AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಎಸ್​​ಸಿ ಹಗರಣ: ಪ್ರಿಯಾಂಕ್ ಖರ್ಗೆ RDPR ಮಂತ್ರಿಯಾಗಿದ್ದಾಗ ಏನೇನಾಯ್ತು ಅಂತ ಎಳೆ ಎಳೆಯಾಗಿ ಬಿಚ್ಚಿಟ್ಟ ಕುಮಾರಸ್ವಾಮಿ

ಕೆಪಿಎಸ್​​​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದ್ದು, ಐಎಎಸ್ ಅಧಿಕಾರಿ ಹಾಗೂ ಮಧ್ಯವರ್ತಿಯನ್ನ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದೆ. ಇದರ ಮಧ್ಯೆ ಕೆಪಿಎಸ್​​​​ಸಿ ಹಗರಣ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಆರ್​​​​ಡಿಪಿಆರ್ ಮಂತ್ರಿಯಾಗಿದ್ದಾಗ ಏನೆಲ್ಲಾ ಆಯ್ತು ಎನ್ನುವುದನ್ನು ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕೆಪಿಎಸ್​​ಸಿ ಹಗರಣ: ಪ್ರಿಯಾಂಕ್ ಖರ್ಗೆ RDPR ಮಂತ್ರಿಯಾಗಿದ್ದಾಗ ಏನೇನಾಯ್ತು ಅಂತ ಎಳೆ ಎಳೆಯಾಗಿ ಬಿಚ್ಚಿಟ್ಟ ಕುಮಾರಸ್ವಾಮಿ
Kumaraswamy And Priyank Kharge
ಸುನಿಲ್​ ಎಮ್​ ಹೆಚ್​
| Edited By: |

Updated on:Sep 02, 2026 | 4:55 PM

Share

ಬೆಂಗಳೂರು, (ಸೆಪ್ಟೆಂಬರ್ 02): ಕೆಪಿಎಸ್​​​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ  ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಮಧ್ಯೆ ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ RDPR ಇಂಜಿನಿಯರ್​ಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆಯತ್ತ ಒದೊಂದೇ ಬಾಣ ಬಿಡುತ್ತಿದ್ದಾರೆ. ಹೌದು…ಅಕ್ರಮವನ್ನು ಪ್ರಿಯಾಂಕ ಖರ್ಗೆ ಮಾಡಿದ್ಧಾರೆ ಅಂತ ಹೇಳಲ್ಲ. Rdpr ಅಧಿಕಾರಿಗಳು ಏನ್ ಮಾಡಿದ್ರು? RDPR ಮಂತ್ರಿ ಪ್ರಿಯಾಂಕ ಖರ್ಗೆ ಆಗಿರ್ಲಿಲ್ವಾ? ಎಕ್ಸಾಮ್ ನಡೆಸೋದು ಕೆಪಿಎಸ್‌ಸಿ, ಆದರೆ ಆದೇಶ ಮಾಡೋದು ಸರ್ಕಾರ. RDPR ಇಲಾಖೆ ಯಾರ್ ಕೈಯಲ್ಲಿ ಇತ್ತು. ಮಂತ್ರಿ‌ ಗೊತ್ತಿಲ್ಲದೇ 24 ಜನರಿಗೆ ಅಪಾಯಿಂಟ್ ಮೆಂಟ್ ಹೇಗೆ ಕೊಡ್ತಾರೆ? ಆದೇಶ ಪತ್ರ ಕೊಟ್ಟವರು ನಿಮ್ಮ ಇಲಾಖೆ ಅಲ್ವಾ? ಇದನ್ನು ಪತ್ತೆ ಹಚ್ಚೋಕೆ ಒಂದುವರೆ ವರ್ಷಗಳ ಕಾಲ ಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಣ್ಣು ಇಲ್ಲದ ಒಬ್ಬ ವ್ಯಕ್ತಿ ಪರೀಕ್ಷೆ ಬರೆದು ತಹಶಿಲ್ದಾರ್ ಆಗಿದ್ದ. ಆತನ ಕೆಲಸ ರದ್ದು ಮಾಡಿದ್ದು ನಿಮ್ಮ ಸರ್ಕಾರ. ಅದಕ್ಕೆ ದೇವೇಗೌಡರು ಪತ್ರ ಬರೆದಿದ್ದು. ನಮ್ಮ ಸಂಬಂಧಿಕರ ಬಗ್ಗೆ ನೋಡಿ ಎಂದು ಪತ್ರ ಬರೆದಿರಲಿಲ್ಲ ಪ್ರಿಯಾಂಕ್ ಖರ್ಗೆ ಅವರೇ. ನಾನು ಕೆಪಿಎಸ್ಸಿ ಮಾಜಿ ಅಧ್ಯಕ್ಷರನ್ನ ಜೈಲಿನಲ್ಲಿ ಭೇಟಿ ಮಾಡಿದ್ದು ನಿಜ. ನಾನು ಅವರನ್ನ ಭೇಟಿಯಾದಗ ಅವರು ಅಧ್ಯಕ್ಷ ಸ್ಥಾನದಲ್ಲಿ ಇರಲಿಲ್ಲ.ಆ ಅಭ್ಯರ್ಥಿ ಕಾಲದಲ್ಲಿ 13 ಸಾವಿರ ಅಭ್ಯರ್ಥಿಗಳಿಗೆ ಕೆಲಸ ಕೊಟ್ಟಿದ್ದಾರೆ. ಯಾವುದೇ ರೀತಿ ಒಂದು ರೂ ಹಣ ತೆಗೆದುಕೊಂಡಿಲ್ಲ. ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಮನೆಗೆ ಹೋಗಿದ್ದ. ನಮ್ಮ ಮೇಲಿನ ವಿಚಾರಕ್ಕೆ ಮಾಜಿ ಅಧ್ಯಕ್ಷರನ್ನ ದ್ವೇಷ ಮಾಡುಬೇಡಿ ಎಂದು ಹೇಳಿದ್ದೆ. ಯಾವ ರೀತಿ ಅಧ್ಯಕ್ಷರ ಆಯ್ಕೆ ಆಯ್ತು ಅಂತ ನಿಮ್ಮ ತಂದೆ ಕೇಳಿ ತಿಳಿದುಕೊಳ್ಳಿ ಖರ್ಗೆ ಅವರೇ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕೆಪಿಎಸ್​​​​ಸಿ ಹಗರಣ: ಸಿಐಡಿ ಮುಂದೆ ಮತ್ತಷ್ಟು ಅಭ್ಯರ್ಥಿಗಳ ತಪ್ಪೊಪ್ಪಿಗೆ, ಸಿಎಂ ಡಿಕೆಶಿ ಮಹತ್ವದ ಹೇಳಿಕೆ

ಕೆಪಿಎಸ್ಸಿ ಸಂಸ್ಥೆ ಆರಂಭ ಆಗಿದ್ದು ಒಳ್ಳೆಯ ಉದ್ದೇಶಕ್ಕೆ. ಈಗ ಸಂಸ್ಥೆಯಲ್ಲಿ ಬೇರೆಯ ರೀತಿ ನೆಡೆಯುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಕಾರ್ಯದರ್ಶಿ ನೇಮಕ ಮಾಡುತ್ತಾರೆ. ಪರೀಕ್ಷೆ ನೆಡೆಸಲು ಸರ್ಕಾರದಿಂದ ಒಬ್ಬ ಕಂಟ್ರೋಲರ್ ನೇಮಕ ಮಾಡುತ್ತಾರೆ. ರೆಸಾರ್ಟ್ ನಲ್ಲಿ‌ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರು ಒಂದು ಮಾತು ಹೇಳಿದ್ದಾರೆ, ಮಾಜಿ ಕೆಪಿಎಸ್ಸಿ ಅಧ್ಯಕ್ಷರನ್ನ ಜೈಲಿನಲ್ಲಿ ಭೇಟಿ ಮಾಡಿರುವ ಬಗ್ಗೆ ಮತನಾಡಿದ್ದಾರೆ. ಅದೇ ರೀತಿ 2011 ಕೆಪಿಎಸ್ಸಿ ಬ್ಯಾಜ್ ಬಗ್ಗೆ ಮತನಾಡಿದ್ದಾರೆ. ಆ ಸಂದರ್ಭದಲ್ಲಿ ಸರ್ಕಾರ ತಡೆ ಹಿಡಿದ ಆದೇಶ ರದ್ದು ಪಡೆಸಲು ಕೋರ್ಟ್ ಗೆ ಅಭ್ಯರ್ಥಿಗಳು ಹೋಗಿದ್ರು. 362 ಪರೀಕ್ಷೆ ಬರೆದ ಅಭ್ಯರ್ಥಿಗಳು ಫ್ರೀಡಂ ಪಾರ್ಕ್‌ ನಲ್ಲಿ ಪ್ರತಿಭಟನೆ ಆಯ್ತು. ಇದು ಇಡೀ ರಾಜ್ಯದಲ್ಲಿ ದೊಡ್ಡ ಸುದ್ದಿ ಆಯ್ತು ಎಂದರು.

ಇಷ್ಟೆಲ್ಲಾ ಆಗಿದ್ದಾಗ ರಾಜೀನಾಮೆ ಕೇಳ್ಬೇಕೋ ಬೇಡವೋ

ಪುಡ್ ಡಿಪಾರ್ಟ್ಮೆಂಟ್‌ನಲ್ಲಿ ಜ್ಞಾನೇಂದ್ರ ಇದ್ರು. ಪೊಲೀಸ್ ಆಫಿಸರ್ ಮಕ್ಕಳನ್ನ ಸೆಲೆಕ್ಟ್ ಮಾಡಲು ಏನು ಮಾಡಿದ್ರು? ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಿದ್ದಾರೆ. ಮೊನ್ನೆ ನಡೆದ ಕೆಎಎಸ್ ಪರೀಕ್ಷೆಯಲ್ಲಿ ನಡೆದಿದೆ ಸಿಐಡಿ ತನಿಖೆ‌ ನಡೆಯುತ್ತಿದೆ ಅಲ್ವಾ ಅದನ್ನ ನ್ಯಾಯಯುತವಾಗಿ ನಡೆಸಿ. ತೋರಿಕೆಗೆ ತನಿಖೆ ಮಾಡಿ ಮುಚ್ಚಾಕಬೇಡಿ. 2011ರಲ್ಲಿನ ಕೆಎಎಸ್ ಪರೀಕ್ಷೆಯನ್ನ ಯಾಕೆ ಬರ್ಕಾಸ್ ಮಾಡಿದ್ರಿ. ಯಾವ ಆಧಾರದ ಮೇಲೆ ಮಾಡಿದ್ರಿ. ಸಿಐಡಿ ತನಿಖಾ ವರದಿ ಏನಿತ್ತು? ಮಧ್ಯಂತರ ವರದಿಯಲ್ಲಿ ಏನಿತ್ತು ಹೇಳಿ. ಅಕ್ರಮವಾಗಿದೆ ಎಂದು ನಾನು ಹೇಳುತ್ತಿಲ್ಲ. ಅಕ್ರಮವಾಗಿದೆ ಎಂದು ಪೇಪರ್ ಹೇಳುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಇನ್ವಾಲ್‌ ಆಗಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಆದ್ರೆ ಇವರು ಜವಾಬ್ದಾರಿ ಏನಿತ್ತು. ಕುಮಾರಸ್ವಾಮಿ ಅವರನ್ನ ಹೆದರಿಸೋಕೆ ಆಗಲ್ಲ. ಆದೇಶ ಪ್ರತಿ ಕೊಟ್ಟಿರೋದು ಯಾರು ಖರ್ಗೆ ಅವರೆ ನಿಮ್ಮ ಇಲಾಖೆ ಅವರು. ಇಷ್ಟೆಲ್ಲಾ ಆಗಿದ್ದಾಗ ರಾಜೀನಾಮೆ ಕೇಳ್ಬೇಕೋ ಬೇಡವೋ. ತಪ್ಪಿದೆ ಎನ್ನುವ ಕಾರಣಕ್ಕೆ ಕಂಡಿಷನಲ್ ಆದೇಶ ಕೊಟ್ಟಿರೋದು. ಅದರ ತನಿಖೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Wed, 2 September 26

Follow Us
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ