ಫ್ಲೈ ಓವರ್​​ಗಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಕಾಂಪೌಂಡ್ ತೆರವಿಗೆ ಪತ್ರ: ಮತ್ತೆ ವಿವಾದ ಮುನ್ನಲೆಗೆ?

ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದ ಎರಡೂ ಕಡೆಯ ಗೋಡೆಯನ್ನು ಭಾಗಶಃ ಒಡೆದು ಫ್ಲೈ ಓವರ್ ಕಾಮಗಾರಿ ನಡೆಸಬೇಕಿದೆ. ಈ ಭಾಗದಲ್ಲಿ ಎರಡು ಪಿಲ್ಲರ್‌ಗಳು ನಿರ್ಮಾಣವಾಗಲಿದ್ದು ಭೂಸ್ವಾಧೀನದ ಪ್ರಸ್ತಾವ ಅಂತಿಮ ಹಂತದಲ್ಲಿದೆ. ಹೀಗಾಗಿ ತೆರವು ಕಾರ್ಯಕ್ಕೆ ಅನುಮತಿ ಹಾಗೂ ಭದ್ರತೆ ಕೋರಿ ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಇಲಾಖೆಗೆ ಪತ್ರ ಬರೆಯಲಾಗಿದೆ.

ಫ್ಲೈ ಓವರ್​​ಗಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಕಾಂಪೌಂಡ್ ತೆರವಿಗೆ ಪತ್ರ: ಮತ್ತೆ ವಿವಾದ ಮುನ್ನಲೆಗೆ?
ಫ್ಲೈ ಓವರ್​​ಗಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಕಾಂಪೌಂಡ್ ತೆರವಿಗೆ ಪತ್ರ: ಮತ್ತೆ ವಿವಾದ ಮುನ್ನಲೆಗೆ?
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2024 | 5:04 PM

ಹುಬ್ಬಳ್ಳಿ, ಆಗಸ್ಟ್​ 07: ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ (flyover) ಕಾಮಗಾರಿ ಮಾಡಲು ಈದ್ಗಾ ಮೈದಾನದ (Eidgah Maidan) ಕಾಂಪೌಂಡ್ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಂದ ಪತ್ರ ಬರೆಯಲಾಗಿದೆ. ಈದ್ಗಾ ಮೈದಾನ ಕಾಂಪೌಂಡ್ ಭಾಗಶಃ ತೆರವು ಮಾಡಬೇಕೆಂದು  ಅನುಮತಿ ಹಾಗೂ ಭದ್ರತೆ ಕೋರಿ ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಇಲಾಖೆಗೆ ಜುಲೈ 23ರಂದು ಎನ್‌ಎಚ್‌ಎಐ ಅಧಿಕಾರಿಗಳು ಪತ್ರ ಬರೆದಿದ್ದರು. ಅತ್ತ ಪತ್ರ ಬರೆಯುತ್ತಿದ್ದಂತೆ ಅಂಜುಮನ್ ಸಂಸ್ಥೆ ಸಭೆ‌ ಮಾಡಿದ್ದು, ಪದಾಧಿಕಾರಿಗಳ ಸಭೆಯ ಮೇಲೆ ಈದ್ಗಾ ಮೈದಾನದ ಭವಿಷ್ಯ ನಿಂತಿದೆ. ಹಾಗಾಗಿ ಮೂರು ದಶಕಗಳ ಹಿಂದೆ ರಾಷ್ಟ್ರವ್ಯಾಪಿ ಸದ್ದು ಮಾಡಿದ್ದ ವಿವಾದ ಇದೀಗ ಮತ್ತೆ ಮುನ್ನಲೆಗೆ ಬರುತ್ತಾ ಎಂಬ ಅನುಮಾನಗಳು ಶುರುವಾಗಿವೆ.

ಮೊದಲ ಹಂತದ 300 ಕೋಟಿ ರೂ. ವೆಚ್ಚದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಎನ್‌ಎಚ್‌ಎಐ ಅಧಿಕಾರಿಗಳು ಮುಂದಾಗಿದ್ದಾರೆ. ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದ ಎರಡೂ ಕಡೆಯ ಗೋಡೆಯನ್ನು ಭಾಗಶಃ ಒಡೆದು ಫ್ಲೈ ಓವರ್ ಕಾಮಗಾರಿ ನಡೆಸಬೇಕಿದೆ. ಈ ಭಾಗದಲ್ಲಿ ಎರಡು ಪಿಲ್ಲರ್‌ಗಳು ನಿರ್ಮಾಣವಾಗಲಿದ್ದು ಭೂಸ್ವಾಧೀನದ ಪ್ರಸ್ತಾವ ಅಂತಿಮ ಹಂತದಲ್ಲಿದೆ.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದದ ಹಿಂದಿನ ಕಥೆ ಏನು? ಇಲ್ಲಿದೆ ಮಾಹಿತಿ

ಈ ಕುರಿತು ಜುಲೈ 6ರಂದು ಜಿಲ್ಲಾಧಿಕಾರಿ ಪೊಲೀಸ್ ಕಮಿಷನ‌ರ್ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಸಭೆ ನಡೆಸಿ ನೀಲನಕ್ಷೆಯಂತೆ ಪಿಲ್ಲರ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿದ್ದು ಯೋಜನೆ ಅನುಷ್ಠಾನಕ್ಕೆ ಪೊಲೀಸ್‌ ಭದ್ರತೆ ನೀಡಬೇಕೆಂದು ಪತ್ರ ಬರೆಯಲಾಗಿದೆ.

ಈದ್ಗಾ ಮೈದಾನದ ಗೋಡೆ ತೆರವುಗೊಳಿಸಬೇಕು: ಮುತಾಲಿಕ್

ಈ ಬಗ್ಗೆ ನಗರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್​ ಪ್ರತಿಕ್ರಿಯಿಸಿದ್ದು, ಅನುಮತಿ ಕೇಳಿ ವಿನಂತಿ ಪತ್ರ ಕೊಡುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್ ಆರ್ಡರ್ ಇದೆ, ಈದ್ಗಾ ಮೈದಾನ ಇರುವುದು ಪಾಲಿಕೆ ಜಾಗ. ವರ್ಷಕ್ಕೆ ಎರಡು ಬಾರಿ‌ ನಮಾಜ್ ಮಾಡಲು ಹೇಳಿದೆ. ಈದ್ಗಾ ಮೈದಾನದಲ್ಲಿ ಅಂಜುಮನ್ ಆಗಲಿ, ಮುಸ್ಲಿಂ ಸಮುದಾಯದ ಮಾಲೀಕತ್ವದ ಹಕ್ಕಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಲ್ಡಿಂಗ್, ದೇವಸ್ಥಾನ, ಮಸೀದಿ ಇದ್ದರು ತೆರವುಗೊಳಿಸಲು ಆರ್ಡರ್ ಇದೆ. ಹೀಗಾಗಿ ಯಾವ ಗೋಡೆ ತಗೆಯಬೇಕೆಂದು ಪತ್ರ ಬರೆದಿದ್ದಾರೆ. ಈದ್ಗಾ ಮೈದಾನದ ಗೋಡೆ ತೆರವುಗೊಳಿಸಲಬೇಕು ಎಂದಿದ್ದಾರೆ.

ನಮಾಜ್ ಮಾಡುವುದರಿಂದ ಅಲ್ಲಿ ಟ್ರಾಫಿಕ್ ಎಷ್ಟಾಗತ್ತೆ. ಇವರಿಗಾಗಿ ಒಂದು ದಿನ ಟ್ರಾಫಿಕ್ ಡೈವರ್ಟ್ ಮಾಡುತ್ತಾರೆ. ಹೀಗಾಗಿ ಕಾಮಗಾರಿಗೆ ನಮ್ಮ ಬೆಂಬಲ ಇದೆ. ಅಕಸ್ಮಾತ್ ಯಾರಾದರೂ ವಿರೋಧ ಮಾಡಿದರೆ ನಾವು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈದ್ಗಾ ಮೈದಾನದ ಫೋಟೋ‌ ಇಟ್ಟು ಪೂಜೆ ಮಾಡಿ ಎಂದ ಅಲ್ತಾಪ್ ಹಳ್ಳೂರ

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಪ್ ಹಳ್ಳೂರ ಮಾತನಾಡಿದ್ದು, ಮೊದಲ ಪ್ಲ್ಯಾನ್, ಇವಾಗಿನ ಪ್ಲ್ಯಾನ್ ಬೇರೆ ಇದೆ. ಮುಸ್ಲಿಂ, ಈದ್ಗಾ ಮೈದಾನ ವಿರೋಧ ಮಾಡಲು ಹೀಗೆ ಮಾಡುತ್ತಿದ್ದಾರೆ. ಒಂದು ಸಮುದಾಯ ಓಲೈಕೆಗೆ ಮಾಡುತ್ತಿದ್ದಾರೆ. ಫ್ಲೈ ಓವರ್ ಕಾಮಗಾರಿ ಇವಾಗ ಹೊಸ ಪ್ಲ್ಯಾನ್ ಮಾಡಿದೆ. ಪದೇ ಪದೇ ಈದ್ಗಾ ಮೈದಾನಕ್ಕೆ ಬೆನ್ನು ಹತ್ತಿದ್ದಾರೆ. ಈದ್ಗಾ ಮೈದಾನದ ಕಾಂಟ್ರವರ್ಸಿ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕಿಡಿಕಾರಿದರು.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸಾಹೇಬರು ಮನೆ ಹಾಗೂ ಕಚೇರಿಯಲ್ಲಿ ನಾಯಕರ ಜೊತೆ ಈದ್ಗಾ ಮೈದಾನದ ಫೋಟೋ‌ ಇಟ್ಟು ಪೂಜೆ ಮಾಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈದ್ಗಾ ಮೈದಾನದಿಂದ ರಾಜಕೀಯ ಮಾಡಿ ಕೇಂದ್ರ ಮಂತ್ರಿಯಾಗಿದ್ದೀರಿ. ಜೋಶಿ ಅವರನ್ನು ಮನಗೆ ಕಳಿಸಲು ಜನ ತೀರ್ಮಾನ ಮಾಡಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ; ಕೋರ್ಟ್​ ಮೆಟ್ಟಿಲೇರಲು ವಿಪಕ್ಷ ನಾಯಕಿ ಸಿದ್ಧತೆ, ಕಾರಣ ಇಲ್ಲಿದೆ

ನೇಹಾ ಹಿರೇಮಠ ಘಟನೆ ಮೂಲಕ ಚುನಾವಣೆ ಮಾಡಿದ್ದರು. ನೇಹಾ ಹಿರೇಮಠನಿಂದಲೇ ಜೋಶಿ ಗೆದ್ದಿದ್ದು. ಕೊಲೆಯಾಗಿರೋದನ್ನ ಖಂಡನೆ ಮಾಡುವುದುಬಿಟ್ಟು ರಾಜಕೀಯ ಮಾಡಿದರು. ಅರವಿಂದ ಬೆಲ್ಲದ್ ಅವರೇ ಜಬರದಸ್ತ ಮಾಡಿ ಅಮಿತ್ ಶಾ ಗೆ ಭೇಟಿ ಮಾಡಿಸಿದ್ದರು. ಪದೇ ಪದೇ ಈದ್ಗಾ ಮೈದಾನ ಯಾಕೆ ಬೇಕು. ಒಂದು ಕೋಮಿಗೆ ಅವಮಾನ ಮಾಡಿ, ರಾಜಕೀಯ ಮಾಡ್ತಾರೆ. ಕೋಮುವಾದಿ ಹಿಂದೂಗಳನ್ನು ಓಲೈಕೆಗಾಗಿ ಟಾರ್ಗೆಟ್ ‌ಮಾಡಿ ಈದ್ಗಾ ಮೈದಾನದ ತೆರವು ಮಾಡಲು ಪ್ಲ್ಯಾನ್ ಮಾಡಲಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ