AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿಗೆ ದಸರಾ ಬಗ್ಗೆ ಬರೆದಿದ್ದು ಮುಸ್ಲಿಮರು, ಇವತ್ತಿಗೂ ಆನೆಗಳಿಗೆ ಅಂಬಾರಿ ಕಟ್ಟೋದು ಮುಸ್ಲಿಂ: ರಜಾಕ್

ಮೈಸೂರು ದಸರಾ ನೋಡೋದೇ ಸೊಬಗು. ಉದ್ಘಾಟನೆಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಇದೇ ಹೊತ್ತಿನಲ್ಲೇ ದಸರಾ ಉದ್ಘಾಟಕಿಯಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್​ ಅವರನ್ನ ಆಯ್ಕೆ ಮಾಡಲಾಗಿದೆ. ಆದ್ರೆ, ಇದಕ್ಕೆ ವಿರೋಧಗಳು ವ್ಯಕ್ತವಾಗಿವೆ. ಯಾವುದೇ ಕಾರಣಕ್ಕೂ ದಸರಾವನ್ನ ಬಾನು ಮುಷ್ತಾಕ್ ಉದ್ಘಾಟನೆ ಮಾಡಬಾರದು ಎಂದು ಹಿಂದು ಸಂಘಟನೆಗಳು ಆಗ್ರಹಿಸಿವೆ. ಮತ್ತೊಂದೆಡೆ ಇದಕ್ಕೆ ಮುಸ್ಲಿಂ ಮುಖಂಡರು ಪ್ರತಿಕ್ರಿಯಿಸಿದ್ದು, ಬಾನು ಮುಷ್ತಾಕ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮೊದಲ ಬಾರಿಗೆ ದಸರಾ ಬಗ್ಗೆ ಬರೆದಿದ್ದು ಮುಸ್ಲಿಮರು, ಇವತ್ತಿಗೂ ಆನೆಗಳಿಗೆ ಅಂಬಾರಿ ಕಟ್ಟೋದು ಮುಸ್ಲಿಂ: ರಜಾಕ್
Mysuru Dasara
ರಮೇಶ್ ಬಿ. ಜವಳಗೇರಾ
|

Updated on: Aug 29, 2025 | 4:08 PM

Share

ಬೆಂಗಳೂರು, (ಆಗಸ್ಟ್ 29): ಈ ವರ್ಷದ ಮೈಸೂರು ದಸರಾವನ್ನು (Mysuru Dasara) ಉದ್ಘಾಟಿಸಲು ಲೇಖಕಿಯಾಗಿರುವ ಬಾನು ಮುಸ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ಆಯ್ಕೆಗೆ ಹಿಂದೂಪರ ಹಾಗೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ವ್ಯಕ್ತಿಯೋರ್ವರಿಂದ ಉದ್ಘಾಟಿಸಬೇಕೆಂದು ಆಗ್ರಹಿಸಿವೆ. ಇದಕ್ಕೆ ಮುಸ್ಲಿಂ ಮುಖಂಡರು ಪ್ರತಿಕ್ರಿಯಿಸಿದ್ದು, ಬಾನು ಮುಸ್ತಾಕ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 1442ರಲ್ಲಿ ಮೊದಲ ಬಾರಿಗೆ ದಸರಾ ಬಗ್ಗೆ ಬರೆದಿದ್ದು ಮುಸ್ಲಿಮರು. ಆನೆಗಳಿಗೆ ಅಂಬಾರಿ ಕಟ್ಟೋದು ಇವತ್ತಿಗೂ ಮುಸ್ಲಿಮರು ಎಂದು ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್​ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಬ್ದುಲ್ ರಜಾಕ್, ಬಾನು ಮುಷ್ತಾಕ್ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದ ಹೆಮ್ಮೆಯ ಕನ್ನಡತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದು ಕೊಟ್ಟ ಮಹಿಳೆಗೆ ಆಹ್ವಾನ ಕೊಟ್ಟಿದ್ದಾರೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್​ರನ್ನು ಸಿಎಂ ಆಹ್ವಾನಿಸಿದ್ದಾರೆ. ದಸರಾ ಉದ್ಘಾಟನೆ ವಿಚಾರದಲ್ಲಿ ಬಾನುಗೆ ಫತ್ವಾ ಹೊರಡಿಸಲು ಬರಲ್ಲ ಎಂದರು.

ಇದನ್ನೂ ಓದಿ: ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಟಾಂಗ್

ಇದು ಹೇಗೆ ಧಾರ್ಮಿಕ ಹಬ್ಬ ಆಗುತ್ತೆ? ಇದು ನಾಡಹಬ್ಬ

1442ರಲ್ಲಿ ಮೊದಲ ಬಾರಿಗೆ ದಸರಾ ಬಗ್ಗೆ ಬರೆದಿದ್ದು ಮುಸ್ಲಿಮರು. ಮಿರ್ಜಾ ಇಸ್ಲಾಯಿಲ್​​ ಬೆಂಗಳೂರಿಗೆ ಅನೇಕ ಕೊಡುಗೆ ನೀಡಿದ್ದಾರೆ. ಆಗ ಮೈಸೂರು ಒಡೆಯರ್​​​​​ ಅವರನ್ನೇ ಕರೆದು ದಸರಾ ಮಾಡಲಿಲ್ವಾ? ಇಮಾಮ್​ ದರ್ಗಾಗೆ ಆನೆಗಳು ಬಂದು ಹೋದ ಬಳಿಕ ದಸರಾ ನಡೆಯುವುದು. ಆನೆಗಳಿಗೆ ಅಂಬಾರಿ ಕಟ್ಟೋದು ಇವತ್ತಿಗೂ ಮುಸ್ಲಿಮರು. ಕವಿ ಕೆ.ಎಸ್​.ನಿಸಾರ್ ಅಹ್ಮದ್ ದಸರಾ ಉದ್ಘಾಟನೆ ವೇಳೆ ಆಗ ಪ್ರಸ್ತಾವಿಲ್ಲ. ಸುದ್ದಿಯಲ್ಲಿ ಇರಬೇಕೆಂದು ಪ್ರತಾಪ್ ಸಿಂಹ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ. ರಾಜರ ಕಾಲದಲ್ಲಿ ಯುದ್ದಕ್ಕೆ ಹೋಗುವ ಮೊದಲು ಇಮಾಮ್ದಾರಿ ದರ್ಗಾಕ್ಕೆ ಬಂದು ಹೋಗುತ್ತಿದ್ದರು. ಇದು ಹೇಗೆ ಧಾರ್ಮಿಕ ಹಬ್ಬ ಆಗುತ್ತೆ? ಇದು ನಾಡಹಬ್ಬ. ಈ ತೋಟವನ್ನು ಸ್ಮಶಾನ ಮಾಡಲು ಹೊರಟಿರುವುದು ಪ್ರತಾಪ್ ಸಿಂಹ ಎಂದು ಕಿಡಿಕಾರಿದರು.

ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟನೆಗೆ ಅಪಸ್ವರ: ಟೀಕಾಕಾರರಿಗೆ ಚಾಟಿ ಬೀಸಿದ ಲೇಖಕಿ ಬಾನು ಮುಷ್ತಾಕ್

ಈ ವಿಚಾರಕ್ಕೆ ಫತ್ವಾ ಹೊರಡಿಸಬೇಕಾಗಿಲ್ಲ

ಹಜರತ್​​​ ಮೌಲಾನಾ ಡಾ.ಮಕ್ಸೂದ್​​​ ಇಮ್ರಾನ್ ಮಾತನಾಡಿ, ಬಾನು ಮುಷ್ತಾಕ್​ ದಸರಾ ಉದ್ಘಾಟನೆಗೆ ಹೋಗಬಾರದು ಎನ್ನುವುದು ತಪ್ಪು.ಈ ವಿಚಾರಕ್ಕೆ ಫತ್ವಾ ಹೊರಡಿಸಬೇಕಾಗಿಲ್ಲ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಇಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಎಲ್ಲವೂ ಇದೆ. ನಮ್ಮಲ್ಲಿ ಯಾವುದೇ ಭೇದ ಭಾವ ಇಲ್ಲ. ಮಸೀದಿಗೆ ಶಾಸಕ ಉದಯ್ ಗರುಡಾಚಾರ್​​ ನಮಾಜ್ ಮಾಡ್ತಾರೆ. ಹಾಗಂತ ಶಾಸಕ ಉದಯ್ ಗರುಡಾಚಾರ್ ಮುಸ್ಲಿಮರಾಗುತ್ತಾರಾ? ಅನೇಕ ಮುಸ್ಲಿಮರು ದೇಗುಲಕ್ಕೆ ಹೋಗುತ್ತಾರೆ, ಅವರು ಹಿಂದೂಗಳಾಗ್ತಾರಾ? ದರ್ಗಾಕ್ಕೆ ಪ್ರಧಾನಿ ಮೋದಿ ಚಾದರ ಕಳಿಸುತ್ತಾರೆ ಅವರು ಮುಸ್ಲಿಂ ಆಗುತ್ತಾರಾ? ದರ್ಗಾಗೆ ಬರಬೇಕಾದ್ರೆ ಮುಸ್ಲಿಂ ಆಗಲೇ ಬೇಕು ಅಂತ ಇಲ್ಲ. ಹಿಂದೂ ಆದ್ರೆ ಮಾತ್ರ ದೇವಸ್ಥಾನಕ್ಕೆ ಹೋಗಬೇಕೆಂದಿಲ್ಲ. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್​​ ಅವರನ್ನು ಕರೆದಿದ್ದಾರೆ. ಹೋಗುವುದು ಬಿಡುವುದು ಅವರ ಇಷ್ಟ. ಆದರೆ ಸಾಹಿತಿ ಬಾನು ಮುಷ್ತಾಕ್​​​​​ ಅವರನ್ನ ಹೋಗಬಾರದು ಎನ್ನುವುದು ತಪ್ಪು ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ