Shaurya Awards: ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಮೊತ್ತ ಪರಿಷ್ಕಾರ: ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳ
ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸರ್ಕಾರವು ನೀಡುತ್ತಿದ್ದ ನಗದು ಮೊತ್ತವನ್ನು ಪರಿಷ್ಕರಿಸಲಾಗಿದೆ.
ಬೆಂಗಳೂರು: ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸರ್ಕಾರವು ನೀಡುತ್ತಿದ್ದ ನಗದು ಮೊತ್ತವನ್ನು ಪರಿಷ್ಕರಿಸಲಾಗಿದೆ. ಪರಮವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 25 ಲಕ್ಷ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು ₹ 1.5 ಕೋಟಿಗೆ ಹೆಚ್ಚಿಸಲಾಗಿದೆ. ಮಹಾವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 12 ಲಕ್ಷ ನೀಡಲಾಗುತ್ತಿತ್ತು. ಈ ಮೊತ್ತವನ್ನು ₹ 1 ಕೋಟಿಗೆ ಹೆಚ್ಚಿಸಲಾಗಿದೆ. ಅಶೋಕ ಚಕ್ರ ಪುರಸ್ಕೃತರಿಗೆ ₹ 25 ಲಕ್ಷದಿಂದ ₹ 1.5 ಕೋಟಿ, ಕೀರ್ತಿ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 12 ಲಕ್ಷ ನೀಡಲಾಗುತ್ತಿತ್ತು. ಅದನ್ನು ಈಗ ₹ 1 ಕೋಟಿಗೆ ಹೆಚ್ಚಿಸಲಾಗಿದೆ. ವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 8 ಲಕ್ಷ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು ₹ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಶೌರ್ಯ ಚಕ್ರ ಪುರಸ್ಕೃತರಿಗೆ ನೀಡುತ್ತಿದ್ದ ಮೊತ್ತವನ್ನು ₹ 8 ಲಕ್ಷದಿಂದ ₹ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸೇನಾ ಮೆಡಲ್ ಪುರಸ್ಕೃತರಿಗೆ ಈ ಮೊದಲು ₹ 2 ಲಕ್ಷ ಪುರಸ್ಕಾರ ನೀಡಲಾಗುತ್ತಿತ್ತು. ಈ ಮೊತ್ತವನ್ನು ಈಗ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮೆನ್ಷನ್ ಎನ್ ಡಿಸ್ಪ್ಯಾಚ್ ಪುರಸ್ಕೃತರಿಗೆ ಈ ಮೊದಲು ₹ 2 ಲಕ್ಷ ನೀಡಲಾಗುತ್ತಿತ್ತು. ಈ ಮೊತ್ತವನ್ನು ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಂತೋಷ್ ಬಾಬು ಅವರಿಗೆ ಮಹಾವೀರ ಚಕ್ರ ಗೌರವ ಗಾಲ್ವಾನ್ ಸಂಘರ್ಷದ (Galwan clashes)ವೇಳೆ ತನ್ನ ಕೊನೆಯ ಉಸಿರು ಇರುವವರೆಗೂ ಚೀನಾ ಸೈನಿಕರ ವಿರುದ್ಧ ಹೋರಾಡಿದ ಕರ್ನಲ್ ಬಿಕುಮಲ್ಲ ಸಂತೋಷ್ ಬಾಬು(Col Santosh Babu) ಅವರಿಗೆ ದೇಶದ ಎರಡನೇ ಅತ್ಯುನ್ನತ ಸೇನಾ ಶೌರ್ಯ ಗೌರವವಾದ ಮಹಾವೀರ ಚಕ್ರ (ಮರಣೋತ್ತರ) (Maha Vir Chakra) ಕಳೆದ ನವೆಂಬರ್ 23ರಂದು ನೀಡಲಾಯಿತು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರಿಂದ ಕರ್ನಲ್ ಬಾಬು ಅವರ ತಾಯಿ ಮತ್ತು ಪತ್ನಿ ಪ್ರಶಸ್ತಿ ಸ್ವೀಕರಿಸಿದರು. ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಹೋರಾಡಿದ ಯೋಧರಿಗೆ ಐದು ವೀರ ಚಕ್ರಗಳನ್ನು ನೀಡಲಾಯಿತು. ಅವುಗಳಲ್ಲಿ ನಾಲ್ಕು ಮರಣೋತ್ತರ ಪ್ರಶಸ್ತಿ ಆಗಿದೆ. ಈ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಯಿತು. ಕರ್ನಲ್ ಬಾಬು ಅವರು 16 ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದರು. ಅವರನ್ನು ಆಪರೇಷನ್ ಸ್ನೋ ಲೆಪರ್ಡ್ಗಾಗಿ (Operation Snow Leopard) ಗಾಲ್ವಾನ್ ಕಣಿವೆಯಲ್ಲಿ ನಿಯೋಜಿಸಲಾಗಿತ್ತು. ಕಳೆದ ವರ್ಷ ಮೇ ಆರಂಭದಿಂದ ಭಾರತ ಮತ್ತು ಚೀನಾ ಮಿಲಿಟರಿ ಬಿಕ್ಕಟ್ಟಿನಲ್ಲಿ ತೊಡಗಿದ್ದವು ಮತ್ತು ಎರಡೂ ಕಡೆಯವರು ಸಂಘರ್ಷದ ಬಗ್ಗೆ ಚರ್ಚಿಸುತ್ತಿದ್ದರು. ಇದೇ ಅವಧಿಯಲ್ಲಿ ಎರಡೂ ಕಡೆಯ ಪಡೆಗಳು ಜೂನ್ 15 ರಂದು ಗಸ್ತು ಕೇಂದ್ರ (ಪಿಪಿ) 14 ರ ಸಮೀಪವಿರುವ ಗಾಲ್ವಾನ್ ಕಣಿವೆಯಲ್ಲಿ ಮುಖಾಮುಖಿಯಾದವು. ಇದರ ಪರಿಣಾಮವಾಗಿ ಬಾಬು ಸೇರಿದಂತೆ 20 ಭಾರತೀಯ ಸೈನಿಕರು ಹುತಾತ್ಮಗಿದ್ದು, ಕನಿಷ್ಠ ನಾಲ್ಕು ಚೀನೀ ಯೋಧರು ಹತ್ಯೆಯಾದರು.
ಸಂಘರ್ಷದ ಸಮಯದಲ್ಲಿ ಹತರಾದ ನಾಲ್ವರು ಸೈನಿಕರಿಗೆ ವೀರ ಚಕ್ರ (ಮರಣೋತ್ತರ) ಸಹ ನೀಡಲಾಗಿದೆ. ಇವರಲ್ಲಿ ನಾಯಬ್ ಸುಬೇದಾರ್ ನುದುರಾಮ್ ಸೊರೆನ್ ಸೇರಿದ್ದಾರೆ, ಅವರು “ತನ್ನ ತಂಡವನ್ನು ಶೌರ್ಯದಿಂದ ಮುನ್ನಡೆಸಿದರು ಮತ್ತು ವೀಕ್ಷಣಾ ಪೋಸ್ಟ್ ಅನ್ನು ಸ್ಥಾಪಿಸುವ ಭಾರತೀಯ ಸೈನಿಕರನ್ನು ಹಿಂದಕ್ಕೆ ತಳ್ಳುವ ಶತ್ರುಗಳ ಪ್ರಯತ್ನವನ್ನು ವಿರೋಧಿಸಿದರು”. ಸೋರೆನ್ ಅವರು “ವಿರೋಧಿಯನ್ನು ಬಲವಂತವಾಗಿ ಎದುರಿಸಿದರು ಮತ್ತು ಭಾರತೀಯ ಪಡೆಗಳನ್ನು ಹಿಂದಕ್ಕೆ ತಳ್ಳುವ ಪ್ರಯತ್ನದಲ್ಲಿ ಅವರನ್ನು ತಡೆದರು” ಮತ್ತು ಯುದ್ಧದ ಸಮಯದಲ್ಲಿ ಶತ್ರು ಸೈನಿಕರು ಮಾರಣಾಂತಿಕ ಮತ್ತು ಚೂಪಾದ ಆಯುಧಗಳಿಗೆ ಗುರಿಯಾದರು ಎಂದು ಅವರ ಶೌರ್ಯದ ಬಗ್ಗೆ ಹೇಳಲಾಗಿದೆ.
ತೀವ್ರವಾಗಿ ಗಾಯಗೊಂಡ ಅವರಲ್ಲಿ ಹಿಂತಿರುಗಲು ಕೇಳಿದಾಗ ಅವರು ನಿರಾಕರಿಸಿದರು. ನಿಜವಾದ ನಾಯಕರಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಶತ್ರುಗಳ ವಿರುದ್ಧ ಹೋರಾಡಿದರು. ಹವಾಲ್ದಾರ್ (ಗನ್ನರ್) ಕೆ.ಪಳನಿ ಸಹ ಯುದ್ಧದಲ್ಲಿ “ಶೌರ್ಯದಿಂದ” ಹೋರಾಡಿದರು ಮತ್ತು “ಶತ್ರು ಸೈನಿಕರ ಆಕ್ರಮಣಕಾರಿ ಕ್ರಮದಿಂದ ತನ್ನ ಅಧೀನ ಅಧಿಕಾರಿಗಳನ್ನು ರಕ್ಷಿಸಿದರು”. “ವಿರೋಧಿಗಳು ಅವರನ್ನು ಮೀರಿಸಿ ಅವರನ್ನು ಸುತ್ತುವರೆದರು”. ಅವರು “ಧೈರ್ಯದಿಂದ ನಿಂತು ತಮ್ಮ ಸಹಚರರನ್ನು ರಕ್ಷಿಸಲು ಪ್ರಯತ್ನಿಸಿದರು” ಶತ್ರುಗಳು ಆತನ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದರು.
ನಾಯಕ್ ದೀಪಕ್ ಸಿಂಗ್ ಅವರು ಆ ಸಮಯದಲ್ಲಿ ಬೆಟಾಲಿಯನ್ ನರ್ಸಿಂಗ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಮತ್ತು ಹೋರಾಟದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದರು. “ಯುದ್ಧದ ಸ್ಥಿತಿಯನ್ನು ನಿರ್ಣಯಿಸಿದ ನಂತರ, ಅವರು ತಕ್ಷಣದ ವೈದ್ಯಕೀಯ ಬೆಂಬಲಕ್ಕಾಗಿ ತೆರಳಿದರು. ಚಕಮಕಿಯು ಪ್ರಾರಂಭವಾದಾಗ ಮತ್ತು ಸಾವುನೋವುಗಳು ಹೆಚ್ಚಾಗುತ್ತಿದ್ದಂತೆ, ಗಾಯಗೊಂಡ ಸೈನಿಕರಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂಚೂಣಿಯಲ್ಲಿ ಹೊರಟರು. ನಂತರದ ಚಕಮಕಿಯಲ್ಲಿ ಭಾರೀ ಕಲ್ಲು ತೂರಾಟದ ವೇಳೆ ಅವರಿಗೆ ಗಂಭೀರ ಗಾಯಗಳಾಯಿತು. ಆದರೆ ಅವರು ಹಿಂಜರಿಯಲಿಲ್ಲ ಮತ್ತು ದಣಿವರಿಯದೆ ಅವರು ವೈದ್ಯಕೀಯ ಸಹಾಯವನ್ನು ನೀಡುವುದನ್ನು ಮುಂದುವರೆಸಿದರು. ಸಿಂಗ್ ಅವರು ಗಂಭೀರಗಾಯಗಳಿಂದ ಕೊನೆಯುಸಿರೆಳೆಯುವ ಮುನ್ನ ಅನೇಕ ಜೀವಗಳನ್ನು ಉಳಿಸಿದರು. “ಅವರು 30 ಕ್ಕೂ ಹೆಚ್ಚು ಭಾರತೀಯ ಸೈನಿಕರ ಚಿಕಿತ್ಸೆ ಮತ್ತು ಜೀವಗಳನ್ನು ಉಳಿಸುವಲ್ಲಿ ಪ್ರಮುಖರಾಗಿದ್ದರು, ಇದು ಅವರು ವೃತ್ತಿಪರ ಕುಶಾಗ್ರಮತಿ ಎಂದು ಬಿಂಬಿಸುತ್ತದೆ” ಎಂದು ಅವರ ಬಗ್ಗೆ ಹೇಳಲಾಗಿದೆ.
ಇದನ್ನೂ ಓದಿ: ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬುಗೆ ಮಹಾವೀರ ಚಕ್ರ ಗೌರವ ಇದನ್ನೂ ಓದಿ: Captain Varun Singh Profile ತೇಜಸ್ ವಿಮಾನ ಅಪಘಾತ ತಪ್ಪಿಸಿದ್ದಕ್ಕೆ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದರು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್