ಮುನಿರತ್ನ ಅವರ ಇನ್ನೂ ಎರಡು ಆಡಿಯೋ ಇವೆ, ನಾಳೆ ರಿಲೀಸ್ ಮಾಡ್ತೇನೆ: ಚಲುವರಾಜು ಸ್ಫೋಟಕ ಹೇಳಿಕೆ

ಗುತ್ತಿಗೆದಾರ ಚಲುವರಾಜು ನಿವಾಸಕ್ಕೆ ಇಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಭೇಟಿ ನೀಡಿ ಧೈರ್ಯ ಹೇಳಿದ್ದಾರೆ. ಬಳಿಕ  ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚಲುವರಾಜು, ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋಗಳಿವೆ. ನಾಳೆ ಬಿಡುಗಡೆ ಮಾಡುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮುನಿರತ್ನ ಅವರ ಇನ್ನೂ ಎರಡು ಆಡಿಯೋ ಇವೆ, ನಾಳೆ ರಿಲೀಸ್ ಮಾಡ್ತೇನೆ: ಚಲುವರಾಜು ಸ್ಫೋಟಕ ಹೇಳಿಕೆ
ಮುನಿರತ್ನ ಅವರ ಇನ್ನೂ ಎರಡು ಆಡಿಯೋ ಇವೆ, ನಾಳೆ ರಿಲೀಸ್ ಮಾಡ್ತೇನೆ: ಚಲುವರಾಜು ಸ್ಫೋಟಕ ಹೇಳಿಕೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 16, 2024 | 4:00 PM

ಬೆಂಗಳೂರು, ಸೆಪ್ಟೆಂಬರ್​​ 16: ಕಾಂಟ್ರ್ಯಾಕ್ಟರ್ ಹಾಗೂ ಮುನಿರತ್ನ (Munirathna) ಮಾತನಾಡಿದ್ದಾರೆ ಎನ್ನಲಾದ ಆಡಿಯೋ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಮುನಿರತ್ನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋ ಇವೆ. ನಾಳೆ ರಿಲೀಸ್ ಮಾಡುತ್ತೇನೆ ಎಂದು ಗುತ್ತಿಗೆದಾರ ಚಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಗುತ್ತಿಗೆದಾರ ಚಲುವರಾಜು ನಿವಾಸಕ್ಕೆ ಇಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚಲುವರಾಜು, ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಜತೆ ಮಾತಾಡಿದ ಆಡಿಯೋ ಹಾಗೂ 30% ಕಮಿಷನ್​ ವಿಚಾರದ ಆಡಿಯೋ ಬಿಡುಗಡೆ ಮಾಡುತ್ತೇನೆ. ನಾಳೆ 2 ಆಡಿಯೋ ರಿಲೀಸ್​ ಮಾಡುತ್ತೇನೆ ಎಂದಿದ್ದಾರೆ.

ಹನುಮಂತರಾಯಪ್ಪರ ಜತೆ ಮಾತಾಡಿರೋದು ಸತ್ಯ: ಚಲುವರಾಜು 

ಅವರು ಗಲಾಟೆ ಸೃಷ್ಟಿಸಿ ವೇಲು ನಾಯಕ್ ಮೇಲೆ ಆರೋಪ ಹೊರಿಸಲು ಹನುಮಂತನರಾಯಪ್ಪ ಮೂಲಕ ವಿಷಯಾಂತರಕ್ಕೆ ಕುತಂತ್ರ ಮಾಡಲಾಗಿದೆ ಎಂದು ಚಲುವರಾಜು ಆರೋಪಿಸಿದ್ದಾರೆ. ಬೆಳಗ್ಗೆ ನನ್ನನ್ನು ಕರೆದು ನ್ಯಾಯ ಕೊಡಿಸುತ್ತೇನೆ ಅಂದರು. ಬಳಿಕ ಹಣಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ನಾನು ಈಗಾಗಲೇ ಉತ್ತರವನ್ನು ಕೊಟ್ಟಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಜೀವ ಬೆದರಿಕೆ, ಜಾತಿ ನಿಂದನೆ ಕೇಸ್​: ಮುನಿರತ್ನ ಬಂಧನದ ನಂತರ ಮತ್ತೊಂದು ಆಡಿಯೋ ವೈರಲ್

ಹನುಮಂತರಾಯಪ್ಪರ ಜತೆ ಮಾತಾಡಿರೋದು ಸತ್ಯ. ಶಾಸಕನನ್ನು ಬೈಯುವುದಕ್ಕೆ ಆಗುತ್ತಾ? 3 ವರ್ಷದಿಂದ ಎಷ್ಟು ಕಷ್ಟ ಪಟ್ಟಿದ್ದೇನೆ ನನಗೆ ಗೊತ್ತಿದೆ. ಇದು ಒಂದು ತಿಂಗಳ ಹಿಂದೆ ನಡೆದಿರುವ ಪ್ರಕರಣ. ರೇಣುಕಾಸ್ವಾಮಿ ಹೊಡೆದು ಹಾಕಿದ್ದು ಯಾರು ಗೊತ್ತಾ? ರೇಣುಕಾಸ್ವಾಮಿ ಹೊಡೆದಾಕಿದ್ದು ನನ್ನ ತಂಗಿ ಮಗ ಅಂದಿದ್ದರು. ಅವತ್ತೇ ನಾನು ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಟ್ಟಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೀವ ಬೆದರಿಕೆ, ಜಾತಿ ನಿಂದನೆ ಆರೋಪ: ಶಾಸಕ ಮುನಿರತ್ನ 2 ದಿನ ಪೊಲೀಸ್​ ಕಸ್ಟಡಿಗೆ

ನಿಮ್ಮ ಹಾಗೂ ನಿಮ್ಮ ಕುಟಬದ ಹಿಂದೆ ನಾನಿದ್ದೇನೆ. ಕುಟುಂಬಕ್ಕೆ ರಕ್ಷಣೆ ಕೊಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದ್ದಾರೆ ಎಂದರು. ಈಗ ನನಗೆ ಧೈರ್ಯ ಬಂದಿದೆ. ನನಗೆ ಜೀವ ಭಯ ಇದೆ. ನಿನನ್ನು ಹೊಡೆದು ಹಾಕುತ್ತೇನೆ ಅಂದಿದ್ದಾರೆ. ಹಾಗಾಗಿ ನನಗೆ ರಕ್ಷಣೆ ಬೇಕೇಬೇಕು. ಪೊಲೀಸ್ ರಕ್ಷಣೆ ಬೇಕು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:36 pm, Mon, 16 September 24