AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೈರಪ್ಪನವರ ವಂಶವೃಕ್ಷ ಕಾದಂಬರಿ ಅನಧಿಕೃತ ಪ್ರಕಟ, 5 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ತೀರ್ಪು

ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕನ್ನಡ ಕಾದಂಬರಿ ವಂಶವೃಕ್ಷದ ತೆಲುಗು ಅನುವಾದವನ್ನು ಅನುಮತಿ ಪಡೆಯದೆ ಪ್ರಕಟಿಸಿದ್ದಕ್ಕಾಗಿ ಹೈದರಾಬಾದ್ ಮೂಲದ ಪ್ರಕಾಶಕರಿಗೆ 5.05 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಭೈರಪ್ಪನವರ ವಂಶವೃಕ್ಷ ಕಾದಂಬರಿ ಅನಧಿಕೃತ ಪ್ರಕಟ, 5 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ತೀರ್ಪು
ಎಸ್​ಎಲ್​ ಭೈರಪ್ಪ, ವಂಶವೃಕ್ಷ
ರಾಮ್​, ಮೈಸೂರು
| Edited By: |

Updated on: Dec 30, 2023 | 10:39 AM

Share

ಮೈಸೂರು, ಡಿಸೆಂಬರ್​ 30: ಸಾಹಿತಿ ಎಸ್.ಎಲ್.ಭೈರಪ್ಪ (SL Bairappa) ಅವರ ಕನ್ನಡ ಕಾದಂಬರಿ ವಂಶವೃಕ್ಷದ (Vamshavruksha) ತೆಲುಗು ಅನುವಾದವನ್ನು ಅನುಮತಿ ಪಡೆಯದೆ ಪ್ರಕಟಿಸಿದ್ದಕ್ಕಾಗಿ ಹೈದರಾಬಾದ್ ಮೂಲದ ಪ್ರಕಾಶಕರಿಗೆ 5.05 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆ (Copyright Act) ಮಾಡಿದ್ದಕ್ಕಾಗಿ ಪ್ರಿಯದರ್ಶಿನಿ ಪ್ರಚುರುನಾಲು ವಿರುದ್ಧ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಡಿಸೆಂಬರ್ 21 ರಂದು ಈ ಆದೇಶ ಹೊರಡಿಸಿದೆ.

ಹೊರ ರಾಜ್ಯಗಳಲ್ಲೂ ಹೆಚ್ಚಿನ ಓದುಗರನ್ನು ಹೊಂದಿರುವ ಜನಪ್ರಿಯ ಬರಹಗಾರ ಭೈರಪ್ಪ ಅವರು ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ಪುಸ್ತಕಗಳು ಅನೇಕ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿವೆ. ವಂಶವೃಕ್ಷವನ್ನು ತೆಲುಗು ಭಾಷೆಯಲ್ಲಿ ಭಾಷಾಂತರಿಸುವ ಹಕ್ಕನ್ನು ಸನಗರಂ ನಾಗಭೂಷಣಂ ಅವರಿಗೆ ನೀಡಲಾಗಿದೆ ಎಂದು ಭೈರಪ್ಪ ಅವರ ಆಪ್ತ ಮೂಲಗಳು ತಿಳಿಸಿವೆ. ಇನ್ನು ಕನ್ನಡದ ವಂಶವೃಕ್ಷ ಪುಸ್ತಕವು ತೆಲುಗಿನಲ್ಲಿ ವಂಶವೃಕ್ಷಂ ಎಂದು ಪ್ರಕಟವಾಗಿತ್ತು.

ಸನಗರಂ ನಾಗಭೂಷಣಂ ಅವರು ಕೆಲವು ವರ್ಷಗಳ ಹಿಂದೆ ನಿಧನರಾದರು. ಇವರ ನಿಧನದ ಬಳಿಕ ಭಾಷಾಂತರಿಸುವ ಹಕ್ಕು ಬೇರೆಯವರಿಗೆ ನೀಡಿರಲಿಲ್ಲ.

ಇದನ್ನೂ ಓದಿ: Parva: ‘ಪರ್ವ’ ಕಾದಂಬರಿ ಆಧರಿಸಿ ವಿವೇಕ್​ ಅಗ್ನಿಹೋತ್ರಿ ಸಿನಿಮಾ; ಟೈಟಲ್​ ಲಾಂಚ್​ ಮಾಡಿದ ಎಸ್​.ಎಲ್​. ಭೈರಪ್ಪ

ಆದರೆ ಪ್ರಿಯದರ್ಶಿನಿ ಪ್ರಚುರುನಾಲು ವತ್ಸಲದ ಸಂಪಾದಕರು ಅನುಮತಿ ಪಡೆಯದೆ ವಂಶವೃಕ್ಷಂ ಪ್ರಕಟಿಸಿರುವುದು ನವೆಂಬರ್‌ನಲ್ಲಿ ಭೈರಪ್ಪ ಅವರ ಗಮನಕ್ಕೆ ಬಂದಿದೆ. ಒಂದು ಪುಸ್ತಕಕ್ಕೆ 360 ರೂ ನಿಗದಿ ಮಾಡಿ ಒಂದು ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ.

ವತ್ಸಲಾ ಅವರು ಹಕ್ಕುಸ್ವಾಮ್ಯ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದರು. ಇದನ್ನು ತಿಳಿದ ಎಸ್​ಎಲ್​ ಭೈರಪ್ಪ ಅವರು ವಂಶವೃಕ್ಷಂ ಪ್ರತಿಗಳನ್ನು ಮಾರಾಟ ಮಾಡದಂತೆ ಮತ್ತು ಮಾರಾಟವಾಗದ ಪ್ರತಿಗಳನ್ನು ಒಪ್ಪಿಸುವಂತೆ ನವೆಂಬರ್ 15 ರಂದು ವತ್ಸಲಾ ಅವರಿಗೆ ತಮ್ಮ ವಕೀಲ ಓ ಶಾಮ್ ಭಟ್ ಮೂಲಕ ನೋಟಿಸ್ ನೀಡಿದ್ದರು.

5 ಲಕ್ಷ ಪರಿಹಾರ ನೀಡಬೇಕು ಎಂದು ನೋಟಿಸ್‌ನಲ್ಲಿ ಕೋರಲಾಗಿದೆ. ಆದರೆ, ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಬಂರಲಿಲ್ಲ. ನಂತರ ಭೈರಪ್ಪ ಅವರು 5.05 ಕೋಟಿ ರೂಪಾಯಿ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ನ್ಯಾಯಾಲಯದ ಕಮಿಷನರ್ ಪಿ.ಜೆ.ರಾಘವೇಂದ್ರ ಅವರು ಭೈರಪ್ಪ ಅವರ ಮನೆಗೆ ಭೇಟಿ ನೀಡಿ ಸಾಕ್ಷ್ಯಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ ಅವರು ವತ್ಸಲಾ ಅವರಿಗೆ 5.05 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹಾಗೂ 1960ರಲ್ಲಿ ಪ್ರಕಟಿಸಲಾದ ವಂಶವೃಕ್ಷ ಸೇರಿದಂತೆ ಅನುವಾದಿತ ಕೃತಿಗಳ ಮರುಮುದ್ರಣ ಅಥವಾ ಪ್ರತಿಗಳನ್ನು ಮಾರಾಟ ಮಾಡದಂತೆ ಹಾಗೂ ಮಾರಾಟವಾಗದ ಪ್ರತಿಗಳನ್ನು ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಭೈರಪ್ಪ ಅವರು 25 ಕಾದಂಬರಿಗಳು ಮತ್ತು ಸಾಹಿತ್ಯದ ಇತರ ಪ್ರಕಾರಗಳನ್ನು ಬರೆದಿದ್ದಾರೆ. ವಂಶವೃಕ್ಷ ಅವರ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು. ವಂಶವೃಕ್ಷ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು 1971 ರಲ್ಲಿ ಖ್ಯಾತ ರಂಗಕರ್ಮಿ ಬಿವಿ ಕಾರಂತರು ಕನ್ನಡದಲ್ಲಿ ಚಲನಚಿತ್ರ ಮಾಡಿದ್ದಾರೆ. ಈ ಕಾದಂಬರಿಯು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪಠ್ಯಪುಸ್ತಕವೂ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ