ಸುತ್ತೂರು ಜಾತ್ರೆ ಮಹೋತ್ಸವದಲ್ಲೇ ಹೊಸ ಬಾಳಿಗೆ ಕಾಲಿಟ್ಟ 178 ಜೋಡಿ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮನೆ ಮಾಡಿರುವ ಎರಡನೇ ದಿನದ ಸುತ್ತೂರು ಜಾತ್ರಾ ಸಂಭ್ರಮ. ಕಿಕ್ಕಿರಿದು ಸೇರಿರುವ ಜನ ಸಾಗರ. ಸಾವಿರಾರು ಜನರ ನಡುವೆ ಹೊಸ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು. ನವ ವಧು ವರರಿಗೆ ಆಶೀರ್ವದಿಸುತ್ತಿರೋ ಸ್ವಾಮೀಜಿಗಳು. ಹರಿದು ಬಂದಿರೋ ಜನಸ್ತೋಮ. 2ನೇ ದಿನಕ್ಕೆ ಕಾಲಿಟ್ಟ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 178 ಜೋಡಿಗಳು ಹೊಸಬಾಳಿಗೆ ಕಾಲಿಟ್ಟರು. ವೇದಮಂತ್ರಗಳ ನಡುವೆ ನವಜೋಡಿಗಳು ಹಾರ ಬದಲಾಯಿಸಿಕೊಂಡ್ರು. ಮಂಗಳ ಸೂತ್ರವನ್ನ ವರ ವಧುವಿಗೆ ಕಟ್ಟುತ್ತಿದ್ದಂತೆಯೇ ಅಕ್ಷತೆ ಕಾಳಿನ ಮೂಲಕ ಎಲ್ಲರೂ ಆಶೀರ್ವದಿಸಿದರು. […]

ಸುತ್ತೂರು ಜಾತ್ರೆ ಮಹೋತ್ಸವದಲ್ಲೇ ಹೊಸ ಬಾಳಿಗೆ ಕಾಲಿಟ್ಟ 178 ಜೋಡಿ
Follow us
ಸಾಧು ಶ್ರೀನಾಥ್​
|

Updated on:Jan 23, 2020 | 3:54 PM

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮನೆ ಮಾಡಿರುವ ಎರಡನೇ ದಿನದ ಸುತ್ತೂರು ಜಾತ್ರಾ ಸಂಭ್ರಮ. ಕಿಕ್ಕಿರಿದು ಸೇರಿರುವ ಜನ ಸಾಗರ. ಸಾವಿರಾರು ಜನರ ನಡುವೆ ಹೊಸ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು. ನವ ವಧು ವರರಿಗೆ ಆಶೀರ್ವದಿಸುತ್ತಿರೋ ಸ್ವಾಮೀಜಿಗಳು. ಹರಿದು ಬಂದಿರೋ ಜನಸ್ತೋಮ.

2ನೇ ದಿನಕ್ಕೆ ಕಾಲಿಟ್ಟ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 178 ಜೋಡಿಗಳು ಹೊಸಬಾಳಿಗೆ ಕಾಲಿಟ್ಟರು. ವೇದಮಂತ್ರಗಳ ನಡುವೆ ನವಜೋಡಿಗಳು ಹಾರ ಬದಲಾಯಿಸಿಕೊಂಡ್ರು. ಮಂಗಳ ಸೂತ್ರವನ್ನ ವರ ವಧುವಿಗೆ ಕಟ್ಟುತ್ತಿದ್ದಂತೆಯೇ ಅಕ್ಷತೆ ಕಾಳಿನ ಮೂಲಕ ಎಲ್ಲರೂ ಆಶೀರ್ವದಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಈ ಸಾಮೂಹಿಕ ಮದುವೆಗೆ ಸಾಕ್ಷಿಯಾದ್ರು.

ಇನ್ನು ಪ್ರತಿದಿನ ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಬರುವಂತ ಭಕ್ತಾದಿಗಳಿಗಾಗಿ ಮಹಾಪ್ರಸಾದ ವಿತರಣೆಯಾಗ್ತಿದೆ. ಬೆಳಗ್ಗೆ ಸಿಹಿ ಪೊಂಗಲ್, ಉಪ್ಪಿಟ್ಟು. ಮಧ್ಯಾಹ್ನ ತರಕಾರಿಹುಳಿ, ಪಾಯಸ, ಬೂಂದಿ, ಅನ್ನ ಸಂಬಾರ್, ಮಜ್ಜಿಗೆ, ಉಪ್ಪಿನಕಾಯಿಯನ್ನ ಪ್ರಸಾದದ ರೂಪದಲ್ಲಿ ನೀಡಲಾಗ್ತಿದೆ. ಪ್ರತಿದಿನ ಪ್ರಸಾದಕ್ಕಾಗಿ 6 ರಿಂದ 7 ಸಾವಿರ ಲೀಟರ್ ಹಾಲು, 25 ಸಾವಿರ ಲೀಟರ್ ಮೊಸರು, 1500 ಕ್ವಿಂಟಾಲ್ ಅಕ್ಕಿ ಜತೆಗೆ ಗಂಗಾವತಿಯಿಂದ 1000 ಕ್ವಿಂಟಾಲ್ ಸೋನಾ ಮಸೂರಿ ಅಕ್ಕಿ. ಸಾಂಬಾರಿಗಾಗಿ ಪಾಂಡವಪುರ, ಗುಂಡ್ಲುಪೇಟೆ ಭಾಗಗಳಿಂದ ಭಕ್ತರು ತಂದು ಕೊಡುವ ತರಕಾರಿಯ ಜತೆಗೆ ಮೈಸೂರಿನ ಎಪಿಎಂಸಿಯಿಂದ ನಿತ್ಯ 2ಲೋಡ್ ತರಕಾರಿ ತರಿಸಲಾಗುತ್ತಿದೆ.

ಒಟ್ಟಾರೆ ಮೈಸೂರಿನ ಪ್ರತಿಷ್ಠಿತ ಸುತ್ತೂರು ಜಾತ್ರೆ ಸಂಭ್ರಮ ಕಳೆಗಟ್ಟಿದ್ದು ಜಾತ್ರೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆ ಸಾಮಾಜಿಕ ಕಾರ್ಯಕ್ರಮಗಳು ನೆರವೇರುತ್ತಿವೆ. ಗಣ್ಯಾತಿ ಗಣ್ಯರು ಜಾತ್ರೆಗೆ ಆಗಮಿಸುತ್ತಿದ್ದು, ನಿನ್ನೆ 178 ಜೋಡಿಗಳು ಹೊಸ ಬದುಕಿಗೆ ಕಾಲಿಟ್ಟಿದ್ದು ಎಲ್ಲದಕ್ಕಿಂತ ವಿಶೇಷವಾಗಿತ್ತು. ಇನ್ನೂ ನಾಲ್ಕು ದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Published On - 1:39 pm, Thu, 23 January 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ