ಕೆರೆ ಒಡೆದ ಮೇಲೆ.. ಜಲಮಂಡಳಿ ಇಂಜಿನಿಯರನ್ನ ಇಲ್ಲಿಗೆ ಕರೆಸಿ ಎಂದ ಸಚಿವ ಆಶೋಕ್
ಬೆಂಗಳೂರು: ಬೆಂಗಳೂರಿನ ಹುಳಿಮಾವು ಕೆರೆ ಏರಿ ಒಡೆದ ಸ್ಥಳಕ್ಕೆ ಸಚಿವ ಆರ್ ಅಶೋಕ್ ಭೇಟಿ ನೀಡಿ ಪರಿಶೀಲನೆ ಮಾಡಿದ್ರು. ನಂತರ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. BWSSB ಮುಖ್ಯ ಇಂಜಿನಿಯರ್‌ರನ್ನ ಇಲ್ಲಿಗೆ ಕರೆಸಿ. ಇಲ್ಲಿ ಬಂದ ಕೂಡಲೇ ಪೊಲೀಸ್ ಠಾಣೆಯಲ್ಲಿ ಕೂರಿಸಿ, ಇಲ್ಲದಿದ್ರೆ ಸರಿಹೋಗಲ್ಲ ಎಂದು ಆರ್.ಅಶೋಕ್ ವಾರ್ನಿಂಗ್ ಮಾಡಿದ್ದಾರೆ. ವಾರಕ್ಕೆ ಬೇಕಾದ ಆಹಾರ ಧಾನ್ಯ ನೀಡಲು ಚಿಂತನೆ: ಸದ್ಯಕ್ಕೆ ಕೆರೆ ಅರಣ್ಯ ಇಲಾಖೆಗೆ ಸೇರಿದೆ, ಇನ್ನು ಬಿಬಿಎಂಪಿ ಗೆ ಹಸ್ತಾಂತರ ಆಗಿಲ್ಲ. ಒಂದೇ […]
ಬೆಂಗಳೂರು: ಬೆಂಗಳೂರಿನ ಹುಳಿಮಾವು ಕೆರೆ ಏರಿ ಒಡೆದ ಸ್ಥಳಕ್ಕೆ ಸಚಿವ ಆರ್ ಅಶೋಕ್ ಭೇಟಿ ನೀಡಿ ಪರಿಶೀಲನೆ ಮಾಡಿದ್ರು. ನಂತರ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. BWSSB ಮುಖ್ಯ ಇಂಜಿನಿಯರ್‌ರನ್ನ ಇಲ್ಲಿಗೆ ಕರೆಸಿ. ಇಲ್ಲಿ ಬಂದ ಕೂಡಲೇ ಪೊಲೀಸ್ ಠಾಣೆಯಲ್ಲಿ ಕೂರಿಸಿ, ಇಲ್ಲದಿದ್ರೆ ಸರಿಹೋಗಲ್ಲ ಎಂದು ಆರ್.ಅಶೋಕ್ ವಾರ್ನಿಂಗ್ ಮಾಡಿದ್ದಾರೆ.
ವಾರಕ್ಕೆ ಬೇಕಾದ ಆಹಾರ ಧಾನ್ಯ ನೀಡಲು ಚಿಂತನೆ: ಸದ್ಯಕ್ಕೆ ಕೆರೆ ಅರಣ್ಯ ಇಲಾಖೆಗೆ ಸೇರಿದೆ, ಇನ್ನು ಬಿಬಿಎಂಪಿ ಗೆ ಹಸ್ತಾಂತರ ಆಗಿಲ್ಲ. ಒಂದೇ ವೇದಿಕೆಯಲ್ಲೇ ಕೆರೆಗಳ ತರುವ ವಿಚಾರ ಚರ್ಚೆ ಆಗಿದೆ. ಬಿಬಿಎಂಪಿ, ಬಿಡಿಎ ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಯಾರು ಬಂದು ಇಲ್ಲಿ ಕೆಲಸ ಶುರು ಮಾಡಿದ್ದು, ಸಿಸಿಟಿವಿ ಸುತ್ತ ಮುತ್ತದ ಮಾಹಿತಿ ಪಡೆಯಲು ಪೊಲೀಸರ ಬಳಿ ಅಧಿಕಾರಿಗಳಿಗೆ ಹೇಳಲಾಗುತ್ತಿದೆ ಎಂದು ಆರ್ ಅಶೋಕ್ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಈ ಕುರಿತು ಏನೂ ಗೊತ್ತಿಲ್ಲ ಎಂದಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಅಂತ ತಿಳಿಯಬೇಕಿದೆ. ಈಗಾಗಲೇ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಒಬ್ಬನ ದುರಾಸೆಯಿಂದ ಈ ಕೆಲಸ ಆಗಿದೆ. ಅದು ಯಾರು ಎಂದು ತಿಳಿದು ಮಟ್ಟ ಹಾಕಲಾಗುತ್ತದೆ. ಕಾರ್ಪೊರೆಷನ್ ವತಿಯಿಂದ ಮಾತನಾಡಿ ಪರಿಹಾರ ನೀಡಲು ಯೋಚಿಸಿದ್ದೇವೆ. ಜೊತೆಗೆ ವಾರಕ್ಕೆ ಬೇಕಾದ ದವಸ ಧಾನ್ಯವನ್ನ ಅವರ ನಿವಾಸಕ್ಕೆ ತಲುಪಿಸಲು ಸರ್ಕಾರ ಸಜ್ಜಾಗಿದೆ ಎಂದಿದ್ದಾರೆ.
Published On - 3:11 pm, Mon, 25 November 19