ಮುಡಾ ಹಗರಣ: ರಾಜ್ಯಪಾಲರ ವಿರುದ್ಧ ನಾಳೆ ಅಹಿಂದ ವರ್ಗ ರಾಜಭವನ ಚಲೋ
ನಾಳೆ ರಾಜಭವನ ಚಲೋಗೆ ಕರೆ ವಿಚಾರವಾಗಿ ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ, ರಾಜ್ಯಮಟ್ಟದ ಸಂಘ ಸಂಸ್ಥೆಗಳು ನಾಳೆ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾವು ಬೆಂಬಲ ಕೊಡುತ್ತೇವೆ. ಎಲ್ಲಾ ಶಾಸಕರು ಮಂತ್ರಿಗಳು ಕೂಡ ನಾಳೆ ರಾಜ ಭವನಕ್ಕೆ ಹೋಗಿ ನೀವು ಮಾಡುತ್ತಿರುವುದು ಸರಿನಾ ಅಂತ ರಾಜ್ಯಪಾಲರನ್ನು ಕೇಳುತ್ತೇವೆ ಎಂದಿದ್ದಾರೆ.
ದೇವನಹಳ್ಳಿ, ಆಗಸ್ಟ್ 26: ಮುಡಾ ಹಗರಣ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಈಗಾಗಲೇ ಕಾನೂನು ಸಮರ ನಡೆಸುತ್ತಿದ್ದಾರೆ. ಹೋರಾಟಕ್ಕಿಳಿದ ಸಿಎಂಗೆ, ಸಚಿವರು, ಶಾಸಕರ ಬೆಂಬಲದ ಜೊತೆಗೆ ಹೈಕಮಾಂಡ್ ಬೆಂಬಲವೂ ಸಿಕ್ಕಿದೆ. ಈ ಮಧ್ಯೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ರಾಜ್ಯದ ಶೋಷಿತ ವರ್ಗಗಳ ಮಹಾ ಒಕ್ಕೂಟ ಹಿಂದುಳಿದ ವರ್ಗದ ಅಲ್ಪಸಂಖ್ಯಾತರು ನಾಳೆ ರಾಜಭವನ ಚಲೋಗೆ ಕರೆ ನೀಡಲಾಗಿದೆ.
ರಾಜಭವನ ಚಲೋಗೆ ನಾವು ಬೆಂಬಲ ಕೊಡುತ್ತೇವೆ: ಕೆ.ಹೆಚ್ ಮುನಿಯಪ್ಪ
ಈ ವಿಚಾರವಾಗಿ ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ, ರಾಜ್ಯಮಟ್ಟದ ಸಂಘ ಸಂಸ್ಥೆಗಳು ನಾಳೆ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾವು ಬೆಂಬಲ ಕೊಡುತ್ತೇವೆ. ಎಲ್ಲಾ ಶಾಸಕರು ಮಂತ್ರಿಗಳು ಕೂಡ ನಾಳೆ ರಾಜ ಭವನಕ್ಕೆ ಹೋಗಿ ನೀವು ಮಾಡುತ್ತಿರುವುದು ಸರಿನಾ ಅಂತ ರಾಜ್ಯಪಾಲರನ್ನು ಕೇಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ವಿಡಿಯೋ ಸಮೇತ ‘ವೈಟ್ನರ್’ ಹಿಂದಿರುವ ಅಸಲಿ ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಕಾಂಗ್ರೆಸ್ನಲ್ಲಿ ಕೂಡ ಶೋಷಿತ ವರ್ಗದ ಸಮುದಾಯಗಳು ಇವೆ. ಸಂವಿಧಾನಕ್ಕೆ ವಿರುದ್ಧವಾಗಿ ಅವರು ಷಡ್ಯಂತ್ರ ಹಾಕ್ಕೊಂಡಿದ್ದಾರೆ. ಇದು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ತೆಗಿಯಬೇಕು ಎನ್ನುವ ಚಿಂತನೆಯಲ್ಲಿ ಕೇವಲ ಸಿದ್ದರಾಮಯ್ಯನವರ ಹೆಸರನ್ನ ಮುಂದೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸೈಟ್ನ ವಿಷಯ ಭಾರಿ ದೊಡ್ಡದೇನಲ್ಲ, ಇದರ ಜೊತೆಯಲ್ಲಿ ರಾಜ್ಯಪಾಲರ ಸಾಕಷ್ಟು ವಿಷಯಗಳು ಅವರ ಮುಂದೆ ಪೆಂಡಿಂಗ್ ಇವೆ. ಆ ಪೆಂಡಿಂಗ್ ಇರೋ ಯಾವ ವಿಷಯಗಳನ್ನು ಎತ್ತಿಕೊಂಡಿಲ್ಲ. ದಿನಾಂಕ 26 ರಂದು ಅಬ್ರಹಾಂ 11 ಗಂಟೆಗೆ ಅರ್ಜಿ ಕೊಟ್ಟರೆ ಸಾಯಂಕಾಲ 10 ಗಂಟೆಗೆ ನೋಟಿಸ್ ಕೊಡುತ್ತಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುತ್ತಾರೆ. ಹಾಗದರೆ ಈ ಹಿಂದಿನ ಅರ್ಜಿಗಳಿಗೆ ಅನ್ವಯಿಸುವುದಿಲ್ಲವಾ? ಕೇವಲ ಒಂದು ಸೈಟ್ ವಿಷಯದಲ್ಲಿ ಮುಖ್ಯಮಂತ್ರಿಗೆ ಒಂದು ಸಂಬಂಧ ಇಲ್ಲ, ಫೋನ್ ಮಾಡಿಲ್ಲ ಅರ್ಜಿ ಬರಲಿಲ್ಲ, ಬಿಜೆಪಿಯವರ ಆಡಳಿತದಲ್ಲಿದ್ದ ಮುಡಾದಲ್ಲಿ ಈ ಸೈಟನ್ನು ಅವರ ಜಮೀನಿನ ಬದಲಾಗಿ ಅವರು ತೆಗೆದುಕೊಂಡಿರೋದು, ಈ ಹಿಂದೆ ಒಬ್ಬ ಹೆಣ್ಣುಮಗಳು ನಮಗೆ ಅನ್ಯಾಯ ಆಗಿದೆ ಅಂತ ಕೋರ್ಟ್ಗೆ ಹೋದಾಗ ಅವರಿಗೆ 4 ಎಕರೆನಾ ವಾಪಾಸ್ ಕೊಡಿ ಅಂತ ಹೇಳಿತ್ತು.
ಇದನ್ನೂ ಓದಿ: ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದ್ರೆ: ಸಿಎಂ ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ
ಇಲ್ಲಿ ಕಾನೂನು ಏನಿದೆ ಇವರು ಅರ್ಧ ತಗೊಂಡು ಅರ್ಧ ಕೊಡಿ ಅಂದ್ದರು. ಆದರೆ ಅರ್ಧನು ಕೊಡಲಿಲ್ಲ. ಅದು ಅವರ ಅಣ್ಣ ಕೊಟ್ಟಿರುವ ಜಮೀನು. ಸಿದ್ದರಾಮಯ್ಯನವರಿಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ಯಾವುದೇ ಒಂದು ದಾಖಲೆಯಲ್ಲಿ ಉಲ್ಲೇಖವಿಲ್ಲ. ಇದು ರಾಜಕೀಯವಾಗಿ ಅವರ ಮೇಲೆ ಷಡ್ಯಂತ್ರ ನಡೆಯುತ್ತಿದೆ. ಕೇವಲ ಸಿದ್ದರಾಮಯ್ಯನವರ ಮೇಲೆ ಅಲ್ಲ, ಕಾಂಗ್ರೆಸ್ ಪಕ್ಷವನ್ನ ತೆಗೆಬೇಕು, ಸರ್ಕಾರ ತೆಗೆಯಬೇಕು ಅಂತ ಒಂದು ಷಡ್ಯಂತ್ರ ನಡುತ್ತಿದೆ. ನಾವೆಲ್ಲ ಮೆಟ್ಟಿನಿಂತಿದ್ದೇವೆ. ಹೋರಾಟಕ್ಕೆ ಸನ್ನದ್ದರಾಗಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.