AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಸ್‌ಆರ್‌ಟಿಸಿಗೆ ಮತ್ತೊಂದು ಗರಿ: ‘ವರ್ಲ್ಡ್ ಹೆಚ್‌ಆರ್‌ಡಿ ಕಾಂಗ್ರೆಸ್’ನ ಪ್ರತಿಷ್ಠಿತ ಪ್ರಶಸ್ತಿ ಮುಡಿಗೆ!

ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ ವಿಭಾಗದಲ್ಲಿ ಕೆಎಸ್‌ಆರ್‌ಟಿಸಿ ಮಾಡಿರುವ ಸಾಧನೆಗೆ ಅಂತರಾಷ್ಟ್ರೀಯ ಮಟ್ಟದ ‘World HRD Congress Award-2026’ನ ‘ಕೇರಳ ಲೀಡರ್‌ಶಿಪ್ ಪ್ರಶಸ್ತಿ-2026’ ಲಭಿಸಿದೆ. ಕಳೆದ 6 ತಿಂಗಳಲ್ಲಿ 12,000 ಸಿಬ್ಬಂದಿಗಳಿಗೆ ನೀಡಲಾದ ಅತ್ಯುತ್ತಮ ತರಬೇತಿ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಕೆಎಸ್‌ಆರ್‌ಟಿಸಿಗೆ ಮತ್ತೊಂದು ಗರಿ: ‘ವರ್ಲ್ಡ್ ಹೆಚ್‌ಆರ್‌ಡಿ ಕಾಂಗ್ರೆಸ್’ನ ಪ್ರತಿಷ್ಠಿತ ಪ್ರಶಸ್ತಿ ಮುಡಿಗೆ!
ಎಸ್.ಟಿ. ಶ್ರೀಧರನ್ ಅವರಿಂದ ಕೆಎಸ್‌ಆರ್‌ಟಿಸಿ ಪರವಾಗಿ ಡಾ. ಲತಾ ಟಿ.ಎಸ್. ಹಾಗೂ ಎ.ಎಸ್. ಗೀತಾಂಜಲಿ ಪ್ರಶಸ್ತಿ ಸ್ವೀಕರಿಸಿದರುImage Credit source: tv9
ಗಣಪತಿ ಶರ್ಮಾ
|

Updated on: Apr 01, 2026 | 11:54 AM

Share

ಬೆಂಗಳೂರು/ಕೊಚ್ಚಿನ್, ಏಪ್ರಿಲ್ 1: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ (Training and Organisation Development) ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಪ್ರತಿಷ್ಠಿತ ‘ವರ್ಲ್ಡ್ ಹೆಚ್‌ಆರ್‌ಡಿ ಕಾಂಗ್ರೆಸ್’ನ (World HRD Congress Award) ‘ಕೇರಳ ಲೀಡರ್‌ಶಿಪ್ ಪ್ರಶಸ್ತಿ-2026’ ಅನ್ನು ತನ್ನದಾಗಿಸಿಕೊಂಡಿದೆ. ಕೇರಳದ ಕೊಚ್ಚಿನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು.

ತರಬೇತಿ ಕ್ಷೇತ್ರದಲ್ಲಿ KSRTC ಕ್ರಾಂತಿ

ನಿಗಮದ ವ್ಯಾಪ್ತಿಯ ಐದು ತರಬೇತಿ ಕೇಂದ್ರಗಳಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ 12,000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಪರಿಣಾಮಕಾರಿ ತರಬೇತಿ ನೀಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಇಂಧನ ಕ್ಷಮತೆ, ಅಪಘಾತ ರಹಿತ ಚಾಲನೆ, ಸಿಮ್ಯುಲೇಟರ್ ತರಬೇತಿ ಹಾಗೂ ರಸ್ತೆ ಸುರಕ್ಷತೆಯಂತಹ ಪ್ರಮುಖ ವಿಷಯಗಳಲ್ಲಿ ಸಿಬ್ಬಂದಿಗಳನ್ನು ಸಜ್ಜುಗೊಳಿಸಿರುವುದು ನಿಗಮದ ಈ ಸಾಧನೆಗೆ ಕಾರಣವಾಗಿದೆ.

ಇದರೊಂದಿಗೆ ಸಾರಿಗೆ ಇಲಾಖೆ ಮತ್ತು ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಉಚಿತ ಭಾರಿ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ ವಿತರಿಸುವಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳೂ ಸಹ ಈ ಪ್ರಶಸ್ತಿಗೆ ಪೂರಕವಾಗಿವೆ.

ಕೊಚ್ಚಿನ್‌ನಲ್ಲಿ ನಡೆದ ಸಮಾರಂಭದಲ್ಲಿ ಶಿಪ್ ಟೆಕ್ನಾಲಜಿ ಕಾಲೇಜಿನ ನಿರ್ದೇಶಕ ಕ್ಯಾಪ್ಟನ್ ಎಸ್.ಟಿ. ಶ್ರೀಧರನ್ ಅವರಿಂದ ಕೆಎಸ್‌ಆರ್‌ಟಿಸಿ ಪರವಾಗಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಹಾಗೂ ಹಾಸನ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಎ.ಎಸ್. ಗೀತಾಂಜಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕೆಎಸ್​ಆರ್​ಟಿಸಿ!

ಐದು ದಿನಗಳ ಹಿಂದಷ್ಟೇ ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್ ಪ್ರಶಸ್ತಿಗಳಲ್ಲಿ ಧ್ವನಿ ಸ್ಪಂದನ ಮತ್ತು AWATAR 4.0 ಯೋಜನೆಗಳಿಗಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೆಎಸ್​ಆರ್​ಟಿಸಿ ತನ್ನ ಮುಡಿಗೇರಿಸಿಕೊಂಡಿತ್ತು. ತಂತ್ರಜ್ಞಾನ ಮತ್ತು ಸಮುದಾಯದ ಸಲಹೆಗಳನ್ನು ಬಳಸಿ, ಸಮಾಜದ ಪ್ರತಿಯೊಬ್ಬರಿಗೂ (ವಿಶೇಷವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ) ಸುಲಭ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಧ್ವನಿ ಸ್ಪಂದನ ಯೋಜನೆಗೆ ಪ್ರಶಸ್ತಿ ಲಭಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ