AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿದ ಕೇಸ್​: ಉಳಿದ 2 ಆರೋಪಿಗಳ ಬಂಧನಕ್ಕೆ ಸಿಎಂ ಸೂಚನೆ

ಕೋಲಾರದ ಜಿಲ್ಲಾಧಿಕಾರಿಗಳ‌ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ ಮಾಡಲಾಗಿದೆ. ಈ ವೇಳೆ ಹಲವು ವಿಚಾರಗಳನ್ನು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸುವಂತೆ 2 ದಿನಗಳಲ್ಲಿ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದಾರೆ. 

ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿದ ಕೇಸ್​: ಉಳಿದ 2 ಆರೋಪಿಗಳ ಬಂಧನಕ್ಕೆ ಸಿಎಂ ಸೂಚನೆ
ಕೋಲಾರ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಇತರರು
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Dec 27, 2023 | 4:51 PM

Share

ಕೋಲಾರ, ಡಿಸೆಂಬರ್ 27: ನಗರದ ಜಿಲ್ಲಾಧಿಕಾರಿಗಳ‌ ಕಚೇರಿಯಲ್ಲಿ ಇಂದು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ ಮಾಡಲಾಗಿದೆ. ಈ ವೇಳೆ ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಸ್ತಾಪಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಇನ್ನು 2 ದಿನಗಳಲ್ಲಿ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಇದೊಂದು ಕ್ರೂರ ಕೃತ್ಯ, ಇಂತಹದ್ದನ್ನು ನಾವು ಅಪ್ಪಿತಪ್ಪಿಯೂ ಸಹಿಸಲ್ಲ. ಯಾವುದೇ ಕಾರಣಕ್ಕೂ ಇಂತಹ ಘಟನೆ ಮರುಕಳಿಸಬಾರದು. ಎಲ್ಲಾ ವಸತಿ ಶಾಲೆಗಳಲ್ಲಿರುವ ಗೊಂದಲವನ್ನು ತಕ್ಷಣ ಬಗೆಹರಿಸಬೇಕು. ವಸತಿ ಶಾಲೆಗಳ ಒಳಗೆ ಪೋಷಕರು ಪ್ರವೇಶಿಸಲು ಅವಕಾಶ ನೀಡಬೇಕು. ಇದರಿಂದ ಪೋಷಕರಿಗೆ ವಸತಿ ಶಾಲೆಗಳ ಗುಣಮಟ್ಟ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್​ ಆರೋಪಗಳ ಬಗ್ಗೆ ಪ್ರಸ್ತಾಪ, ಇದಕ್ಕೆ ವಿಜಯೇಂದ್ರ ಹೇಳಿದ್ದು ಒಂದೇ ಮಾತು

ರಾಜ್ಯದಲ್ಲಿ ಎಲ್ಲೂ ಮೇವಿಗೆ ತೊಂದರೆ ಇಲ್ಲ. ಕೆ.ಸಿ.ವ್ಯಾಲಿಯಿಂದ ಆಂತರ್ಜಲ ವೃದ್ಧಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೇಲುಸ್ತುವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ 37 ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ಶಾಲೆ ಮಾಡಲು ತಿಳಿಸಿದೆ ಎಂದಿದ್ದಾರೆ.

ಸರ್ಕಾರಿ ಜಾಗಗಳ ಒತ್ತುವರಿ ಗುರುತಿಸಿ ತೆರವಿಗೆ ಸೂಚನೆ

ಸರ್ಕಾರಿ ಜಾಗಗಳ ಒತ್ತುವರಿ ಗುರುತಿಸಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಷ್ಟೇ ಪ್ರಭಾವಿಗಳಿದ್ರೂ ಮುಲಾಜಿಲ್ಲದೇ ಕ್ರಮಕ್ಕೆ ಸೂಚಿಸಲಾಗಿದೆ. ಒತ್ತುವರಿ ಜಾಗ ಗುರುತಿಸಿ ಆಸ್ಪತ್ರೆ, ಸ್ಮಶಾನಕ್ಕೆ ಜಾಗಬೇಕು ಹಾಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಧಿಕಾರಿಗಳು ಒಂದು ದಿನ ನಿಗದಿ ಮಾಡಿ ಜನರ ಕೆಲಸ ಮಾಡಿಕೊಡಬೇಕು

ರಾಜ್ಯದಲ್ಲಿ ಎಲ್ಲೂ ಮೇವಿಗೆ ತೊಂದರೆ ಇಲ್ಲ. ಕೋಲಾರದಲ್ಲೂ ಕುಡಿಯುವ ನೀರಿಗೆ ತೊಂದರೆಯಾಗಬಾರದು. ಕೆ.ಸಿ.ವ್ಯಾಲಿಯಿಂದ ಆಂತರ್ಜಲ ವೃದ್ಧಿಯಾಗಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ, ಮೇವಿನ ಕಿಟ್ ಕೊಡಲಾಗಿದೆ. ನರೇಗಾದಲ್ಲಿ 150 ದಿನ ಕೆಲಸ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇವತ್ತಿನವರೆಗೂ ಅನುಮತಿ ಸಿಕ್ಕಿಲ್ಲ. ಜನರಿಗೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಾಮಾನ್ಯ ಜನರ ಕೆಲಸ ಆಗುತ್ತಿಲ್ಲ. ಅದಕ್ಕೆ ಅಧಿಕಾರಿಗಳು ಒಂದು ದಿನ ನಿಗದಿ ಮಾಡಿ ಜನರ ಕೆಲಸ ಮಾಡಿಕೊಡಬೇಕು ಎಂದಿದ್ದಾರೆ.

ಇದನ್ನೂ ಓದಿ: ರೈತರ ಬಗ್ಗೆ ಗೌರವದಿಂದ ಮಾತನಾಡಬೇಕು: ಎಲ್ಲ ನಾಯಕರಿಗೆ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಬಾಕಿ ಇರುವ ರೆವಿನ್ಯೂ ಕೇಸುಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ರೈತರು ಕೇಸುಗಳಿಗೆ ಓಡಾಡಲು ತುಂಬಾ ಖರ್ಚು ಬರುತ್ತದೆ. ಹೆಚ್ಚಾಗಿ ಕಚೇರಿಗಳಿಗೆ ಅಲೆದಾಡಿಸಬೇಡಿ. ವಿಶೇಷ ಅಭಿಯಾನ ಮಾಡಿ ಬಾಕಿ ಪ್ರಕರಣಗಳನ್ನು ಇತ್ಯರ್ಥ ಮಾಡಿ ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ ಸೂಚನೆ ನೀಡಲಾಗಿದೆ. ಎಲ್ಲಾ ತಾಲ್ಲೂಗಳಲ್ಲಿ ಇರುವ ಸರ್ಕಾರಿ ಜಮೀನು ಮತ್ತು ಕೆರೆಗಳು ಹಾಗೂ ಸರ್ಕಾರಿ ಜಾಗಗಳ ಒತ್ತುವರಿ ತೆರವು ಮಾಡಿ.

ಸರ್ಕಾರಿ ಜಾಗಗಳ ಕುರಿತು ಸಮಗ್ರ ಮಾಹಿತಿ ನೀಡುವಂತೆ ಸೂಚನೆ. ಅಂಗನವಾಡಿ, ಸ್ಮಶಾನ ಮತ್ತು ಇತರೆ ಅಗತ್ಯಗಳಿಗೆ ಜಮೀನು ಮಂಜೂರು. ಶಾಲೆಗಳಲ್ಲಿ ಕೊಠಡಿಗಳ ಕೊರತೆ, ದುರಸ್ತಿ, ಶಾಲೆಗಳ ಸ್ಥಿತಿಗತಿ, ಶಿಕ್ಷಕರ ಕೊರತೆ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಕೇವಲ 100 ಶಿಕ್ಷಕರ ಕೊರತೆ ಇದೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ