ಬೆಡ್ಶೀಟ್ ಬದಲಿಸಿ ಸಾಕ್ಷ್ಯನಾಶ: ಮುರುಘಾ ಶರಣರ ವಿರುದ್ಧ ಪೊಕ್ಸೊ ಪ್ರಕರಣದ ತನಿಖೆ ಬಗ್ಗೆ ವಿಶ್ವನಾಥ್ ಆಕ್ಷೇಪ
ಪೀಠಾಧಿಪತಿಗಳು ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ. ನಮ್ಮಲ್ಲಿ ಸಂಸಾರಿಗಳೇ ಸ್ವಾಮೀಗಳಾಗಿದ್ದಾರೆ. ಸಂಸಾರಿಗಳೇ ಸ್ವಾಮೀಗಳಾಗಲಿ.
ಮೈಸೂರು: ಮುರುಘ ಶರಣರ ಪ್ರಕರಣದಲ್ಲಿ ಸಾಕ್ಷ್ಯ ನಾಶವಾಗಿ ಹೋಗಿದೆ. ಮಕ್ಕಳ ಹಾಸ್ಟೆಲ್ ಬೆಡ್ ಶೀಟ್ ಎಲ್ಲಾ ಬದಲಾಗಿದೆ ಎಂದು ಮೈಸೂರಿನಲ್ಲಿ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆರೋಪ ಮಾಡಿದರು. ಪ್ರಕರಣದ ನ್ಯಾಯಾಧೀಶರಿಗೆ ಅಭಿನಂದನೆ. ಒಡನಾಡಿಯ ಪರಶು ಸ್ಟ್ಯಾನ್ಲಿ ಅವರ ಕಾರ್ಯ ಶ್ಲಾಘನೀಯ. ಅವರ ಮೇಲೆ ಬೆದರಿಕೆ ಶುರುವಾಗಿದೆ. ಯಾವುದೇ ಆಮಿಷಗಳು ಧಮ್ಕಿ ಹಣಕ್ಕೆ ಹೆದರದೆ ಕೆಲಸ ಮಾಡಿದೆ. ಮೈಸೂರು, ಚಿತ್ರದುರ್ಗ, ಬೆಂಗಳೂರು ಸುತ್ತಿ ಕೆಲಸ ಮಾಡಿದ್ದಾರೆ. ಪರಶು ಸ್ಯ್ಟಾನ್ಲಿ ಅವರ ಸದಸ್ಯರು ಅಭಿನಂದನಾರ್ಹರು ಎಂದು ಹೇಳಿದರು.
ಎಸ್.ಪಿ ಅಮಾನತು: ಎಚ್ ವಿಶ್ವನಾಥ್
ಪ್ರಕರಣ ಸಂಬಂಧ ಎಸ್.ಪಿ ಅಮಾನತು ಆಗಬೇಕು ಎಂದು ಸ್ವಾಮೀಜಿ ಪರ ಮಾತನಾಡಿದ ಮಂತ್ರಿಗಳ ವಿರುದ್ದ ವಿಶ್ವನಾಥ್ ವಾಗ್ದಾಳಿ ಮಾಡಿದರು. ಮಂತ್ರಿಗಳಿಗೆ ತಲೆ ಇದೆಯಾ? ಇವರೇನು ಜಡ್ಜ್‌ಗಳ. ಮಾಜಿ ಸ್ವಾಮೀಜಿಗಳ ವಿರುದ್ದ ಪೋಕ್ಸೋ ಕಾಯ್ದೆ ದಾಖಲಾಗಿದೆ. ಅವರ ಪರ ಮಾತನಾಡುವುದನ್ನು ಬಂದ್ ಮಾಡಿ. ಮಾಜಿ ಸ್ವಾಮೀಗಳ ಪರ ಮಾತನಾಡಬೇಡಿ. ಈ ಬಗ್ಗೆ ಕೇಂದ್ರದ ನಾಯಕರು ಸೂಚನೆ ನೀಡಿದ್ದಾರೆ. ಸ್ವಾಮೀಜಿ ಮಠದ ಕುಲಕ್ಕೆ ಅವಮಾನ. ಮುಂದೆ ಸಂಸಾರಿಗಳೇ ಮಠಾಧೀಶರಾಗಲಿ. ಮದುವೆಯಾಗದವರು ಬಂದು ಮಾಡಿರೋದನ್ನು ನಾವು ನೋಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಪೀಠಾಧಿಪತಿಗಳಿದ್ದಾರೆ ಆದರೆ ಬ್ರಹ್ಮಚಾರಿಗಳಿಲ್ಲ ಎಂದು ಹೇಳಿದರು.
ಸ್ವಾಮೀಜಿಯಿಂದ ನಾಡಿಗೆ ಕಳಂಕ:
ಸರ್ಕಾರ ಸಹಾ ಈ ಬಗ್ಗೆ ಗಮನಹರಿಸಬೇಕು. ಸರ್ಕಾರ ಮಠಕ್ಕೆ ಹಣ ಕೊಟ್ಟಿದ್ದು ಇದಕ್ಕೇನಾ ಎಂದು ಪ್ರಶ್ನಿಸಿದರು. ಅಪ್ರಾಪ್ತ ಮಕ್ಕಳು ಸುಳ್ಳು ಹೇಳುವುದಿಲ್ಲ. ಮಕ್ಕಳು ಅಮಾಯಕರು ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವಾಮಿಜಿಯಿಂದ ಆಗಿರುವ ಕಳಂಕವನ್ನು ತೊಳೆದುಕೊಳ್ಳಬೇಕು. ಸಾಕ್ಷ್ಯ ನಾಶಕ್ಕೆ ಅವಕಾವನ್ನು ಸರ್ಕಾರವೇ ಕೊಟ್ಟಂತಿದೆ. ಪೊಲೀಸರು ಅಂದರೆ ಯಾರು ಒಂದು ವಾರ ಏಕೆ ಬಂಧಿಸಲಿಲ್ಲ. ಪೊಲೀಸರಿಂದ ಕರ್ತವ್ಯ ಲೋಪವಾಗಿದೆ. ಮಂತ್ರಿಗಳು ಮಾಜಿ ಮಂತ್ರಿಗಳಿಗೆ ಏನು ಬಂದಿದೆ ಗೊತ್ತಿಲ್ಲ. ಸ್ವಾಮೀಗಳಿಗೆ ಏನು ಆಗಿಲ್ಲ, ಸ್ವಾಮೀಜಿಯಿಂದ ನಾಡಿಗೆ ಕಳಂಕ. ನ್ಯಾಯಾಂಗ ಬಂಧನಕ್ಕೆ ಖಾವಿಯಲ್ಲಿ ಏಕೆ ಕರೆದುಕೊಂಡು ಹೋದಿರಿ ಎಂದು ಪ್ರಶ್ನಿಸಿದರು.
ಸಂಸಾರಿಗಳೇ ಸ್ವಾಮೀಗಳಾಗಲಿ:
ತಕ್ಷಣ ಬಟ್ಟೆ ಬದಲಾಯಿಸುತ್ತಾರೆ. ಕೋರ್ಟ್ ಎಚ್ಚರ ಮಾಡಿದರು ನೀವು ಎಚ್ಚರ ಆಗಿಲ್ಲ. ಚಿಕ್ಕಪ್ಪ, ಅಪ್ಪ ಯಾರು ಸಂಬಂಧ ಇಲ್ಲ. ಮಕ್ಕಳ ಹೇಳಿಕೆ ಮಾತ್ರ ಮುಖ್ಯ. ಮಕ್ಕಳು ಪೊಲೀಸ್ ಕೋರ್ಟ್ ಬೇರೆ ಯಾರು ತಲೆ ಹಾಕುವಂತಿಲ್ಲ. ಇದರಲ್ಲಿ ಷಡ್ಯಂತರ ಅಥವಾ ಬೇರೆ ಏನು ಇಲ್ಲ. ಇನ್ನು ಏನಾದರೂ ಇದ್ದರೆ ಅದನ್ನು ಬಯಲಿಗೆಳೆಯಬೇಕು ಎಂದು ಮೈಸೂರಿನಲ್ಲಿ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿಕೆ ನೀಡಿದರು.
ಜಗದ್ಗುರುಗಳು ಯಾರು ಇಲ್ಲ, ಜಾತಿ ಗುರಗಳೇ ಇರುವುದು. ಇವರಿಗೆ ತಮ್ಮ ಜಾತಿ ಧರ್ಮ ಕಾಪಾಡುತ್ತೇ ಅನ್ನೋದೆ ಧೈರ್ಯ. ಆದರೆ ಇವರೆಲ್ಲರಿಗಿಂತ ಕಾನೂನು ದೊಡ್ಡದು. ಅಪರಾಧಿ ಪರ ಮಾತನಾಡಿದವರನ್ನು ಪ್ರಕರಣದಲ್ಲಿ ಸೇರಿಸಬೇಕು. ಮಠಾಧೀಶರ ರಾಜಕಾರಣಿಗಳು ಯಾರಾದರೂ ಸರಿ ಪ್ರಕರಣದಲ್ಲಿ ಸೇರಿಸಿ. ಪೀಠಾಧಿಪತಿಗಳು ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ. ನಮ್ಮಲ್ಲಿ ಸಂಸಾರಿಗಳೇ ಸ್ವಾಮೀಗಳಾಗಿದ್ದಾರೆ. ಸಂಸಾರಿಗಳೇ ಸ್ವಾಮೀಗಳಾಗಲಿ. ಇದರಿಂದ ಏನು ಸಮಸ್ಯೆ. ಧರ್ಮಸ್ಥಳ ಇದಕ್ಕೆ ಉದಾಹರಣೆಯಾಗಲಿ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:32 pm, Sun, 4 September 22