AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯವರ್ತಿಯಿಂದ ವಂಚನೆಗೊಳಗಾಗಿ ಕುವೈತ್​ನಲ್ಲಿ ಸಿಲುಕಿದ್ದ ವಿಜಪುರದ ಯುವಕರ ರಕ್ಷಿಸಿದ ವಿದೇಶಾಂಗ ಸಚಿವಾಲಯ

ಕುವೈತ್‌ನಲ್ಲಿ ತರಕಾರಿ ಪ್ಯಾಕಿಂಗ್ ಉದ್ಯಮದಲ್ಲಿ ತಿಂಗಳಿಗೆ 32,000 ರೂಪಾಯಿ ವೇತನದ ಉದ್ಯೋಗ ನೀಡುವ ಭರವಸೆಯನ್ನು ಆರು ತಿಂಗಳ ಹಿಂದೆ ಏಜೆಂಟ್ ನೀಡಿದ್ದರು. ಅದಕ್ಕಾಗಿ ಪಾಸ್‌ಪೋರ್ಟ್, ವೀಸಾ, ವಿಮಾನ ಟಿಕೆಟ್ ಮೊತ್ತ ಮತ್ತು ಕಮಿಷನ್ ಎಂದು ಒಂದು ಲಕ್ಷ ರೂ. ಪಡೆದಿದ್ದರು ಎಂದು ಯುಕವರು ದೂರಿದ್ದಾರೆ.

ಮಧ್ಯವರ್ತಿಯಿಂದ ವಂಚನೆಗೊಳಗಾಗಿ ಕುವೈತ್​ನಲ್ಲಿ ಸಿಲುಕಿದ್ದ ವಿಜಪುರದ ಯುವಕರ ರಕ್ಷಿಸಿದ ವಿದೇಶಾಂಗ ಸಚಿವಾಲಯ
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on: Sep 06, 2023 | 10:16 PM

Share

ಬೆಂಗಳೂರು, ಸೆಪ್ಟೆಂಬರ್ 6: ಮಧ್ಯವರ್ತಿಯೊಬ್ಬರ ನೆರವಿನಿಂದ ಉದ್ಯೋಗ ಅರಸಿ ಕುವೈತ್​ಗೆ (Kuwait) ತೆರಳಿ ವಂಚನೆಗೆ ಒಳಗಾಗಿದ್ದ ಕರ್ನಾಟಕದ ಇಬ್ಬರು ಯುವಕರನ್ನು ವಿದೇಶಾಂಗ ಸಚಿವಾಲಯ (MEA) ರಕ್ಷಿಸಿದೆ. ಬಬಲೇಶ್ವರ ತಾಲೂಕಿನ ವಿಜಯಪುರದ (Vijayapura) ಸಂಗಾಪುರ ಗ್ರಾಮದ ಯುವಕರಾದ ಸಚಿನ್ ಜಂಗಮಶೆಟ್ಟಿ (21) ಮತ್ತು ವಿಶಾಲ್ ಸೆಲಾರ್ (22) ವಂಚನೆಗೆ ಒಳಗಾದ ಯುವಕರು. ಮುಂಬೈ ಮೂಲದ ಏಜೆಂಟ್‌ ಒಬ್ಬರು ಹೆಚ್ಚಿನ ಸಂಬಳದ ಕೆಲಸ ಒದಗಿಸುವ ಭರವಸೆ ನೀಡಿ ಒಂದು ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಯುವಕರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಕುವೈತ್‌ನಲ್ಲಿ ತರಕಾರಿ ಪ್ಯಾಕಿಂಗ್ ಉದ್ಯಮದಲ್ಲಿ ತಿಂಗಳಿಗೆ 32,000 ರೂಪಾಯಿ ವೇತನದ ಉದ್ಯೋಗ ನೀಡುವ ಭರವಸೆಯನ್ನು ಆರು ತಿಂಗಳ ಹಿಂದೆ ಏಜೆಂಟ್ ನೀಡಿದ್ದರು. ಅದಕ್ಕಾಗಿ ಪಾಸ್‌ಪೋರ್ಟ್, ವೀಸಾ, ವಿಮಾನ ಟಿಕೆಟ್ ಮೊತ್ತ ಮತ್ತು ಕಮಿಷನ್ ಎಂದು ಒಂದು ಲಕ್ಷ ರೂ. ಪಡೆದಿದ್ದರು ಎಂದು ಯುಕವರು ದೂರಿದ್ದಾರೆ.

ಕುವೈತ್‌ಗೆ ತೆರಳಿದ ಬಳಿಕ ತರಕಾರಿ ಪ್ಯಾಕಿಂಗ್ ಕೆಲಸದ ಬದಲು ಒಂಟೆ ಸಾಕಣೆ ಕೆಲಸಕ್ಕೆ ಒತ್ತಾಯಿಸಲಾಯಿತು. ಅಷ್ಟೇ ಅಲ್ಲದೆ ನಮಗೆ ಸಂಬಳವನ್ನು ನೀಡಲಾಗಿಲ್ಲ. ಅವಮಾನ, ದೈಹಿಕ ಹಲ್ಲೆ, ಹಸಿವಿನಿಂದ ಇರುವಂತೆ ಮಾಡಿದ್ದರ ಜತೆಗೆ ಚಿತ್ರಹಿಂಸೆ ನೀಡಲಾಯಿತು ಎಂದು ಅವರು ಆರೋಪಿಸಿದ್ದಾರೆ. ದೌರ್ಜನ್ಯದ ವಿರುದ್ಧ ದೂರು ನೀಡಲು ಪ್ರಯತ್ನಿಸಿದಾಗ ನಮ್ಮ ಮೇಲೆ ಮತ್ತಷ್ಟು ಹಲ್ಲೆ ನಡೆಸಲಾಯಿತು. ನಮ್ಮ ಮನೆಗಳಿಗೆ ಕರೆ ಮಾಡಲು ಸಹ ನಮಗೆ ಅವಕಾಶವಿರಲಿಲ್ಲ ಎಂದು ಯುವಕರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಟ್ಟುತ್ತಲೆ ನಾನು ಕಾಂಗ್ರೆಸ್ ವಿರೋಧಿ: ಈಗ ಪಕ್ಷ ಚೇಂಜ್​ ಮಾಡಿ ಮಾಡೋದೇನಿದೆ: ಸಂಸದ ರಮೇಶ ಜಿಗಜಿಣಗಿ

ಈ ವಿಚಾರ ಗಮನಕ್ಕೆ ಬಂದ ನಂತರ ಯುವಕರ ಕುಟುಂಬಸ್ಥರು ಬಿಜೆಪಿ ಮುಖಂಡ ಉಮೇಶ ಕೋಳಕೋರ ಅವರಿಗೆ ಮನವಿ ಸಲ್ಲಿಸಿದ್ದು, ಸಂಸದ ರಮೇಶ ಜಿಗಜಿಣಗಿ ನೆರವಿನೊಂದಿಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ನಾಲ್ಕು ದಿನಗಳ ಹಿಂದೆ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಮಾಡಲಾಗಿದೆ. ಮುಂಬೈ ಮೂಲದ ಏಜೆನ್ಸಿ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಯುವಕರು ಹೇಳಿದ್ದಾರೆ. ಬೇರೆ ದೇಶಗಳಲ್ಲಿನ ಇಂತಹ ಆಫರ್‌ಗಳಿಗೆ ಬಲಿಯಾಗಬೇಡಿ ಎಂದು ಅವರು ರಾಜ್ಯದ ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More