ಮಾವ ಕುಡಿತ ಬಿಡು ಎಂದರೇ ಅಳಿಯ ಮನೆ ಬಿಟ್ಟ; 24 ವರ್ಷಗಳ ಬಳಿಕ ಮರಳಿ ಮನೆಗೆ ಬಂದಿದ್ದು ಮಾತ್ರ ಆ ಒಂದು ಕಾರಣಕ್ಕೆ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಖೇಡ ಗ್ರಾಮದಲ್ಲಿ ಸೋದರಮಾವ, ಅಳಿಯನಿಗೆ ಕುಡಿತ ಬಿಡು ಎಂದಿದ್ದಕ್ಕೆ ಮನೆ ಅಳಿಯ ಮನೆ ಬಿಟ್ಟು ಹೋಗಿದ್ದಾನೆ.

ಮಾವ ಕುಡಿತ ಬಿಡು ಎಂದರೇ ಅಳಿಯ ಮನೆ ಬಿಟ್ಟ; 24 ವರ್ಷಗಳ ಬಳಿಕ ಮರಳಿ ಮನೆಗೆ ಬಂದಿದ್ದು ಮಾತ್ರ ಆ ಒಂದು ಕಾರಣಕ್ಕೆ
24 ವರ್ಷದ ಬಳಿಕ ಮನೆಗೆ ಮರಳಿದ ಗಂಗಾಧರ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 06, 2022 | 3:15 PM

ಕುಡಿತದ ದಾಸನಾಗಿದ್ದ ಅಳಿಯನಿಗೆ, ಕುಡಿತ ಬಿಡು ಅಂತ ಸೋದರಮಾವ ಬುದ್ದಿ ಹೇಳಿದ್ದ ಅಷ್ಟೇ, ಅಳಿಯ ಸಿಟ್ಟಾಗಿ ಮನೆ ಬಿಟ್ಟು ಹೋಗಿದ್ದನು. ಕೊನೆಗೆ ೨೪ ವರ್ಷಗಳ ಬಳಿಕ ಆತ ಮನೆಗೆ ವಾಪಸ್ ಆಗಿದ್ದಾನೆ. ಅದು ಹೇಗೆ ಗೊತ್ತಾ?

ಮನೆ ಬಿಟ್ಟು ಹೋದ ವ್ಯಕ್ತಿಯ ಹೆಸರು ಗಂಗಾಧರ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಖೇಡ ಗ್ರಾಮದ ನಿವಾಸಿಯಾಗಿದ್ದಾನೆ. ಈ ಗಂಗಾಧರ ಕಳೆದ 24 ವರ್ಷಗಳ ಹಿಂದೆ ಅವರ ಮಾವ ಸಿದ್ದಪ್ಪ ಮದ್ಯ ಸೇವನೆ ಮಾಡಬೇಡ ಅದರಿಂದ ದೂರ ಇರು ಎಂದು ಬೈದು ಬುದ್ದಿ ಹೇಳಿದ್ದರು. ಮಾವ ಬೈದಿರುವ ಕಾರಣಕ್ಕೆ ಗ್ರಾಮವನ್ನೆ ಬಿಟ್ಟು ಹೋಗಿದ್ದನು. ಹೀಗೆ ಮನೆ ಬಿಟ್ಟು ಹೋದವನು, ಮಂಗಳೂರು ತಲುಪಿದ್ದನು. ಮಂಗಳೂರಿನ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನ್ನು.

ಈ ಕಡೆ ಇವರ ಮನೆಯವರು ಗಂಗಾಧರನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಯಾವುದೇ ಪ್ರಯೋಜನವಾಗಿರಲಿಲ್ಲ. ಹುಡುಕಾಟ ನಡೆಸಿ, ಬೇಸತ್ತ ಕುಟುಂಬಸ್ಥರು ಗಂಗಾಧರ ಮೃತ ಪಟ್ಟಿರಬಹುದು ಎಂದು ಕೈಚೆಲ್ಲಿ ಕುಳಿತುಕೊಂಡಿದ್ದರು. ಕುಟುಂಬಸ್ಥರನ್ನು ನೆನಪು ಮಾಡಿಕೊಳ್ಳದೆ 24 ವರ್ಷಗಳಿಂದ ಮಂಗಳೂರಿನಲ್ಲಿಯೇ ಜೀವನ ನಡೆಸಿದ್ದನು. ಹೀಗೆ ಜೀವನ ನಡೆಸುತ್ತಿದ್ದವನಿಗೆ ಮನೆ ನೆನಪಾಗಿದ್ದು, ಇತ್ತೀಚಿಗೆ ಆಧಾರ್​ ಕಾರ್ಡ್​ಗಾಗಿ.

ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಈತನಿಗೆ ಬ್ಯಾಂಕ್ ಖಾತೆ ತೆರೆಯುವ ಅವಶ್ಯಕತೆ ಉಂಟಾಗಿದೆ. ಹೀಗಾಗಿ ಬ್ಯಾಂಕ್​ನಲ್ಲಿ ಖಾತೆ ತೆರೆಯಲು ಹೋದಾಗ ಸಿಬ್ಬಂದಿ ಆಧಾರ ಕಾರ್ಡ್ ಕೇಳಿದ್ದಾರೆ. ಆದರೆ ಈತನ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಹೀಗಾಗಿ ಮರಳಿ ತನ್ನ ಸ್ವಗ್ರಾಮ ಚಿಕ್ಕಖೇಡಕ್ಕೆ ಆಗಮಿಸಿದ್ದಾನೆ.

ಹೀಗೆ ಊರಿಗೆ ಬಂದ ಗಂಗಾಧರ ತನ್ನ ಮನೆ ಎಲ್ಲಿದೆಯಂತ ಹುಡುಕಾಟ ನಡೆಸಿದ್ದಾನೆ. ಆದರೆ ಆತನಿಗೆ ಮನೆ ದೊರೆತ್ತಿಲ್ಲ. ಇದರಿಂದ ಬೆಸತ್ತು ಪುನಃ ಮಂಗಳೂರಿಗೆ ಹೋಗಿದ್ದಾನೆ. ಮತ್ತೆ ಅನಿವಾರ್ಯ ಮತ್ತೆ ಚಿಕ್ಕಖೇಡ ಗ್ರಾಮಕ್ಕೆ ಆಗಮಿಸಿ, ಮನೆಯನ್ನು ಹುಡುಕಾಟ ನಡೆಸಿದ್ದಾನೆ. ಗ್ರಾಮಸ್ಥರು ಮನೆಯನ್ನು ತೊರಿಸಿದ್ದಾರೆ. ಹೆಂಡತಿ, ಮಕ್ಕಳನ್ನು ಕಂಡು ಆಶ್ಚರ್ಯಗೊಂಡಿದ್ದಾನೆ.

ಗಂಗಾಧರನಿಗೆ ಹೆಂಡತಿ ಸೇರಿದಂತೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಕ್ಕಳು 2 ವರ್ಷ ಇದ್ದಾಗ ಅಪ್ಪ ಮನೆ ಬಿಟ್ಟು ಹೋಗಿದ್ದನು. ಈಗ ಮಕ್ಕಳು ದೊಡ್ಡವರು ಆಗಿದ್ದಾರೆ. ಮಕ್ಕಳು ತಮಗೆ ಬುದ್ದಿ ತಿಳಿದಾಗಿನಿಂದ ತಂದೆಗಾಗಿ ಹುಡುಕಾಟ ನಡೆಸಿ, ತಂದೆ ಬದುಕಿಲ್ಲ ಎಂದು ಕೈಚಲ್ಲಿ ಕೂತಿದ್ದರು . ಆದರೆ ಹೆಂಡತಿಗೆ ಮಾತ್ರ ಗಂಡನು ಇನ್ನೂ ಬದುಕಿದ್ದಾನೆ ಎನ್ನುವ ನಂಬಿಕೆಯಲ್ಲಿಯೇ ತಾಳಿಯನ್ನು ತೆಗೆಯದೆ, ಗಂಗಾಧರನಿಗಾಗಿ ಕಾಯುತ್ತಿದ್ದಳು. ಪತ್ನಿಯ ಶಬರಿ ಕಾಯುವಿಕೆಗೆ ಫಲ ಸಿಕ್ಕಿದ್ದು, ಪತಿ 24 ವರ್ಷಗಳ ನಂತರ ಗಂಗಾಧರ ಮರಳಿ ಮನೆಗೆ ಬಂದಿದ್ದಾನೆ. ಸದ್ಯ ಗಂಗಾಧರನ ತಿರುಗಿ ಬಂದಿರುವುದು ಮಕ್ಕಳು, ಹೆಂಡತಿ ಮೊಗದಲ್ಲಿ ಸಂತಸ ಮೂಡಿದೆ. ದೇವರು ನಮ್ಮ ಮನೆಗೆ ಬಂದಿದ್ದಾನೆ ಎನ್ನುವ ಮಾತುಗಳು ಮಕ್ಕಳಲ್ಲಿ ಕೇಳಿ ಬರುತ್ತಿವೆ. ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಒಟ್ಟಾರೆಯಾಗಿ ಆಧಾರ ಕಾರ್ಡ್ ಕಾರಣದಿಂದ 24 ವರ್ಷಗಳ ನಂತರ ಮನೆಗೆ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ವರದಿ- ದತ್ತಾತ್ರೇಯ ಪಾಟೀಲ್‌ ಟಿವಿ9 ಕೊಪ್ಪಳ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Sun, 6 November 22

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ