Karnataka Dams Water Level: ಅ. 31ರವರೆಗೆ ಮಳೆ ಆರ್ಭಟ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Reservoir Water Level Today: ಅಕ್ಟೋಬರ್ 31ರವರೆಗೆ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ಮಲಪ್ರಭಾ ಶೇ. 97, ಘಟಪ್ರಭಾ ಶೇ. 99, ಲಿಂಗನಮಕ್ಕಿ ಶೇ. 92, ಹಾರಂಗಿ ಶೇ. 97, ಕಬಿನಿ ಶೇ. 98, ಆಲಮಟ್ಟಿ ಶೇ. 97, ಕೆಆರ್​ಎಸ್​ ಶೇ. 99ರಷ್ಟು ಭರ್ತಿಯಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.

Karnataka Dams Water Level: ಅ. 31ರವರೆಗೆ ಮಳೆ ಆರ್ಭಟ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Oct 28, 2021 | 7:09 AM

Karnataka Rain: ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಮಳೆಯ ಅಬ್ಬರ ಜೋರಾಗಲಿದೆ. ರಾಜ್ಯದಲ್ಲಿ ಸುರಿದ ಮಳೆಯಿಂದ ಭದ್ರಾ, ತುಂಗಾಭದ್ರಾ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಮೈಸೂರು ಭಾಗದಲ್ಲಿ ಸುರಿದ ಮಳೆಯಿಂದ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲು ಕೇವಲ ಅರ್ಧ ಅಡಿ ಮಾತ್ರ ಬಾಕಿ ಉಳಿದಿದೆ. ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ 11 ವರ್ಷಗಳ ಬಳಿಕ ಅಕ್ಟೋಬರ್‌ನಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ತುಂಬಿ ತುಳುಕುತ್ತಿದೆ. ಮಲಪ್ರಭಾ ಶೇ. 97, ಘಟಪ್ರಭಾ ಶೇ. 99, ಲಿಂಗನಮಕ್ಕಿ ಶೇ. 92, ಹಾರಂಗಿ ಶೇ. 97, ಕಬಿನಿ ಶೇ. 98, ಆಲಮಟ್ಟಿ ಶೇ. 97, ಕೆಆರ್​ಎಸ್​ ಶೇ. 99ರಷ್ಟು ಭರ್ತಿಯಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ  ಬಗ್ಗೆ ಮಾಹಿತಿ ಇಲ್ಲಿದೆ.

ಕೆಆರ್​ಎಸ್​ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 124.80 ಅಡಿ ಇಂದಿನ ನೀರಿನ ಮಟ್ಟ- 124.04 ಅಡಿ ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ ಇಂದಿನ ಒಳಹರಿವು- 13,984 ಕ್ಯೂಸೆಕ್ಸ್​ ಇಂದಿನ ಹೊರಹರಿವು- 3544 ಕ್ಯೂಸೆಕ್ಸ್​​

ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್ ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 18.62 ಟಿಎಂಸಿ ಇಂದಿನ ಒಳಹರಿವು- 0 ಕ್ಯೂಸೆಕ್ಸ್​ ಇಂದಿನ ಹೊರಹರಿವು- 284 ಕ್ಯೂಸೆಕ್ಸ್​​

ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ- 8.24 ಟಿಎಂಸಿ ಇಂದಿನ ಒಳಹರಿವು- 540 ಕ್ಯೂಸೆಕ್ಸ್​ ಇಂದಿನ ಹೊರಹರಿವು- 1291 ಕ್ಯೂಸೆಕ್ಸ್​​

ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 27.14 ಟಿಎಂಸಿ ಇಂದಿನ ಒಳಹರಿವು- 2665 ಕ್ಯೂಸೆಕ್ಸ್​​ ಇಂದಿನ ಹೊರಹರಿವು- 3625 ಕ್ಯೂಸೆಕ್ಸ್​

ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ- 19.13 ಟಿಎಂಸಿ ಇಂದಿನ ಒಳಹರಿವು- 3503 ಕ್ಯೂಸೆಕ್ಸ್​ ಇಂದಿನ ಹೊರಹರಿವು- 2876 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್ ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 138.92 ಟಿಎಂಸಿ ಇಂದಿನ ಒಳಹರಿವು- 3319 ಕ್ಯೂಸೆಕ್ಸ್​ ಇಂದಿನ ಹೊರಹರಿವು- 4368 ಕ್ಯೂಸೆಕ್ಸ್

ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್ ಒಟ್ಟು ಸಾಮರ್ಥ್ಯ: 145.33 ಟಿಎಂಸಿ ಇಂದಿನ ನೀರಿನ ಮಟ್ಟ- 114.27 ಟಿಎಂಸಿ ಇಂದಿನ ಒಳಹರಿವು- 1927 ಕ್ಯೂಸೆಕ್ಸ್​ ಇಂದಿನ ಹೊರಹರಿವು- 1485 ಕ್ಯೂಸೆಕ್ಸ್​​

ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ- 497.71 ಮೀಟರ್ ಒಟ್ಟು ಸಾಮರ್ಥ್ಯ- 100.86 ಟಿಎಂಸಿ ಇಂದಿನ ನೀರಿನ ಮಟ್ಟ- 100.86 ಟಿಎಂಸಿ ಇಂದಿನ ಒಳಹರಿವು- 28,857 ಕ್ಯೂಸೆಕ್ಸ್​ ಇಂದಿನ ಹೊರಹರಿವು- 28,857 ಕ್ಯೂಸೆಕ್ಸ್​

ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 71.54 ಟಿಎಂಸಿ ಇಂದಿನ ಒಳಹರಿವು- 3782 ಕ್ಯೂಸೆಕ್ಸ್​ ಇಂದಿನ ಹೊರಹರಿವು- 3782 ಕ್ಯೂಸೆಕ್ಸ್​​

ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್​ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ- 36.76 ಟಿಎಂಸಿ ಇಂದಿನ ಒಳಹರಿವು- 0 ಕ್ಯೂಸೆಕ್ಸ್​ ಇಂದಿನ ಹೊರಹರಿವು- 994 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್​ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 50.38 ಟಿಎಂಸಿ ಇಂದಿನ ಒಳಹರಿವು- 0 ಕ್ಯೂಸೆಕ್ಸ್​​ ಇಂದಿನ ಹೊರಹರಿವು- 1605 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 119.57 ಟಿಎಂಸಿ ಇಂದಿನ ಒಳಹರಿವು- 0 ಕ್ಯೂಸೆಕ್ಸ್​ ಇಂದಿನ ಹೊರಹರಿವು- 11554 ಕ್ಯೂಸೆಕ್ಸ್

ಇದನ್ನೂ ಓದಿ: Karnataka Dams Water Level: ರಾಜ್ಯದಲ್ಲಿ ಇನ್ನೆರಡು ದಿನ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Weather Today: ಕರ್ನಾಟಕದ 19 ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಮಳೆಯ ಅಬ್ಬರ