ಮಂಡ್ಯ: ಚಿತ್ರಕಲೆ, ಕ್ರೀಡೆ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಹಳೆ ವಿದ್ಯಾರ್ಥಿ ಲೈಂಗಿಕ ದೌರ್ಜನ್ಯ

ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಶಾಲೆಯ ಹಳೆಯ ವಿದ್ಯಾರ್ಥಿ ಮೇಲೆ ಪ್ರಕರಣ ದಾಖಲಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಜೊತೆಗೆ ಐಪಿಸಿ ಸೆಕ್ಸನ್ 354 A, 354 D, 509 ರಿತ್ಯ ಕೇಸ್ ದಾಖಲಾಗಿದೆ.

ಮಂಡ್ಯ: ಚಿತ್ರಕಲೆ, ಕ್ರೀಡೆ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಹಳೆ ವಿದ್ಯಾರ್ಥಿ ಲೈಂಗಿಕ ದೌರ್ಜನ್ಯ
ಮೇಲುಕೋಟೆ ಪೊಲೀಸ್ ಠಾಣೆ
Follow us
| Updated By: ಆಯೇಷಾ ಬಾನು

Updated on: Jul 09, 2024 | 10:51 AM

ಮಂಡ್ಯ, ಜುಲೈ.09: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಹೀನಾಯ ಘಟನೆಯೊಂದು ನಡೆದಿದೆ. ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಶಾಲೆಯ ಹಳೆಯ ವಿದ್ಯಾರ್ಥಿ ಮೇಲೆ ಪ್ರಕರಣ ದಾಖಲಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಯೋಗಿ ಎಂಬ ಹಳೇ ವಿದ್ಯಾರ್ಥಿ ತನ್ನ ಶಾಲೆಯ ಮಕ್ಕಳಿಗೆ ಚಿತ್ರಕಲೆ, ಕ್ರೀಡೆ ಹೇಳಿಕೊಡುವ ನೆಪದಲ್ಲಿ ಮಕ್ಕಳನ್ನು ಬಳಸಿಕೊಂಡು ಹೀನ ಕೃತ್ಯ ಎಸಗಿದ್ದಾನೆ. ಅಣ್ಣನಂತೆ ನಂಬಿಸಿ ಅಪ್ರಾಪ್ತ ವಿದ್ಯಾರ್ಥಿನಿಯರ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್ (Blackmail) ಮಾಡಿದ್ದಾನೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮೇಲುಕೋಟೆ ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯೊಂದರ ಹಲವು ಅಪ್ರಾಪ್ತ ಬಾಲಕಿಯರಿಗೆ ಆರೋಪಿ ಯೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಸದ್ಯ ನೊಂದ ನಾಲ್ವರು ಬಾಲಕಿಯರು ಘಟನೆ ಸಂಬಂಧ ದೂರು ನೀಡಿದ್ದು ದೂರಿನನ್ವಯ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸರು ಎಫ್​ಐಆರ್ ದಾಖಲಿಸಿ ಯೋಗಿಯನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

ಇದನ್ನೂ ಓದಿ: ಮಿನಿಸ್ಟರ್ ಕಡೆಯಿಂದ ಪ್ರೆಶರ್ ಬಂತು: ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದ ಆಡಿಯೋ ವೈರಲ್

ಕ್ರೀಡೆಯಲ್ಲಿ ಆಸಕ್ತಿ ಇದ್ದ ಬಾಲಕಿಯರನ್ನೇ ಆರೋಪಿ ಯೋಗಿ ಟಾರ್ಗೆಟ್ ಮಾಡುತ್ತಿದ್ದ. ವಿದ್ಯಾರ್ಥಿನಿಯರಿಗೆ ಡ್ರಾಪ್ ಕೊಡುವ ನೆಪದಲ್ಲಿ, ಕ್ರೀಡೆ ಹೇಳಿಕೊಡುವ ನೆಪದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ನಗ್ನ ಫೋಟೋ ತೆಗೆದು ಅವುಗಳನ್ನ ಹೆತ್ತವರಿಗೆ ಕಳುಹಿಸುವುದಾಗಿ ಬೆದರಿಸಿ ದೌರ್ಜನ್ಯ ಎಸಗುತ್ತಿದ್ದ. ಕಿರಾತಕನ ದೌರ್ಜನ್ಯದಿಂದ ಬೇಸತ್ತ ಮಕ್ಕಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಪತ್ರ ಬರೆದಿದ್ದು ವಿದ್ಯಾರ್ಥಿನಿಯರ ಪತ್ರ ನೋಡಿ ಶಾಲೆಗೆ ತೆರಳಿ ವಿಚಾರಿಸಿದಾಗ ಘೋರ ಕೃತ್ಯ ಬೆಳಕಿಗೆ ಬಂದಿದೆ. ಒಂದೇ ಶಾಲೆಯ ಹಲವು ವಿದ್ಯಾರ್ಥಿನಿಯರಿಗೆ ಬ್ಲಾಕ್ ‌ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿರುವುದು ಪತ್ತೆಯಾಗಿದೆ. ಪೋಕ್ಸೋ ಜೊತೆಗೆ ಐಪಿಸಿ ಸೆಕ್ಸನ್ 354 A, 354 D, 509 ರಿತ್ಯ ಕೇಸ್ ದಾಖಲಿಸಿ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ನನ್ನ ಕ್ಷೇತ್ರದ ಅನುದಾನ ನೀವು ಕಿತ್ಕೊಂಡ್ರಿ; ಮಾಜಿ MLA ಮಂಜುನಾಥ್‌ ಕಿಡಿ
‘ನನ್ನ ಕ್ಷೇತ್ರದ ಅನುದಾನ ನೀವು ಕಿತ್ಕೊಂಡ್ರಿ; ಮಾಜಿ MLA ಮಂಜುನಾಥ್‌ ಕಿಡಿ
ಯುವನಟ ಮನೋಜ್ ವಿಹಾನ್ ಗೆ ಸಿಗಲಿಲ್ಲ ದರ್ಶನ್ ರನ್ನು ಭೇಟಿಯಾಗುವ ಅವಕಾಶ
ಯುವನಟ ಮನೋಜ್ ವಿಹಾನ್ ಗೆ ಸಿಗಲಿಲ್ಲ ದರ್ಶನ್ ರನ್ನು ಭೇಟಿಯಾಗುವ ಅವಕಾಶ
ಸಭಾಧ್ಯಕ್ಷ ಯುಟಿ ಖಾದರ್ ಪಕ್ಷಾಪಾತ ದೋರಣೆ ಪ್ರದರ್ಶಿಸುತ್ತಿದ್ದಾರೆ ; ಅಶೋಕ
ಸಭಾಧ್ಯಕ್ಷ ಯುಟಿ ಖಾದರ್ ಪಕ್ಷಾಪಾತ ದೋರಣೆ ಪ್ರದರ್ಶಿಸುತ್ತಿದ್ದಾರೆ ; ಅಶೋಕ
ಆಸ್ಪತ್ರೆಗೆ ಬಂದು ಅಜ್ಜನೆದುರು ಮಂಡಿಯೂರಿದ ಆನೆ; ಎಮೋಷನಲ್ ವಿಡಿಯೋ ಇಲ್ಲಿದೆ
ಆಸ್ಪತ್ರೆಗೆ ಬಂದು ಅಜ್ಜನೆದುರು ಮಂಡಿಯೂರಿದ ಆನೆ; ಎಮೋಷನಲ್ ವಿಡಿಯೋ ಇಲ್ಲಿದೆ
ಹೇಮಾವತಿ ಜಲಾಶಯದಿಂದ ಸಿಡಿದ ತುಂತುರು ಹನಿಗಳಲ್ಲಿ ಮಿಂದ ಯುವಕ ಯುವತಿಯರು
ಹೇಮಾವತಿ ಜಲಾಶಯದಿಂದ ಸಿಡಿದ ತುಂತುರು ಹನಿಗಳಲ್ಲಿ ಮಿಂದ ಯುವಕ ಯುವತಿಯರು
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ ಸಾಲಿ ಮಂಜಪ್ಪ ವಸೂಲಿ ಮಂಜಪ್ಪನಾದ ವಿಡಿಯೋ!
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ ಸಾಲಿ ಮಂಜಪ್ಪ ವಸೂಲಿ ಮಂಜಪ್ಪನಾದ ವಿಡಿಯೋ!
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?