ಜಿಲ್ಲಾಧಿಕಾರಿ ಕಚೇರಿ ಇದ್ದ ಕಟ್ಟಡದಲ್ಲಿ ನಿರ್ಮಾಣವಾಗಲಿದೆ ವಸ್ತು ಸಂಗ್ರಹಾಲಯ; ಇತಿಹಾಸ ಪ್ರಸಿದ್ಧ ಸ್ಥಳದಲ್ಲಿ ನವೀಕರಣ ಶುರು

ಮೂರು ವರ್ಷಗಳ ನಂತರ ಈಗ ಕಾಮಗಾರಿಯನ್ನು ಕೈಗೆತ್ತುಕೊಳ್ಳಲಾಗಿದೆ. ಜಿಲ್ಲಾಡಳಿತ ಭವನ ಹೊಸ ಕಟ್ಟಡಕ್ಕೆ ವರ್ಗಾವಣೆಯಾದ ನಂತರ ಇಲ್ಲಿ ಕಾರ್​ ಪಾರ್ಕಿಂಗ್ ಮಾಡಲಾಗುತ್ತಿತ್ತು. ಆದರೆ ಕಟ್ಟಡ ಹಾಳಾಗಬಾರದು ಅನ್ನೋ ನಿಟ್ಟಿನಲ್ಲಿ ಹಳೆ ಜಿಲ್ಲಾಧಿಕಾರಿಗಳ ಕಚೇರಿಯನ್ನ ವಸ್ತು ಸಂಗ್ರಹಾಲಯ ಮಾಡಬೇಕೆಂಬ ಸಾರ್ವಜನಿಕರ ಒತ್ತಾಯದಂತೆ ಜಿಲ್ಲಾಡಳಿತ ಇಂತಹ ಮಹತ್ವದ ನಿರ್ಧಾರಕ್ಕೆ ಮುಂದಾಗಿತ್ತು.

ಜಿಲ್ಲಾಧಿಕಾರಿ ಕಚೇರಿ ಇದ್ದ ಕಟ್ಟಡದಲ್ಲಿ ನಿರ್ಮಾಣವಾಗಲಿದೆ ವಸ್ತು ಸಂಗ್ರಹಾಲಯ; ಇತಿಹಾಸ ಪ್ರಸಿದ್ಧ ಸ್ಥಳದಲ್ಲಿ ನವೀಕರಣ ಶುರು
ಜಿಲ್ಲಾಧಿಕಾರಿ ಕಚೇರಿ
Follow us
TV9 Web
| Updated By: preethi shettigar

Updated on: Mar 14, 2022 | 8:23 PM

ಕೋಲಾರ: ಸಾವಿರಾರು ವರ್ಷಗಳ ಇತಿಹಾಸ(History) ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ರಾಮಾಯಣ, ಮಹಾಭಾರತ(Mahabaratha) ಕಾಲದಿಂದ ಹಿಡಿದು, ಮೈಸೂರು ಮಹಾರಾಜರ ವರೆಗೆ ಆಳಿಹೋದ ರಾಜ ಮಹಾರಾಜರ ಕುರಿತು ಐತಿಹ್ಯ ಹಾಗೂ ಕುರುಗಳು ಇದೆ. ಸುಮಾರು 150 ವರ್ಷಗಳ ಬೃಹತ್​ ಪುರಾತನ ಕಟ್ಟಡ ಇದೆ.  ಇಂತಹ ಜಾಗದಲ್ಲಿರುವ ಕಟ್ಟಡವೂ(Building) ಅಷ್ಟೇ ಹಲವು ದಶಕಗಳ ಕಾಲ ಜಿಲ್ಲೆಯ ಆಡಳಿತ ಯಂತ್ರಕ್ಕೆ ಆಶ್ರಯ ನೀಡಿದೆ. ಆದರೆ ಇನ್ನು ಮುಂದೆ ಬೃಹತ್​ ಮಾಹಿತಿ ಕೇಂದ್ರವಾಗಲು ಈ ಕಟ್ಟಡ ಸಿದ್ಧವಾಗುತ್ತಿದೆ.

ಸುಮಾರು ದಶಕಗಳ ಕಾಲ ಜಿಲ್ಲೆಯ ಆಡಳಿತ ಯಂತ್ರಕ್ಕೆ ಆಶ್ರಯ ನೀಡಿದ್ದ ಕಟ್ಟಡ ಇಂದು ನಿನ್ನೆಯದಲ್ಲ. ಸುಮಾರು ನೂರೈವತ್ತು ವರ್ಷಗಳ ಇತಿಹಾಸ ಹೊಂದಿರುವ ಬ್ರಿಟಿಷರ ಕಾಲದ ಈ ಕಟ್ಟಡ ಮೊನ್ನೆ ಮೊನ್ನೆಯವರೆಗೂ ಜಿಲ್ಲಾಡಳಿತ ಭವನವಾಗಿ ತನ್ನ ಜವಾಬ್ದಾರಿ ನಿಭಾಯಿಸಿದೆ. ಈಗ ಹೊಸ ಜಿಲ್ಲಾಡಳಿತ ಭವನ ನಿರ್ಮಣವಾದ ನಂತರ ಈ ಪುರಾತನ ಕಟ್ಟಡವನ್ನು ಹಾಗೆ ಉಳಿಸಬೇಕೆನ್ನುವ ದೃಷ್ಟಿಯಿಂದ ಜಿಲ್ಲಾಡಳಿತ ಈ ಕಟ್ಟಡವನ್ನು ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆ ಸುಪರ್ಧಿಗೆ ನೀಡಿತ್ತು. ಆದರೆ ಮೂರು ವರ್ಷಗಳ ಸುಮ್ಮನಿದ್ದ ಪುರಾತತ್ವ ಇಲಾಖೆ ಹಳೆಯ ಜಿಲ್ಲಾಡಳಿತ ಭವನವನ್ನು ನವೀಕರಣ ಮಾಡಲು ಮುಂದಾಗಿದ್ದು, ಕಾಮಗಾರಿಯನ್ನು ಆರಂಭ ಮಾಡಿದೆ.

ಕಾಮಗಾರಿ ಪೂರ್ಣವಾದ ನಂತರದಲ್ಲಿ ಈ ಸ್ಥಳದಲ್ಲಿ ದೊಡ್ಡ ಮ್ಯೂಸಿಯಂ ಮಾಡುವ ಮೂಲಕ ಜಿಲ್ಲೆಯ ಇತಿಹಾಸವನ್ನು ಜನರ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡಲಾಗುತ್ತದೆ. ಬ್ರಿಟೀಷರ ಕಾಲದಲ್ಲಿ ಕುದುರೆ ಲಾಯವಾಗಿ ಬಳಕೆಯಾಗಿದ್ದ ಈ ಕಟ್ಟಡ ನಂತರ ಕೋಲಾರ ಜಿಲ್ಲೆಯ ಶಕ್ತಿ ಕೇಂದ್ರವಾಗಿ ನಂತರ ಈಗ ಜಿಲ್ಲೆಯ ಇತಿಹಾಸವನ್ನು ಹೇಳುವ ಕೇಂದ್ರವಾಗಿ ಸಿದ್ಧವಾಗುತ್ತಿದೆ. ಆದರೆ ಕಾಮಗಾರಿ ವಿಳಂಭವಾಗಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಮೂರು ವರ್ಷಗಳ ನಂತರ ಈಗ ಕಾಮಗಾರಿಯನ್ನು ಕೈಗೆತ್ತುಕೊಳ್ಳಲಾಗಿದೆ. ಜಿಲ್ಲಾಡಳಿತ ಭವನ ಹೊಸ ಕಟ್ಟಡಕ್ಕೆ ವರ್ಗಾವಣೆಯಾದ ನಂತರ ಇಲ್ಲಿ ಕಾರ್​ ಪಾರ್ಕಿಂಗ್ ಮಾಡಲಾಗುತ್ತಿತ್ತು. ಆದರೆ ಕಟ್ಟಡ ಹಾಳಾಗಬಾರದು ಅನ್ನೋ ನಿಟ್ಟಿನಲ್ಲಿ ಹಳೆ ಜಿಲ್ಲಾಧಿಕಾರಿಗಳ ಕಚೇರಿಯನ್ನ ವಸ್ತು ಸಂಗ್ರಹಾಲಯ ಮಾಡಬೇಕೆಂಬ ಸಾರ್ವಜನಿಕರ ಒತ್ತಾಯದಂತೆ ಜಿಲ್ಲಾಡಳಿತ ಇಂತಹ ಮಹತ್ವದ ನಿರ್ಧಾರಕ್ಕೆ ಮುಂದಾಗಿತ್ತು. ಈಗಾಗಲೇ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೋಲಾರದಲ್ಲಿ ಗಂಗರು, ಚೋಳರು ರಾಜ್ಯಭಾರ ಮಾಡಿದ್ದಾರೆ. ಜೊತೆಗೆ ನಗರದಲ್ಲಿ ಪುರಾಣ ಪ್ರಸಿದ್ದ ಪಡೆದ ಕೋಲಾರಮ್ಮ, ಸೋಮೇಶ್ವರ ದೇವಾಲಯಗಳು ಇಲ್ಲಿವೆ.

ಇಂತಹ ಮಹತ್ವ ಪಡೆದ ಸ್ಥಳದಲ್ಲಿ ವಸ್ತು ಸಂಗ್ರಾಹಲಯ ಮಾಡಿದ್ದೆ ಆದಲ್ಲಿ ಕೇವಲ 3 ಕೀ.ಮೀ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳ ಅಭಿವೃದ್ಧಿಯಾಗುತ್ತೆ. ಜೊತೆಗೆ ಜಿಲ್ಲೆಯ ಇತಿಹಾಸವನ್ನು ಜನರಿಗೆ ತಿಳಿಸುವ ಕೆಲಸವಾಗುತ್ತೆ ಅನ್ನೋ ನಿಟ್ಟಿನಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಜಿಲ್ಲಾಡಳಿತ ಹಳೆಯ ಕಟ್ಟಡವನ್ನ ಹಸ್ತಾಂತರ ಮಾಡಿದೆ. ಇಲ್ಲಿ ಹಳೆಯ ಶಿಲೆಗಳು, ಶಾಸನಗಳು, ಪುರಾಣ ಹೇಳುವ ವಿಗ್ರಹಗಳ ಸೇರಿದಂತೆ, ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿ, ಅಂಬೇಡ್ಕರ್​, ನೆಹರುರಂತ ಮಹಾತ್ಮರು ಜಿಲ್ಲೆಗೆ ಭೇಟಿ ನೀಡಿದ್ದ ಅಪರೂಪದ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಈ ಮೂಲಕ ಇತಿಹಾಸ ಓದುವ ವಿದ್ಯಾರ್ಥಿಗಳಿಗೆ ಇದೊಂದು ಮಾಹಿತಿ ಕೇಂದ್ರವಾಗಲಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಕೋಲಾರ ಜಿಲ್ಲಾಧಿಕಾರಿ ವೆಂಕಟ್​ ರಾಜಾ ಹೇಳಿದ್ದಾರೆ.

ಒಟ್ಟಾರೆ ನೂರಾರು ವರ್ಷಗಳ ಕಾಲ ರಾಜ ಪರಂಪರೆಯಿಂದ ಹಿಡಿದು ಬ್ರಿಟಿಷರ ಕಾಲದವರೆಗೆ ಹಲವಾರು ಗತ ವೈಭವಗಳಿಗೆ ಸಾಕ್ಷಿಯಾಗಿ ನಿಲ್ಲುವ ಕೋಲಾರ ಜಿಲ್ಲೆಯ ವೈಭವ ಈ ಸಂಗ್ರಹಾಲಯದ ಮೂಲಕ ಶಾಶ್ವತವಾಗಿ ಉಳಿಯುತ್ತದೆ. ಮುಂದಿನ ಪೀಳಿಗೆಗೂ ಮಹತ್ವದ ಮಾಹಿತಿ ರವಾನೆಯಾಗುತ್ತದೆ. ಜಿಲ್ಲಾ ಕೇಂದ್ರ ಒಂದೊಳ್ಳೆ ಪ್ರವಾಸೋದ್ಯಮ ಕೇಂದ್ರವಾಗುತ್ತೆ ಅದು ಆದಷ್ಟು ಬೇಗ ಜನರಿಗೆ ಸಿಗುವಂತಾಗಲಿ ಎನ್ನುವುದು ಜಿಲ್ಲೆಯ ಜನರ ನಿರೀಕ್ಷೆಯಾಗಿದೆ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ: ಕೊರೊನಾದಿಂದ ನಿಂತುಹೋಗಿದ್ದ ಮೇಲುಕೋಟೆ ವೈರಮುಡಿ ಉತ್ಸವ ಈ ಬಾರಿ ಅದ್ದೂರಿ! ಇಲ್ಲಿನ ಪುರಾಣ ಇತಿಹಾಸ ಏನು?

ದೆಹಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ; 8 ಜನರ ರಕ್ಷಣೆ, ಇನ್ನೂ ಹಲವರು ಸಿಲುಕಿರುವ ಶಂಕೆ