AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ-ವಾಡಿ ರೈಲ್ವೆ ಯೋಜನೆಗೆ ಚಾಲನೆ: ಶತಮಾನಗಳ ಕನಸು ನನಸು

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಗದಗ-ವಾಡಿ ರೈಲು ಮಾರ್ಗಕ್ಕೆ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಚಾಲನೆ ನೀಡಿದ್ದಾರೆ. ಆ ಮೂಲಕ ಶತಮಾನಗಳ ಕನಸು ನನಸಾಗಿದ್ದು, ಕುಷ್ಟಗಿಗೆ ಮೊದಲ ಬಾರಿಗೆ ರೈಲು ಸಂಪರ್ಕ ದೊರೆತಿದೆ. ಈ ಹೊಸ ಮಾರ್ಗವು ಮುಂಬೈ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕವನ್ನು ಸಂಪರ್ಕಿಸುತ್ತದೆ.

ಗದಗ-ವಾಡಿ ರೈಲ್ವೆ ಯೋಜನೆಗೆ ಚಾಲನೆ: ಶತಮಾನಗಳ ಕನಸು ನನಸು
ಗದಗ-ವಾಡಿ ರೈಲ್ವೆ ಯೋಜನೆಗೆ ಸಚಿವ ವಿ ಸೋಮಣ್ಣ ಚಾಲನೆ
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on:May 15, 2025 | 12:52 PM

Share

ಕೊಪ್ಪಳ, ಮೇ 15: ಜಿಲ್ಲೆಯ ಕುಷ್ಟಗಿಯಲ್ಲಿ ಗದಗ-ವಾಡಿ (Gadag-Wadi) ರೈಲ್ವೆ ಯೋಜನೆಗೆ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ (V. Somanna) ಗುರುವಾರ ಹಸಿರು ನಿಶಾನೆ ತೋರಿಸಿದ್ದಾರೆ. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ರೈಲ್ವೆ ಆರಂಭಿಸಲಾಗಿದೆ. ಆ ಮೂಲಕ ಶತಮಾನಗಳ ಕನಸು ನನಸಾಗಿದೆ. ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಬಸವರಾಜ್ ರಾಯರೆಡ್ಡಿ ಮತ್ತು ದೊಡ್ಡನಗೌಡ ಪಾಟೀಲ್ ಭಾಗಿಯಾಗಿದ್ದರು.

ಗದಗ-ತಳಕಲ್- ಕುಷ್ಟಗಿ ರೈಲು ಮಾರ್ಗಕ್ಕೆ ಇಂದು ಚಾಲನೆ ನೀಡಲಾಗಿದೆ. ಜೊತೆಗೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ಪ್ಯಾಸೆಂಜರ್ ರೈಲು ಕೂಡ ಆರಂಭವಾಗಿದೆ. ಈಗಾಗಲೇ ತಳಕಲ್​​ವರೆಗೂ ಹಳೆಯ ರೈಲು ಮಾರ್ಗ ಇದ್ದು, ಇದೀಗ ತಳಕಲ್​ನಿಂದ ಕುಷ್ಟಗಿ ವರೆಗೂ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಈ ನೂತನ ರೈಲು ಮಾರ್ಗದಿಂದ ಮುಂಬೈ ಕರ್ನಾಟಕ-ಕಲ್ಯಾಣ ಕರ್ನಾಟಕದ ಮಧ್ಯೆ ಸಂಪರ್ಕ ಸುಲಭವಾಗಲಿದೆ.

ರಾಯರೆಡ್ಡಿ ಅವರ ಶ್ರಮ‌ ಫಲ ಕೊಟ್ಟಿದೆ ಎಂದ ವಿ. ಸೋಮಣ್ಣ

ರೈಲ್ವೆ ಯೋಜನೆಗೆ ಚಾಲನೆ ಬಳಿಕ ಮಾತನಾಡಿದ ಸಚಿವ ವಿ. ಸೋಮಣ್ಣ, ರೈಲ್ವೆ ಇಲಾಖೆ ಒಂದು ಸೂಕ್ಷ್ಮ ಇಲಾಖೆ. ರಾಯರೆಡ್ಡಿ ಅವರ ಶ್ರಮ‌ ಫಲ ಕೊಟ್ಟಿದೆ. ಫಲ ಕೊಡುವುದಕ್ಕೆ ಕಾರಣ‌ ಪ್ರಧಾನಿ ಮೋದಿ. ರೆಲ್ವೆ ಇಲಾಖೆಯಲ್ಲಿ ನಾವು ಕಾರ್ಯಕ್ರಮ ಮಾಡಲ್ಲ. ಸುಮ್ಮನೆ ಗೊಂದಲ ಆಗತ್ತೆ. ಇಲಾಖೆ ನಿಂತ ನೀರಲ್ಲ, ಹರಿಯೋ ನೀರು. ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ. ಈ ಯೋಜನೆ ಆರಂಭವಾಗಿದ್ದು, ದೇವೆಗೌಡರು ಪ್ರಧಾನಿಯಾದಾಗ. ರೆಲ್ವೆ ಅಭಿವೃದ್ಧಿಯಾದರೆ, ದೇಶದ ಅಭಿವೃದ್ಧಿ. ವಾಜಪೇಯಿ ಕಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಆರಂಭವಾಯಿತು. ಮೋದಿ ಅವರ ಕಾಲದಲ್ಲಿ ರೆಲ್ವೆ ಇಲಾಖೆ ದೊಡ್ಡ ಸಾಧನೆ ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ
Image
ವಿದ್ಯುತ್ ಸಮಸ್ಯೆ ಬಗ್ಗೆ ಬೆಸ್ಕಾಂಗೆ ವಾಟ್ಸ್​ಆ್ಯಪ್​ನಲ್ಲೇ ದೂರು ನೀಡಿ!
Image
ಹುಬ್ಬಳ್ಳಿ-ಧಾರವಾಡ ಪಾಲಿಕೆ ಹೊಸ ಐಡಿಯಾ: ಪ್ಲಾಸ್ಟಿಕ್​​ನಿಂದ ರಸ್ತೆ
Image
ಹೈಟೆಕ್ ಆಗಲಿದೆ ಜೋಗ: ಆರ್ಟ್ ಗ್ಯಾಲರಿ, ವ್ಯೂ ಡೆಕ್, ಇನ್ನಷ್ಟು ಸೌಕರ್ಯ
Image
ಕೊಪ್ಪಳದಲ್ಲಿ ಟಾಟಾ ಏಸ್​ ವಾಹನ ಪಲ್ಟಿಯಾಗಿ ನರೇಗಾ ಕಾರ್ಮಿಕರಿಗೆ ಗಾಯ

ಬಹುದಿನದ ಕನಸು ನನಸಾಗಿದೆ ಎಂದ ಸಚಿವ ಶಿವರಾಜ್ ತಂಗಡಗಿ

ಈ ವೇಳೆ ಮಾತನಾಡಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಗದಗ-ವಾಡಿ ರೈಲ್ವೆ ಯೋಜನೆ ಈ ಭಾಗದ ಕನಸಾಗಿತ್ತು. ಇದೀಗ ಆ ಬಹುದಿನದ ಕನಸು ನನಸಾಗಿದೆ. ಈ ಕನಸು ಚಿಗರಲಿಕ್ಕೆ ಬಸವರಾಜ್ ರಾಯರೆಡ್ಡಿ ಕಾರಣ. ಇದಕ್ಕಾಗಿ ಬಹಳ ಪ್ರಯತ್ನ ಪಟ್ಟಿದ್ದಾರೆ. ಯೋಜನೆಗೆ 2013-14 ರಲ್ಲಿ ಅನುಮೋದನೆ ಸಿಕ್ಕಿತ್ತು. ಇಷ್ಟು ಬೇಗ ಯೋಜನೆ ಪೂರ್ಣ ಆಗಿದ್ದು, ಇದೇ ಮೊದಲ ಕಾಮಗಾರಿ ಎನ್ನಿಸುತ್ತದೆ ಎಂದು ಹೇಳಿದ್ದಾರೆ.

ಸಂತೋಷ ವ್ಯಕ್ತಪಡಿಸಿದ ಬಸವರಾಜ್ ರಾಯರೆಡ್ಡಿ

ಕಾರ್ಯಕ್ರಮದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಮಾತನಾಡಿ, ಇಂದು ನನಗೆ ಬಹಳ ಸಂತೋಷದ ದಿನ. ಗದಗ-ವಾಡಿ ರೈಲ್ವೆ ಯೋಜನೆಗೆ ಚಾಲನೆ ಸಿಕ್ಕಿದೆ. ವಿ. ಸೋಮಣ್ಣ ಉದ್ಘಾಟನೆ ಮಾಡಿರುವುದು ಬಹಳ ಸಂತೋಷ. ರೈಲ್ವೆ ಮಾರ್ಗ ಅನ್ನೋದು ಅಷ್ಟು ಸುಲಭದ ಕೆಲಸ ಅಲ್ಲ. ಬಹಳ ಪರಿಶ್ರಮ ಬೇಕು. ನಾನು ಲೋಕಸಭೆ ಸಂಸದನಾದಾಗ ಮುನಿರಾಬಾದ್, ಮೆಹಬೂಬ್ ರೈಲ್ವೆ ಯೋಜನೆಗೆ ಅನುಮತಿ ಕೊಡಿಸಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಪ್ಲಾಸ್ಟಿಕ್​​ನಿಂದ ನಿರ್ಮಾಣವಾಯ್ತು ರಸ್ತೆ: ಹೊಸ ಐಡಿಯಾದಿಂದ ಪಾಲಿಕೆಗೆ ಉಳಿತಾಯ

ರೈಲ್ವೆ ಯೋಜನೆಗೆ ಭೂ ಸ್ವಾಧೀನ ಕಷ್ಟ ಇದೆ. 2009ರಲ್ಲಿ ನಾನು ಲೋಕಸಭೆಗೆ ಸ್ಪರ್ಧೆ ಮಾಡಿದ್ದೆ. 2013 -14 ರಲ್ಲಿ ನಾನು ಅಮರೇಗೌಡ ಖರ್ಗೆ ಅವರನ್ನು ಭೇಟಿ ಮಾಡಿದ್ದೆ. ನಮ್ಮ ಜೊತೆ ಖರ್ಗೆ ರೈಲ್ವೆ ಮಂತ್ರಿಗಳ ಕಚೇರಿಗೆ ಬಂದಿದ್ದರು. ನಾವು ಈ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೆನೆಯಬೇಕು. ಸಿದ್ದರಾಮಯ್ಯ ಕೂಡ ಭೂಸ್ವಾಧೀನಕ್ಕೆ ಹಣ ಕೊಟ್ಟಿದ್ದಾರೆ. ಯೋಜನೆಗೆ ಬಹುತೇಕ ಭೂ ಸ್ವಾಧೀನ ಆಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ಕೇಂದ್ರ ಕರ್ನಾಟಕಕ್ಕೆ 7500 ಕೋಟಿ ರೂ ಕೊಟ್ಟಿದ್ದಾರೆ. ಆದರೆ ರೆಲ್ವೆ ಯೋಜನೆಗೆ ಈ ಹಣ ಸಾಲಲ್ಲ. ಸೋಮಣ್ಣ ಅವರಿಗೆ ಇರುವ ಗ್ರೇಟ್ನೆಸ್, ರೆಲ್ವೆ ಅಧಿಕಾರಿಗಳಿಗೆ ಇರಲ್ಲ. ನಾನು 1995 ರಲ್ಲಿ ಶಾಸಕನಾಗಿದ್ದೆ. ಆದರೆ ರೆಲ್ವೆ ಅಧಿಕಾರಿಗಳ ವರ್ತನೆ ಸರಿ ಇಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:50 pm, Thu, 15 May 25

ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಧಿಕಾರಿ ರಮ್ಮಿ ಆಟದಲ್ಲಿ ಮಗ್ನ
ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಧಿಕಾರಿ ರಮ್ಮಿ ಆಟದಲ್ಲಿ ಮಗ್ನ