ಮಂಡ್ಯ ಜಿಲ್ಲೆ ರೈತರಿಂದ ಪೇ ಫಾರ್ಮರ್ ಪೋಸ್ಟರ್ ಅಭಿಯಾನ: ರಾಜಕೀಯ ಪಕ್ಷಗಳು, ನಾಯಕರ ವಿರುದ್ಧ ರೈತ ಸಂಘಟನೆಗಳ ಕಿಡಿ

ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳ ವಿರುದ್ದ ರೈತ ಪರ ಸಂಘಟನೆಗಳು ಸಿಡಿದೆದಿದ್ದು, ಕೈ ಕಮಲ ಗದ್ದಲ ಆರೋಪ ಪ್ರತ್ಯಾರೋಪದಿಂದ ಅನ್ನದಾತರು ರೊಚ್ಚಿಗೆದ್ದಿದ್ದಾರೆ.

ಮಂಡ್ಯ ಜಿಲ್ಲೆ ರೈತರಿಂದ ಪೇ ಫಾರ್ಮರ್ ಪೋಸ್ಟರ್ ಅಭಿಯಾನ: ರಾಜಕೀಯ ಪಕ್ಷಗಳು, ನಾಯಕರ ವಿರುದ್ಧ ರೈತ ಸಂಘಟನೆಗಳ ಕಿಡಿ
PAY FARMER ಅಭಿಯಾನ ಮಾಡುತ್ತಿರುವ ಮಂಡ್ಯ ರೈತರು
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 26, 2022 | 3:55 PM

ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್​ನ ಪೇ ಸಿಎಂ (PAY CM) ಪೋಸ್ಟರ್ ಅಭಿಯಾನದ ಬೆನ್ನಲ್ಲೆ, ‘ಮಂಡ್ಯ ರೈತರಿಂದ PAY FARMER ಅಭಿಯಾನ’ ಶುರುಮಾಡಲಾಗಿದೆ. ಜಿಲ್ಲೆಯ ಸಂಜಯ್ ವೃತ್ತದಲ್ಲಿ ರೈತರು ಅಭಿಯಾನ ಕೈಗೊಂಡಿದ್ದು, ಒಂದು ಟನ್ ಕಬ್ಬಿಗೆ 4500 ರೂ‌ ನಿಗದಿ ಮಾಡುವಂತೆ ರೈತರು ಒತ್ತಾಯಿಸಿದರು. ಇಲ್ಲದಿದ್ದರೆ ದಸರಾದಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅಭಿಯಾನ ಮಾಡುತ್ತಿದ್ದು, ಸಕ್ಕರೆನಾಡಲ್ಲಿ ಅಭಿಯಾನ ತೀವ್ರ ಕಾವು ಪಡೆದುಕೊಂಡಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೈತರು ಪೋಸ್ಟ್ ಹಿಡಿದು ನಿಂತ್ತಿದ್ದು, KSRTC, ಐರಾವತ, ರಾಜಹಂಸ ಬಸ್​ಗಳನ್ನು ತಡೆದು PAY FARMER ಪೋಸ್ಟ್ ಅಂಟಿಸಿದರು. ಜೊತೆಗೆ ಸರ್ಕಾರದ ವಿರುದ್ದ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮಧುಚಂದನ್, ಪ್ರಸನ್ನಗೌಡ, ಸೇರಿದಂತೆ ಹಲವರು ಭಾಗಿಯಾಗಿದ್ದರು.

ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳ ವಿರುದ್ದ ರೈತ ಪರ ಸಂಘಟನೆಗಳು ಸಿಡಿದೆದಿದ್ದು, ಕೈ ಕಮಲ ಗದ್ದಲ ಆರೋಪ ಪ್ರತ್ಯಾರೋಪದಿಂದ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಸೆಷನ್​ನಲ್ಲಿ ಬರಿ ಪೇ ಸಿಎಂ, ಪೇ ಫಾರ್ ಕಾಂಗ್ರೆಸ್ ಮೇಡಂದೆ ಸದ್ದು ಗದ್ದಲ ಹಿನ್ನಲೆ ಬರಿ ಆರೋಪಗಳನ್ನ ಮಾಡುತ್ತಿರುವ ರಾಜಕಾರಣಿಗಳಿಗೆ ರೈತರು ಧಿಕ್ಕಾರ ಕೂಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸದೆ ಸಮಯ ವ್ಯರ್ಥ ಮಾಡುತ್ತಿರೊ ರಾಜಕಾರಣಿಗಳು ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ರೈತರ ಬಗ್ಗೆ ಕಾಳಜಿ ಹೊಂದಿರದ ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳಿಗೆ ಚೀಮಾರಿ ಹಾಕಲಾಗುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada