ತುಂಗಭದ್ರಾ ಜಲಾಶಯದ ಬಗ್ಗೆ ನಾಳೆ ಶುಭ ಸುದ್ದಿ ಕೊಡುತ್ತೇನೆ ಎಂದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು

ಆಗಸ್ಟ್ 10 ರಂದು ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ತುಂಗಭದ್ರಾ ಜಲಾಶಯದ ಹತ್ತೊಂಬತ್ತನೇ ಕ್ರಸ್ಟ್​ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಸದ್ಯ ಇದೀಗ ರಿಪೇರಿ ಕಾರ್ಯ ನಡೆಯುತ್ತಿದೆ. ನಾಳೆಯೊಳಗೆ ಗುಡ್ ನ್ಯೂಸ್ ಕೊಡ್ತೇನೆ. ಆಗ ಸೆಲೆಬ್ರೇಷನ್ ಮಾಡೋಣ ಎಂದು ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದ ಬಗ್ಗೆ ನಾಳೆ ಶುಭ ಸುದ್ದಿ ಕೊಡುತ್ತೇನೆ ಎಂದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು
ತುಂಗಭದ್ರಾ ಡ್ಯಾಂ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಆಯೇಷಾ ಬಾನು

Updated on: Aug 15, 2024 | 12:07 PM

ಕೊಪ್ಪಳ, ಆಗಸ್ಟ್​.15: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ ನಾಲ್ಕು ದಿನವಾಗಿದೆ. ಇದೀಗ ಹೊಸ ಗೇಟ್ ಅಳವಡಿಸಲು ಬೇಕಾದ ಎಲ್ಲಾ ಸಿದ್ದತೆ ಯುದ್ದೋಪಾದಿಯಲ್ಲಿ ನಡೆಯುತ್ತಿದೆ. ಸದ್ಯ ಈ ಬಗ್ಗೆ ಮಾತನಾಡಿರುವ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು (Kannaiah Naidu) ಅವರು ನಾಳೆ ಶುಭ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ.

ಕೊಪ್ಪಳ ತಾಲೂಕಿನ ಮುನಿರಾಬಾದ್​ನ ಟಿಬಿ ಡ್ಯಾಂ ಬಳಿ ತಜ್ಞ ಕನ್ನಯ್ಯ ನಾಯ್ಡು ಮಾತನಾಡಿದ್ದು, ಮೊದಲು ಕ್ರಸ್ಟ್​ ಗೇಟ್​​ ಕೂರಿಸೋದು ದೊಡ್ಡ ಚಾಲೇಂಜ್​​ ಇದೆ. 19ನೇ ಕ್ರಸ್ಟ್​​ ಗೇಟ್​ ಕೂರಿಸಿದ ನಂತರ ಅಷ್ಟೊಂದು ಕಷ್ಟ ಆಗಲ್ಲ. ನನ್ನ ಜೀವನದಲ್ಲಿ ಇದೊಂದು ದೊಡ್ಡ ಚಾಲೇಂಜ್. ಶ್ರೀಶೈಲ್​ ಡ್ಯಾಂ ಸಮಸ್ಯೆಗೂ ಈ ಡ್ಯಾಂ ಸಮಸ್ಯೆಗೂ ವ್ಯತ್ಯಾಸ ಇದೆ. ಗೇಟ್ ಕೂರಿಸುವ ವಿಡಿಯೋ ಮಾಡುವುದನ್ನ ಬೇಡ ಎಂದಿದ್ದೇನೆ. ಡ್ಯಾಂ ಸುತ್ತ 144 ಸೆಕ್ಸೆನ್ ಜಾರಿ ಮಾಡಲು ಮನವಿ ಮಾಡಿದ್ದೇನೆ. ಯಾವ ರಾಜಕಾರಣಿಗಳಿಗೂ ಎಂಟ್ರಿ ಕೊಡಬೇಡಿ ಎಂದಿದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡ್ತಿದ್ದೇವೆ. ಎಲ್ಲಾ ಒಳ್ಳೆಯದಾಗುತ್ತೆ, ನಾಳೆಯೊಳಗೆ ಗುಡ್ ನ್ಯೂಸ್ ಕೊಡ್ತೇನೆ. ಆಗ ಸೆಲೆಬ್ರೇಷನ್ ಮಾಡೋಣ ಎಂದು ತಿಳಿಸಿದರು.

ಇದನ್ನೂ ಓದಿ: ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್ ಗೇಟ್ ಅಳವಡಿಸುವ ಕಾರ್ಯ ಶನಿವಾರ ಮುಗಿಯಲಿದೆ: ಜಮೀರ್ ಅಹ್ಮದ್

ಒಟ್ಟು 5 ಸ್ಟಾಪ್ ಲಾಗ್ ಗೇಟ್‌ ಅಳವಡಿಕೆ ಕೆಲಸ ಆರಂಭ ಆಗಿದೆ. ಒಂದು ಸ್ಟಾಪ್ ಲಾಗ್ ಗೇಟ್ 25 TMC ನೀರನ್ನ ತಡೆಯುತ್ತದೆ. ಒಟ್ಟು 5 ಗೇಟ್‌ಗಳನ್ನ ಅಳವಡಿಕೆ ಮಾಡುತ್ತೇವೆ. ಅವಶ್ಯಕತೆ ಬಿದ್ದರೆ ಇನ್ನೂ 3 ಗೇಟ್​​​ ಅಳವಡಿಕೆ ಮಾಡುತ್ತೇವೆ. ಒಟ್ಟು 90 TMC ನೀರನ್ನ ಸಂಗ್ರಹ ಮಾಡಲು ಪ್ರಯತ್ನ ಮಾಡ್ತೇವೆ ಎಂದರು.

ತುಂಗಭದ್ರಾ ಜಲಾಶಯದ 19ನೇ ಗೇಟ್ ಕೂರಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಗೇಟ್ ಲಾಗ್​ನ ಪ್ಲೇಟ್ ಗಳನ್ನ ಟ್ರಕ್ ನಿಂದ ಕ್ರೇನ್ ಮೂಲಕ ಕೆಳಗಿಳಿಸುವಾಗ ಬ್ಯಾಲೆನ್ಸ್ ತಪ್ಪಿದ ಘಟನೆ ನಡೆದಿದೆ. ಜಲಾಶಯದ ಮೇಲ್ಭಾಗಕ್ಕೆ ತೆಗೆದುಕೊಂಡು ಹೋಗುವ ಮುನ್ನ ಘಟನೆ ನಡೆದಿದೆ. ತದ ನಂತರ ಕ್ರೇನ್ ನಿಂದ ಬೆಲ್ಟ್ ಹಾಕಿ ನಿಧಾನಕ್ಕೆ ಕಬ್ಬಿಣದ ಪ್ಲೇಟ್ ಗಳನ್ನ ಸಾಗಿಸಲಾಯಿತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ