ಮತ್ತೆ ಹೆಚ್ಚಾಗಲಿದೆ ಮದ್ಯದ ದರ: ಎಣ್ಣೆ ಪ್ರಿಯಕರಿಗೆ 3ನೇ ಬಾರಿಗೆ ಅಬಕಾರಿ ಇಲಾಖೆ ಶಾಕ್..!
Liquor Price Hike: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಐಎಂಎಲ್ ಗಳ ಮೇಲಿನ ದರವನ್ನು ಹೆಚ್ಚಳ ಮಾಡಿತ್ತು. ಇದೀಗ ಮೂರನೇ ಬಾರಿ ದರ ಹೆಚ್ಚಳ ಮಾಡಲು ಅಬಕಾರಿ ಇಲಾಖೆ ಪ್ಲಾನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಮದ್ಯಪ್ರಿಯರು ಹಾಗೂ ಬಾರ್ ಮಾಲೀಕರು ಆಕ್ರೋಶಗೊಂಡಿದ್ದಾರೆ. ಹಾಗಾದ್ರೆ, ಈ ಬಾರಿ ಎಣ್ಣೆ ರೇಟ್ ಎಷ್ಟು ಹೆಚ್ಚಳವಾಗಲಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮಾರ್ಚ್ 11): ಕರ್ನಾಟಕದಲ್ಲಿ ಮತ್ತೆ ಐಎಂಎಲ್ ಮೇಲಿನ ದರ ಹೆಚ್ಚಳವಾಗಲಿದ್ಯಂತೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಎಣ್ಣೆ ದರ ಹೆಚ್ಚಳ ಮಾಡುವ ಬಗ್ಗೆ ಅಬಕಾರಿ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಕಾರಣ 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಿಂದ 38 ಸಾವಿರದ 500 ಕೋಟಿ ರೂಪಾಯಿ ಟಾರ್ಗೆಟ್ ನೀಡಲಾಗಿತ್ತು. ಕಳೆದ ಬಾರಿಯ ಈ ಟಾರ್ಗೆಟ್‌ನಲ್ಲಿ 36 ಸಾವಿರದ 500 ಕೋಟಿ ರೂಪಾಯಿ ಸಂಗ್ರಹವಾಗಿದೆ. ಆದ್ರೆ, ಈ ಬಾರಿಯ 2025ನೇ ಸಾಲಿನ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂ. ಟಾರ್ಗೆಟ್ ನೀಡಲಾಗಿದೆ. ಅಂದರೆ ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರುಪಾಯಿ ಟಾರ್ಗೆಟ್ ನೀಡಿದ್ದು, ಹೊಸ ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಮತ್ತೆ ದರ ಹೆಚ್ಚಳ ಮಾಡಲು ಪ್ಲಾನ್ ಮಾಡಿದೆ.
ಕಳೆದ ಬಾರಿಗಿಂತ ಈ ವರ್ಷದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅಬಕಾರಿ ಇಲಾಖೆಗೆ ಮೂರೂವರೆ ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹಣೆಯ ಗುರಿ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಮದ್ಯದರ ಏರಿಕೆಯ ಸೂಚನೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಬಜೆಟ್‌ನಲ್ಲಿ ಮದ್ಯದ ದರ ಏರಿಕೆ ಮಾಡಿದ್ರೆ ಪ್ರತಿಭಟನೆಗಳು ನಡೆಯಬಹುದು ಎಂದು ಅರಿತ ಸರ್ಕಾರ ಯಾವುದೇ ಏರಿಕೆ ಮಾಡಿಲ್ಲ. ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿದರೆ ಮಧ್ಯದಲ್ಲಿ ಯಾವಾಗಾದರೂ ಎಣ್ಣೆ ಬೆಲೆ ಏರಿಕೆ ಮಾಡಬಹುದು ಎನ್ನುವುದು ಸರ್ಕಾರದ ಪ್ಲ್ಯಾನ್. ಅದರಂತೆ ಇದೀಗ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ಅಬಕಾರಿ ಇಲಾಖೆ ಮದ್ಯದ ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್: ಬಜೆಟ್ಗೂ ಮೊದಲೇ ಮತ್ತೊಮ್ಮೆ ಬಿಯರ್ ದರ ಏರಿಕೆ..!
ಇನ್ನೂ ಕಡಿಮೆ ದರ ಇರುವ ವಿಸ್ಕಿ, ಬ್ರ್ಯಾಂಡಿ,ರಮ್ ಹಾಗೂ ಜಿನ್ ಮೇಲೆ ದರ ಏರಿಕೆ ಆಗಲಿದ್ಯಂತೆ. ಪ್ರತಿ ಬ್ರ್ಯಾಂಡ್ ಮೇಲೆ 5 ರಿಂದ 20 ರುಪಾಯಿವರೆಗೆ ಹೆಚ್ಚಳವಾದ್ರೆ, 80 ರುಪಾಯಿ ಇರೋದು 100 ರುಪಾಯಿ,90 ರುಪಾಯಿ ಇರೋದು 110 ರುಪಾಯಿ, 100 ರುಪಾಯಿ ಇರೋದು 120 ರುಪಾಯಿ. ಹೀಗೆ ಮಧ್ಯಮ ವರ್ಗದ ಮದ್ಯಪ್ರಿಯರು ಕುಡಿಯುವ ಮದ್ಯದ ದರವನ್ನು ಏರಿಕೆ ಮಾಡಲು ಅಬಕಾರಿ ಇಲಾಖೆ ಚಿಂತನೆ ನಡೆಸಿದ್ಯಂತೆ.
ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿಕೊಂಡರೇ ಕಡಿಮೆ ಬೆಲೆಯ ಮದ್ಯ ನಮ್ಮ ಕರ್ನಾಟಕದಲ್ಲಿ ತುಂಬಾ ಕಡಿಮೆ ಇದೆಯಂತೆ. ಈ ಬಗ್ಗೆ ಮಾತನಾಡಿದ ಮದ್ಯಪ್ರಿಯರು ಹೆಣ್ಣು ಮಕ್ಕಳಿಗೆ ಉಚಿತ ನೀಡಲು ಎಣ್ಣೆ ದರ ಏರಿಕೆ ಮಾಡಿದ್ರೆ ಹೇಗೆ ಎಂದು ಎಣ್ಣೆ ಪ್ರಿಯರು ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿರೋ ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಮತ್ತೊಮ್ಮೆ ಮದ್ಯದ ದರ ಹೆಚ್ಚಳ ಮಾಡಲು ಮುಂದಾಗಿರುವುದು ಎಣ್ಣೆಪ್ರಿಯರ ಆಕ್ರೋಶಕ್ಕೆ ಕಾರಣವಾಗಿರುವುದರಿಂತು ಸುಳ್ಳಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ