ವಿದೇಶದಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದ ಕೊಡಗಿನ ಮಹಿಳೆ ಕೊನೆಗೂ ತಾಯ್ನಾಡಿಗೆ ವಾಪಾಸು
ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ನಿವಾಸಿ ಪಾರ್ವತಿ(30)ಎಂಬ ಮಹಿಳೆ ಕೆಲಸಕ್ಕೆಂದು ಕುವೈತ್ಗೆ ತೆರಳಿದ್ದು, ಅಲ್ಲಿನ ಮನೆ ಮಾಲೀಕ ಕಿರುಕುಳ ನೀಡುತ್ತಿದ್ದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಳು. ಇದೀಗ ಮಹಿಳೆಯನ್ನ ರಕ್ಷಿಸಿ ತಾಯ್ನಾಡಿಗೆ ಕರೆದುಕೊಂಡು ಬರಲಾಗಿದೆ.
ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ನಿವಾಸಿ ಪಾರ್ವತಿ(30)ಎಂಬ ಮಹಿಳೆ ಕಳೆದ ಅಕ್ಟೋಬರ್ನಲ್ಲಿ ಉದ್ಯೋಗಕ್ಕೆಂದು ಕುವೈತ್ಗೆ ತೆರಳಿದ್ದಳು. ಕೇರಳ ಮೂಲದ ಆರೀಫ್ ಎಂಬ ಏಜೆಂಟ್ ಕುವೈತ್ ದೇಶದಲ್ಲಿ ಭಾರತೀಯ ಮೂಲದ ಕುಟುಂಬಕ್ಕೆ ಮನೆ ಕೆಲಸದವರು ಬೇಕಾಗಿದ್ದು ಅಲ್ಲಿಗೆ ತೆರಳುವಂತೆ ಪುಸಲಾಯಿಸಿ 2022ರ ಅಕ್ಟೋಬರ್ನಲ್ಲಿ ಕಳಿಸಿಬಿಟ್ಟಿದ್ದಾನೆ. ಅಲ್ಲಿನ ವಿದೇಶಿ ಮಾಲಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಕೂಡಲೇ ಈ ನರಕದಿಂದ ನನ್ನನ್ನು ಪಾರು ಮಾಡಿ ಎಂದು ಕೇಳಿಕೊಂಡಿದ್ದಳು. ಮಹಿಳೆ ಕುಟುಂಬಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಕೂಡಲೇ ವಿದೇಶಾಂಗ ಇಲಾಖೆಗೆ ಮಾಹಿತಿನ ನೀಡಿ ಇದೀಗ ಯುವತಿ ಕೊಡಗಿಗೆ ಆಗಮಿಸಿದ್ದಾಳೆ.
ಇನ್ನು ಪಾರ್ವತಿ ಸಂಕಷ್ಟ ಕುರಿತು ವರದಿ ಟಿವಿ9 ವರದಿ ಮಾಡಿತ್ತು. ಇತ್ತೀಚೆಗೆ ಗಂಡನನ್ನ ಕಳೆದುಕೊಂಡಿದ್ದ ಪಾರ್ವತಿಗೆ ತಮ್ಮಿಬ್ಬರ ಮಕ್ಕಳು ಮತ್ತು ವಯಸ್ಸಾದ ತಾಯಿಯಯನ್ನ ಸಾಕುವ ಜವಾಬ್ದಾರಿ ಇತ್ತು. ಇಂತಹ ಸಂದರ್ಭದಲ್ಲಿ ಕೇರಳ ಮೂಲದ ಆರೀಫ್ ಎಂಬ ಏಜೆಂಟ್ ಕುವೈತ್ ದೇಶದಲ್ಲಿ ಭಾರತೀಯ ಮೂಲದ ಕುಟುಂಬಕ್ಕೆ ಮನೆ ಕೆಲಸದವರು ಬೇಕಾಗಿದ್ದು ಅಲ್ಲಿಗೆ ತೆರಳುವಂತೆ ಪುಸಲಾಯಿಸಿ 2022ರ ಅಕ್ಟೋಬರ್ ನಲ್ಲಿ ಕಳಿಸಿಬಿಟ್ಟಿದ್ದಾನೆ. ಪಾರ್ವತಿ ಅವರನ್ನ ಶ್ರೀಲಂಕಾ ಮೂಲದ ಒಬ್ಬ ಏಜೆಂಟ್ ಬರಮಾಡಿಕೊಂಡು, ವಿದೇಶಿ ಕುಟುಂಬವೊಂದರ ಮನೆಗೆ ಕೆಲಸಕ್ಕೆ ಕಳುಹಿಸಿದ್ದಾನೆ. ಆದ್ರೆ ಸ್ವಲ್ಪ ದಿನ ಕಳೆಯುವುದರಲ್ಲಿ ವಿದೇಶಿ ಮಾಲೀಕ ಇನ್ನಿಲ್ಲದ ಕಿರುಕುಳ ನೀಡಿದ್ದಾನಂತೆ. ಹಾಗಾಗಿ ಅಲ್ಲಿಂದ ತನ್ನನ್ನ ಬಿಡಿಸುವಂತೆ ಏಜೆಂಟ್ಗೆ ಮನವಿ ಮಾಡಿದ್ದಾಳೆ. ಆದ್ರೆ ಆತ ಆ ವಿದೇಶಿ ಕುಟುಂಬದ ಕೈಯಿಂದ 3 ಲಕ್ಷ ರೂ ಹಣ ಪಡೆದಿದ್ದನಂತೆ. ಹಾಗಾಗಿ ವಿದೇಶಿ ಮಾಲೀಕ ಪಾರ್ವತಿಯ ಪಾಸ್ಪೋರ್ಟ್ ಅನ್ನು ಒತ್ತೆಯಾಗಿಟ್ಟುಕೊಂಡು ಆಕೆಯನ್ನ ಮಾತ್ರ ಕಳುಹಿಸಿದ್ದಾನೆ.
ಇದನ್ನೂ ಓದಿ:MEA: ಕುವೈತ್ ನರಕದಿಂದ ಪಾರು ಮಾಡಲು ವಿದೇಶಾಂಗ ಇಲಾಖೆಗೆ ಮೊರೆಯಿಟ್ಟ ಕೊಡಗು ಕಾರ್ಮಿಕ ಮಹಿಳೆ
ಮಾಲೀಕನ ಮನೆಯಿಂದ ಹೊರ ಬಂದಿರುವ ಪಾರ್ವತಿಯನ್ನ ಶ್ರೀಲಂಕಾ ಏಜೆಂಟ್ ಮತ್ತೆಲ್ಲೋ ಕರೆದುಕೊಂಡು ಹೋಗಿ, ಅಲ್ಲಿ ಬಿಟ್ಟುಬಂದು ಕೈತೊಳೆದುಕೊಂಡಿದ್ದಾನೆ. ಕೊನೆಗೆ ಇವರು ಕುವೈತ್ ನಗರದ ತರಾಫ್ ಬಿನ್ ಅಲ್ ಅಬ್ ಸ್ಟ್ರೀಟ್ ಬಳಿಯ ಕಟ್ಟಡವೊಂದರಲ್ಲಿ ಗೃಹಬಂಧನದಲ್ಲಿದ್ದಳು. ಇಲ್ಲಿ ಪಾರ್ವತಿ ಅವರಿಗೆ ವೇತನವೇನೂ ನೀಡಿಲ್ಲ. ದಿನಪೂರ್ತಿ ಕೆಲಸ ಮಾಡಿಸಿಕೊಂಡು ಮನೆಯಿಂದ ಹೊರಗಡೆಗೇ ಬಿಡುತ್ತಿರಲಿಲ್ಲವಂಂತೆ. ಇತ್ತ ಪಾರ್ವತಿಯ ತಾಯಿ ಕೊಡಗು ಜಿಲ್ಲಾಧಿಕಾರಿಗೆ ದೂರು ನೀಡಿದ್ದು ಮಗಳನ್ನ ಬಿಡಿಸಿಕೊಡುವಂತೆ ಮನವಿ ಮಾಡಿದ್ದರು. ಈ ಪ್ರಕರಣವನ್ನ ಡಿಸಿ ಡಾ ಬಿಸಿ ಸತೀಶ್ ಅವರು ವಿಪತ್ತು ನಿರ್ವಹಣಾ ಘಟಕಕ್ಕೆ ವರ್ಗಾಯಿಸಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ಕುಮಾರ್ ಭಾರತೀಯ ರಾಯಭಾರಿ ಕಚೇರಿಯನ್ನ ಸಂಪರ್ಕಿಸಿದ್ದರು. ಇದೀಗ ಮಹಿಳೆ ತಾಯ್ನಾಡಿಗೆ ಬಂದಿದ್ದಾಳೆ. ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ