ಟ್ರ್ಯಾವೆಲ್ಸ್ ಮಾಲೀಕರೆ ಎಚ್ಚರ ಎಚ್ಚರ! ನೀವು ಕಾರುಗಳನ್ನು ಬಾಡಿಗೆಗೆ ಕೊಡುವ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ
ಕಾರನ್ನು ಲೀಸ್ಗೆ ಪಡೆದು ಅದರ ನಂಬರ್ ಪ್ಲೇಟ್, ಕಾರಿನ ಬಣ್ಣ ಬದಲಾಯಿಸಿ ಕಾರನ್ನು ಅಡಮಾನವಿಟ್ಟು ಹಣ ಮಾಡುತ್ತಿದ್ದ ಕಿಲಾಡಿ ಖದೀಮನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ: ಕಾರುಗಳನ್ನು ಲೀಸ್ಗೆ ನೀಡಿ ಅದರಿಂದ ಜೀವನ ನಡೆಸುತ್ತಿರುವ ಟ್ರ್ಯಾವೆಲ್ಸ್ ಮಾಲೀಕರು ಈಗ ಎಚ್ಚರದಿಂದಿರಬೇಕು. ಏಕೆಂದರೆ ಮಂಡ್ಯದಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಕಾರನ್ನು ಲೀಸ್ಗೆ ಪಡೆದು ಅದರ ನಂಬರ್ ಪ್ಲೇಟ್, ಕಾರಿನ ಬಣ್ಣ ಬದಲಾಯಿಸಿ ಕಾರನ್ನು ಅಡಮಾನವಿಟ್ಟು ಹಣ ಮಾಡುತ್ತಿದ್ದ ಕಿಲಾಡಿ ಖದೀಮನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಟ್ರ್ಯಾವೆಲ್ಸ್ ಮಾಲೀಕರೆ ಎಚ್ಚರದಿಂದಿರಿ. ಕಾರನ್ನ ಲೀಸ್ಗೆ ಕೊಡೋಕು ಮುನ್ನ ನೂರು ಬಾರಿ ಯೋಚಿಸಿ. ನಿಮ್ಮ ಕಾರನ್ನ ರೆಂಟ್ ಗೆ ಪಡೆದು ಬಳಿಕ ಅದನ್ನು ಅಡಮಾನ ಇಡುವ ಖತರ್ನಾಕ್ ಖದೀಮರು ಇದ್ದಾರೆ. ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಕಾರು ಅಡಮಾನ ಇಟ್ಟು ಹಣ ಪಡೆಯುತ್ತಾರೆ. ಇದೇ ರೀತಿ 19 ಕಾರುಗಳನ್ನು ರೆಂಟ್ ಗೆ ಪಡೆದು ಬಳಿಕ ಅದರ ನಂಬರ್ ಪ್ಲೇಟ್, ಬಣ್ಣ ಬದಲಾಯಿಸಿ ಅಡಮಾನವಿಟ್ಟಿದ್ದ ಕಿಲಾಡಿ ಅರೆಸ್ಟ್ ಆಗಿದ್ದಾನೆ. ಹಲಗೂರು ಪೊಲೀಸರು ಆರೋಪಿ ಕುಮಾರಸ್ವಾಮಿ ಎಂಬುವವನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: Raju Srivastava: ರಾಜು ಶ್ರೀವಾಸ್ತವ ಸಾವಿನ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ ಇನ್ನೋರ್ವ ಕಾಮಿಡಿಯನ್
ಆರೋಪಿ 19 ಕಾರುಗಳನ್ನು ರೆಂಟ್ ಗೆ ಪಡೆದು ಅಡಮಾನವಿಟ್ಟಿದ್ದ. ಎಲ್ಲೊ ಬೋರ್ಡ್ ಕಾರುಗಳನ್ನೇ ಈತ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದ. ಎಲ್ಲೊ ಬೋರ್ಡ್ ನಂಬರ್ ಪ್ಲೇಟ್ ನ ವೈಟ್ ಬೋರ್ಡ್ ಗೆ ಬದಲಾಯಿಸಿ ವಂಚನೆ ಮಾಡುತ್ತಿದ್ದ. ಆರೋಪಿ ಕುಮಾರಸ್ವಾಮಿಯಿಂದ 1 ಕೋಟಿ ಬೆಲೆ ಬಾಳುವ 19 ವಾಹನಗಳನ್ನು ರಿಕವರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ 9 ಸ್ವಿಫ್ಟ್ ಡಿಸೈರ್, 1 ಇನೋವಾ, 2 ಇಂಡಿಕಾ, ಸೇರಿದಂತೆ 19 ವಾಹನಗಳನ್ನ ಹಲಗೂರು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:00 am, Thu, 22 September 22