡನೆ ಮಾಡಿದೆ. 50 ಸಂಪುಟವಿರುವ ಈ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಅಥವಾ ಜಾತಿಗಣತಿಯನ್ನು ಏನಿದೆ? ಎಂಬ ಅಂಕಿ-ಅಂಶ ಟಿವಿ9ಗೆ ಲಭ್ಯವಾಗಿದೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಯಾವ ಜಾತಿಯ ಜನಸಂಖ್ಯೆ ಎಷ್ಟು? ಜಾತಿಗಣತಿಯ ಅಂಕಿ-ಅಂಶ ಬಹಿರಂಗ
Dk Shivakumar Siddaramaiah
Follow us on

ಬೆಂಗಳೂರು, ಏಪ್ರಿಲ್ 12: ರಾಜ್ಯ ರಾಜಕೀಯದ ಗೇಮ್ ಚೇಂಜರ್ ಜಾತಿಗಣತಿ (Caste Census) ಕೊನೆಗೂ ಸಂಪುಟದಲ್ಲಿ ಮಂಡನೆ ಆಗಿದೆ. ಈಗ ಆ ವರದಿಯಲ್ಲಿ ಏನಿದೆ? ಎಂಬ ಕುತೂಹಲ ಜನರಿಗೆ ಹೆಚ್ಚಾಗಿದೆ. ಜಾತಿ ಗಣತಿಯ ವರದಿಯಲ್ಲಿ ನೀಡಿರುವ ಕೆಲವು ಮಹತ್ವದ ಶಿಫಾರಸುಗಳ ಬಗ್ಗೆ ಟಿವಿ9ಗೆ ಮಾಹಿತಿ ಲಭ್ಯವಾಗಿದೆ. ಕಾಂತರಾಜು ಅವಧಿಯ ಮಾಹಿತಿ ಆಧರಿಸಿದ ಜಯಪ್ರಕಾಶ್ ಹೆಗ್ಡೆ ನೀಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಲಿಯಾಸ್ ಜಾತಿ ಗಣತಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. ಹಾಗೇ, ಕರ್ನಾಟಕದಲ್ಲಿ (Karnataka) ಯಾವ ಜಾತಿಯ ಜನರು ಎಷ್ಟಿದ್ದಾರೆ? ಎಂಬ ಕುರಿತೂ ಮಾಹಿತಿ ಇಲ್ಲಿದೆ.

ಜಾತಿಗಣತಿ ವರದಿಯ ಅಂಕಿ-ಅಂಶ ಟಿವಿ9ಗೆ ಲಭ್ಯವಾಗಿದೆ. ಕರ್ನಾಟಕ ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆ ಪ್ರಮಾಣದ ಬಗ್ಗೆ ಮಾಹಿತಿ ಇಲ್ಲಿದೆ.

ರಾಜ್ಯದ ಒಟ್ಟೂ ಜಾತಿಗಣತಿ ಸಂಖ್ಯೆ

ಇದನ್ನೂ ಓದಿ
ಹಾಸನದಲ್ಲಿ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ
ಕಾಂಗ್ರೆಸ್ ಪುಢಾರಿಗಳು ನನ್ನನ್ನು ಹೆದರಿಸಿವ ಕೆಲಸ ಮಾಡುತ್ತಿದ್ದಾರೆ: HDK
ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಮಳೆ ಸಾಧ್ಯತೆ
ಹುಬ್ಬಳ್ಳಿ- ಧಾರವಾಡ ಮಧ್ಯೆ ಮೆಟ್ರೋ ಮಾದರಿ ಸಾರಿಗೆ ಯೋಜನೆ ಒಡಂಬಡಿಕೆ

ನಗರ – 2,04,02,006

ಗ್ರಾಮೀಣ – 3,94,12,936

ಒಟ್ಟು – 5,98,14,942

 

ವೀರಶೈವ ಲಿಂಗಾಯತ

ಒಟ್ಟು – 66,35,233

ಶೇ. 11.09

ನಗರ – 16,61862

ಗ್ರಾಮೀಣ – 4973371

 

ಒಕ್ಕಲಿಗರು

ಒಟ್ಟು – 61,68,652

ಶೇ. 10.31

ನಗರ – 16,95,514

ಗ್ರಾಮೀಣ – 44,73,138

 

ಕುರುಬ

ಒಟ್ಟು – 43,72,847

ಶೇ. 7.31

ನಗರ – 7,72,641

ಗ್ರಾಮೀಣ – 36,00,206

 

ಪರಿಶಿಷ್ಟ ಜಾತಿ

ಒಟ್ಟು – 1,09,29,347

ಶೇ.18.27

ನಗರ – 28,47,232

ಗ್ರಾಮೀಣ – 80,82,115

 

ಪರಿಶಿಷ್ಟ ಪಂಗಡ

ಒಟ್ಟು – 42,81,289

ಶೇ. 7.16

ನಗರ – 6,60,209

ಗ್ರಾಮೀಣ – 36,21,080

 

ಮುಸ್ಲಿಂ

ಒಟ್ಟು – 76,99,425

ಶೇ.12.87

ನಗರ – 44,63,030

ಗ್ರಾಮೀಣ – 32,36,395

ಬ್ರಾಹ್ಮಣ:

ಒಟ್ಟು – 15,64,741

ಶೇ.2.61

ನಗರ – 11,27,070

ಗ್ರಾಮೀಣ – 4,37,671

 

ಇದನ್ನೂ ಓದಿ: Karnataka Caste Census: ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್

ಆಯೋಗ ಶಿಫಾರಸುಗಳೇನು?:

ಒಬಿಸಿ ಸಮುದಾಯದ ಶೇ.32ರಷ್ಟು ಮೀಸಲಾತಿಯನ್ನು
ಶೇ.51ಕ್ಕೆ ಹೆಚ್ಚಿಸಲು ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ 5 ವಿಭಾಗಗಳಲ್ಲಿ ವರ್ಗೀಕರಣವಾಗಿದೆ. ಪ್ರವರ್ಗ 1 ಅನ್ನು ಎರಡು ವಿಭಾಗಗಳನ್ನಾಗಿ ಮಾಡಿ ವರ್ಗೀಕರಣ ಮಾಡಲಾಗಿದೆ. 1ಎ ಮತ್ತು 1ಬಿ ಎಂದು ವರ್ಗಿಕರಿಸುವಂತೆ ಶಿಫಾರಸು ಆಗಿದೆ. ಕಾಯಕ, ಕುಲಕಸುಬು ಆಧಾರಿತ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಈ ವರ್ಗೀಕರಣದಲ್ಲಿ ಮನ್ನಣೆ ನೀಡಲಾಗಿದೆ. ಹಾಲಿ ಇರುವ ಪ್ರವರ್ಗ 1ಕ್ಕೆ ಶೇ. 4ರಷ್ಟು ಮೀಸಲಾತಿ ಇದೆ . ಇದನ್ನು 2 ಭಾಗಗಳನ್ನಾಗಿ ಮಾಡಿ 1ಎಗೆ ಶೇ. 6ರಷ್ಟು, 1ಬಿಗೆ ಶೇ. 12ರಷ್ಟು ಮೀಸಲಾತಿಗೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ: ಒಬಿಸಿ ವರ್ಗೀಕರಣದಲ್ಲಿ ಬದಲಾವಣೆ, ಮೀಸಲಾತಿ ಶೇ 51ಕ್ಕೆ ಹೆಚ್ಚಿಸಲು ಜಾತಿ ಗಣತಿ ವರದಿಯಲ್ಲಿ ಶಿಫಾರಸು

ಹಾಗೇ, ಹಾಲಿ 2ಎಗೆ ಇರುವ ಶೇ.15ರಷ್ಟು ಮೀಸಲಾತಿಯನ್ನು ಶೇ.10ಕ್ಕೆ ಇಳಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆದರೆ 2ಬಿ ಅಂದರೆ ಮುಸ್ಲಿಂ ಸಮುದಾಯಕ್ಕಿರುವ ಶೇ. 4ರಷ್ಟು ಮೀಸಲಾತಿಯನ್ನು ಡಬಲ್ ಅಂದರೆ, ಶೇ. 8ಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ. ಹಾಗೇ 3ಎಗಿರುವ ಶೇ. 4ರಷ್ಟು ಮೀಸಲಾತಿಯನ್ನು ಶೇ. 7ಕ್ಕೆ ಏರಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇನ್ನು. ಶೇ. 5ರಷ್ಟಿರುವ 3ಬಿ ಮೀಸಲಾತಿಯನ್ನು ಶೇ. 8ಕ್ಕೆ ಹೆಚ್ಚಿಸುವಂತೆ ಜಾತಿ ಗಣತಿ ವರದಿ ಹೇಳಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Sat, 12 April 25