AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಕಪ್ ಗೆದ್ದ ಜೋಶ್​ನಲ್ಲಿ ಭರ್ಜರಿ ಮದ್ಯ ಹೀರಿದ ಅಭಿಮಾನಿಗಳು: ಒಂದೇ ದಿನ 157.94 ಕೋಟಿ ರೂ. ಮಾರಾಟ

ಆರ್‌ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮದಲ್ಲಿ ಬೆಂಗಳೂರು ನಗರ ಉಲ್ಲಾಸದಿಂದ ಕಂಗೊಳಿಸಿತು. ಅಭಿಮಾನಿಗಳ ಸಂಭ್ರಮಾಚರಣೆಯಿಂದಾಗಿ ಮದ್ಯ ಮಾರಾಟದಲ್ಲಿ ಅಗಾಧ ಏರಿಕೆ ಕಂಡುಬಂದಿದೆ. ಒಂದೇ ದಿನ 157.94 ಕೋಟಿ ರೂಪಾಯಿಗಳಷ್ಟು ಆದಾಯ ಅಬಕಾರಿ ಇಲಾಖೆಗೆ ಹರಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಗಣನೀಯ ಏರಿಕೆ ಆಗಿದೆ.

RCB ಕಪ್ ಗೆದ್ದ ಜೋಶ್​ನಲ್ಲಿ ಭರ್ಜರಿ ಮದ್ಯ ಹೀರಿದ ಅಭಿಮಾನಿಗಳು: ಒಂದೇ ದಿನ 157.94 ಕೋಟಿ ರೂ. ಮಾರಾಟ
ಪ್ರಾತಿನಿಧಿಕ ಚಿತ್ರ
Vinay Kashappanavar
| Edited By: |

Updated on:Jun 04, 2025 | 2:42 PM

Share

ಬೆಂಗಳೂರು, ಜೂನ್​ 04: ಆರ್‌ಸಿಬಿ (RCB) ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆ ಇತ್ತ ಕರ್ನಾಟಕದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಜಧಾನಿ ಬೆಂಗಳೂರಿನ ಗಲ್ಲಿ ಗಲ್ಲಿಯೂ ಸಂಭ್ರಮಾಚರಣೆ ಜೋರಾಗಿತ್ತು. ಆರ್​ಸಿಬಿ ಅಭಿಮಾನಿಗಳ ಪಾಲಿಗೆ ದೀಪಾವಳಿ, ಯುಗಾದಿ, ಸಂಕ್ರಾಂತಿ ಎಲ್ಲಾ ಹಬ್ಬ ಒಟ್ಟೊಟ್ಟಿಗೆ ಬಂದಂತಾಗಿತ್ತು. ನೆಚ್ಚಿನ ತಂಡ ಆರ್​​ಸಿಬಿ ಕಪ್ ಗೆದ್ದ ಜೋಶ್​ನಲ್ಲಿ ಅಭಿಮಾನಿಗಳು ಕೋಟ್ಯಂತರ ರೂ ಬಿಯರ್ (Beer) ಮತ್ತು ಲಿಕ್ಕರ್​​ ಹೀರಿದ್ದಾರೆ. ನಿನ್ನೆ ಒಂದೇ ದಿನ ಒಟ್ಟು ಅಬಕಾರಿ ಇಲಾಖೆಗೆ 157.94 ಕೋಟಿ ರೂ ಆದಾಯ ಹರಿದುಬಂದಿದೆ.

ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್​ನಲ್ಲಿ ಫ್ಯಾನ್ಸ್ ಆರ್​ಸಿಬಿ ಪರ ಜಯಘೋಷ ಕೂಗುತ್ತಾ ಕುಣಿದು ಕುಪ್ಪಳಿಸಿದ್ದರು. ಮಧ್ಯರಾತ್ರಿ ಆದರೂ ಅಭಿಮಾನಿಗಳ ಸಾಗರವೇ ರಸ್ತೆ ರಸ್ತೆಯಲ್ಲೂ ತುಂಬಿ ಹೋಗಿತ್ತು. ಸಿಲಿಕಾನ್​ ಸಿಟಿಯ ಪಬ್​ ಆ್ಯಂಡ್​ ಬಾರ್​ಗಳು ಫುಲ್​ ಆಗಿದ್ದವು.​

ಇದನ್ನೂ ಓದಿ: RCB Victory Parade: ಆರ್​ಸಿಬಿ ಆಟಗಾರರ ವಿಜಯೋತ್ಸವ ಮೆರವಣಿಗೆ ಇಲ್ಲ, ಗೃಹ ಸಚಿವರು ಕೊಟ್ಟ ಕಾರಣ ಇಲ್ಲಿದೆ

ಇದನ್ನೂ ಓದಿ
Image
ಸಾಯಂಕಾಲ 6 ಗಂಟೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ವಿಕ್ಟರಿ ಪರೇಡ್
Image
ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ
Image
RCB Victory Parade: ಆರ್​ಸಿಬಿ ಆಟಗಾರರ ವಿಜಯೋತ್ಸವ ಮೆರವಣಿಗೆ ಇಲ್ಲ
Image
ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಡಿಸಿಎಂ ಡಿಕೆ ಶಿವಕುಮಾರ್

ನಿನ್ನೆ ರಾತ್ರಿ ಒಂದೇ ದಿನ ಕರ್ನಾಟಕದಲ್ಲಿ 127 ಕೋಟಿ 88 ಲಕ್ಷ ರೂ ಮೌಲ್ಯದ 1.28 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾದರೆ, 30 ಕೋಟಿ 66 ಲಕ್ಷ ರೂ ಬೆಲೆಯ 1.48 ಲಕ್ಷ ಬಾಕ್ಸ್ ಬಿಯರ್ ಬಾಟಲ್​ ಮಾರಾಟವಾಗಿದೆ. ಆ ಮೂಲಕ ಒಟ್ಟಾರೆ ಒಂದೇ ದಿನಕ್ಕೆ 157.94 ಕೋಟಿ ರೂ ಆದಾಯ ಅಬಕಾರಿ ಇಲಾಖೆ ಗಳಿಸಿದೆ.

ಕಳೆದ ವರ್ಷ ಇದೇ ಜೂನ್ 3 ರಂದು 0.36 ಲಕ್ಷ ಬಾಕ್ಸ್ ಬಿಯರ್ ಸೇಲ್ ಆಗಿತ್ತು. ಈ ಭಾರೀ 30 ಕೋಟಿ 66 ಲಕ್ಷ ಬೆಲೆಯ ಬಿಯರ್ ಮಾರಾಟ ಮಾಡಲಾಗಿದೆ. 127 ಕೋಟಿ 88 ಲಕ್ಷ ಮೌಲ್ಯದ 1.28 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾಗಿದ್ದು, ಕಳೆದ ವರ್ಷ ಜೂನ್ 3ರಂದು 19.41 ಕೋಟಿ ರೂ ಲಿಕ್ಕರ್ ಮಾರಾಟವಾಗಿತ್ತು.

ಇದನ್ನೂ ಓದಿ: ಗದಗ: ಆರ್​ಸಿಬಿ ಗೆದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು

ಕಳೆದ ವರ್ಷ ಬಿಯರ್​ನಿಂದ 6.29 ಕೋಟಿ ರೂ ಆದಾಯ ಮಾತ್ರ ಬಂದಿತ್ತು. ಕಳೆದ ವರ್ಷ ಇದೇ ಜೂನ್ 3 ರಂದು 25 ಕೋಟಿ ರೂ. ಮಾತ್ರ ಆದಾಯ ಬಂದಿತ್ತು. ಆದರೆ ಈ ಭಾರಿ 132.24 ಕೋಟಿ ಹೆಚ್ಚುವರಿ ಆದಾಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:41 pm, Wed, 4 June 25