AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ‘ಕನಕಗಿರಿ ಉತ್ಸವ’ದಲ್ಲಿ ಜಿಲ್ಲಾಡಳಿತ ಯಡವಟ್ಟು: ಮಹಿಳಾ ಗೋಷ್ಠಿಯಲ್ಲಿ ಜಟಾಪಟಿ

ಕನಕಗಿರಿ ಉತ್ಸವದ ಮೊದಲನೇ ದಿನ ಶನಿವಾರ ಕನಕಗಿರಿಯಲ್ಲಿ ಆಯೋಜಿಸಲಾಗಿದ್ದ ಮಹಿಳಾಗೋಷ್ಠಿಯ ಉದ್ಘಾಟನೆ ವಿಚಾರದಲ್ಲಿ ದೊಡ್ಡ ಪ್ರಮಾದವೇ ನಡೆದು ಹೋಗಿದೆ. ಜಿಲ್ಲಾಡಳಿತ ಅಧಿಕೃತವಾಗಿ ನೀಡಿರುವ ಎರಡೆರಡು ಆಹ್ವಾನ ಪತ್ರಿಕೆಗಳಲ್ಲಿ ಉದ್ಘಾಟಕರನ್ನು ಖಚಿತಡಿಸಿಕೊಳ್ಳುವಲ್ಲಿ ಭಾರಿ ಯಡವಟ್ಟು ಮಾಡಿದೆ. ಒಂದು ಆಹ್ವಾನ ಪತ್ರಿಕೆಯಲ್ಲಿ ಒಬ್ಬರನ್ನು ಮಹಿಳಾಗೋಷ್ಠಿ ಉದ್ಘಾಟಕರಾಗಿ ಆಹ್ವಾನಿಸಿದರೆ, ಮತ್ತೊಂದರಲ್ಲಿ ಇನ್ನೊಬ್ಬರ ಹೆಸರನ್ನು ಮುದ್ರಿಸುವ ಮೂಲಕ ನಗೆಪಾಟಲಿಗೀಡಾಗಿದೆ.

ಕೊಪ್ಪಳ ‘ಕನಕಗಿರಿ ಉತ್ಸವ’ದಲ್ಲಿ ಜಿಲ್ಲಾಡಳಿತ ಯಡವಟ್ಟು: ಮಹಿಳಾ ಗೋಷ್ಠಿಯಲ್ಲಿ ಜಟಾಪಟಿ
ಮಹಿಳಾ ಗೋಷ್ಠಿಯಲ್ಲಿ ಜಟಾಪಟಿ
ಸಂಜಯ್ಯಾ ಚಿಕ್ಕಮಠ
| Edited By: |

Updated on: Mar 02, 2024 | 5:28 PM

Share

ಕೊಪ್ಪಳ, ಮಾರ್ಚ್​ 2: ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ‘ಕನಕಗಿರಿ ಉತ್ಸವ’ (kanakagiri utsava) ಆರಂಭವಾಗಿದ್ದು, ಇಂದಿನಿಂದ ಎರಡು ದಿನಗಳ ಕಾಲ ಅನೇಕ ಗೋಷ್ಠಿಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಈ ಉತ್ಸವನ್ನು ಆಯೋಜಿಸಲಾಗಿದೆ. ವಿಶೇಷ ಅಂದರೆ ಕನಕಗಿರಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವರ ತವರು ಕ್ಷೇತ್ರ. ತವರು ಕ್ಷೇತ್ರದಲ್ಲಿ ಅದ್ದೂರಿಯಾಗಿಯೇ ಸಚಿವ ಶಿವರಾಜ್ ತಂಗಡಗಿ ಉತ್ಸವನ್ನು ನಡೆಸುತ್ತಿದ್ದಾರೆ. ಆದರೆ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಇಂದು ಕನಕಗಿರಿ ಪಟ್ಟಣದಲ್ಲಿ ಉತ್ಸವದ ಅಂಗವಾಗಿ ನಡೆದ ಮಹಿಳಾ ಗೋಷ್ಠಿ ಜಾಟಾಪಟಿಗೆ ಕಾರಣವಾದ ಘಟನೆ ನಡದಿದೆ.

ಕನಕಗಿರಿ ಉತ್ಸವದ ಮೊದಲನೇ ದಿನ ಶನಿವಾರ ಕನಕಗಿರಿಯಲ್ಲಿ ಆಯೋಜಿಸಲಾಗಿದ್ದ ಮಹಿಳಾಗೋಷ್ಠಿಯ ಉದ್ಘಾಟನೆ ವಿಚಾರದಲ್ಲಿ ದೊಡ್ಡ ಪ್ರಮಾದವೇ ನಡೆದು ಹೋಗಿದೆ. ಜಿಲ್ಲಾಡಳಿತ ಅಧಿಕೃತವಾಗಿ ನೀಡಿರುವ ಎರಡೆರಡು ಆಹ್ವಾನ ಪತ್ರಿಕೆಗಳಲ್ಲಿ ಉದ್ಘಾಟಕರನ್ನು ಖಚಿತಡಿಸಿಕೊಳ್ಳುವಲ್ಲಿ ಭಾರಿ ಯಡವಟ್ಟು ಮಾಡಿದೆ. ಒಂದು ಆಹ್ವಾನ ಪತ್ರಿಕೆಯಲ್ಲಿ ಸಾಹಿತಿ‌ ಸಾವಿತ್ರಿ ಮುಜುಮದಾರ ಅವರನ್ನ ಮಹಿಳಾಗೋಷ್ಠಿ ಉದ್ಘಾಟಕರಾಗಿ ಆಹ್ವಾನಿಸಲಾಗಿದೆ. ಇನ್ನೊಂದ ಆಹ್ವಾನ ಪತ್ರಿಕೆಯಲ್ಲಿ ಪ್ರಗತಿಪರ ಚಿಂತಕಿ‌ ಶೈಲಜಾ ಹಿರೇಮಠ ಅವರನ್ನ ಗೋಷ್ಠಿ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಈ ರೀತಿ ಎರಡೆರಡು ಆಹ್ವಾನ ಪತ್ರಿಕೆಗಳನ್ನ ಮುದ್ರಿಸಿ ಒಂದೇ ಗೋಷ್ಠಿಗೆ ಇಬ್ಬರು ಉದ್ಘಾಟಕರನ್ನ ಆಹ್ವಾನಿಸುವ ಮೂಲಕ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗೆಪಾಟಲಿಗೀಡಾದ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಇಂದಿನಿಂದ 2 ದಿನಗಳ ಕಾಲ ಕನಕಗಿರಿ ಉತ್ಸವ: ಕಾಲಿದ್ದವರು ಹಂಪೆ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು

ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನದ ಜವಾಬ್ದಾರಿ ಹೊತ್ತಿಕೊಂಡಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ ತಂಗಡಿ ಜಿಲ್ಲೆಯ ಅಧಿಕಾರಿಗಳೇ ಇಷ್ಟೊಂದು ಬೇಜವಾಬ್ದಾರಿ ತೋರಿದ್ದು ಭಾರಿ ಚರ್ಚೆಗೆ ಆಸ್ಪದ ನೀಡಿದಂತಾಗಿದೆ. ಮಹಿಳಾಗೋಷ್ಠಿಗೆ ಇಬ್ಬರು ಮಹಿಳೆಯರನ್ನ ಆಹ್ವಾ‌ನಿಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಯಾರನ್ಮು ಮೆಚ್ಚಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನುವುದು ಸಾಹಿತ್ಯಾಸಕ್ತರಿಗೆ ಯಕ್ಷಪ್ರಶ್ನೆಯಾಗಿದೆ.

ಇನ್ನು ಇಬ್ಬರಿಗೂ ಆಹ್ವಾನ ಪತ್ರಿಕೆಯನ್ನು ಕಳಿಸಿ, ಗೋಷ್ಠಿಗೆ ಬರಬೇಕು ಅಂತ ತಿಳಿಸಿದ್ದರಿಂದ ಇಬ್ಬರು ಕೂಡ ಮಹಿಳಾ ಗೋಷ್ಠಿಗೆ ಆಗಮಿಸಿದ್ದರು. ಆದರೆ ಯಾರು ಉದ್ಘಾಟನೆ ಮಾಡಬೇಕು ಅನ್ನೋದು ಬಂದಾಗ ಇಬ್ಬರು ಉದ್ಘಾಟಕರ ನಡುವೆ ಗೊಂದಲ ಉಂಟಾಗಿತ್ತು. ಸಾಹಿತಿ ಶೈಲಜಾ ಹಿರೇಮಠ ಅವರು ವೇದಿಕೆಯ ಕೆಳಗೆ ಹೋಗಿ ಕೂತುಕೊಂಡು, ತಮ್ಮ ಆಕ್ರೋಶ ಹೊರಹಾಕಿದರೆ, ಇತ್ತ ಸಾವಿತ್ರಿ ಮುಜುಮದಾರ್ ಕೂಡ ವೇದಿಕೆಯಲ್ಲಿಯೇ ದೂರದಲ್ಲಿ ಕೂತುಕೊಂಡಿದ್ದರು. ಕೊನೆಗೆ ಇಬ್ಬರು ಉದ್ಘಾಟಕರ ಮನವೊಲಿಸುವಲ್ಲಿ ಸಂಘಟಕರು ಯಶಸ್ವಿಯಾದರು. ನಂತರ ಉದ್ಘಾಟಕರು ವೇದಿಕೆಗೆ ಆಗಮಿಸಿ ದೀಪ ಹಚ್ಚುವ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು.

ಇದನ್ನೂ ಓದಿ: ಭೀಕರ ಬರದಿಂದ ತತ್ತರಿಸುತ್ತಿದೆ ಕೊಪ್ಪಳ: ಬಹುತೇಕ ಕೆರೆಗಳು ಖಾಲಿ ಖಾಲಿ, ಕುಡಿಯುವ ನೀರಿಗೂ ತತ್ವಾರ

ಈ ರೀತಿ ಅನಗತ್ಯ ಗೊಂದಲ ಸೃಷ್ಟಿಗೆ ಯಾರು ಕಾರಣ ಅನ್ನೊದನ್ನ ಜಿಲ್ಲಾಡಳಿತ ಪತ್ತೆ ಹಚ್ಚಿ ಸೂಕ್ತ ಕ್ರಮ‌ ಕೈಗೊಂಡಾಗ ಮಾತ್ರ ಗೋಷ್ಠಿಗಳ ಗಾಂಭೀರ್ಯತೆ ಕಾಪಾಡಲು ಸಾಧ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು ವಿಶೇಷವಾಗಿತ್ತು.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.