ಬಹಿಷ್ಕಾರಕ್ಕೆ ಮನನೊಂದು ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ವ್ಯಕ್ತಿ ಸಾವು

ನಂಜನಗೂಡು(Nanjanagudu)ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ವ್ಯಕ್ತಿಯೋರ್ವ ಬಹಿಷ್ಕಾರಕ್ಕೆ ಮನನೊಂದು ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ಸಾವನ್ನಪ್ಪಿದ್ದಾನೆ. ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಕ್ಕಾಗಿ ಮೃತ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಬಹಿಷ್ಕಾರಕ್ಕೆ ಮನನೊಂದು ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ವ್ಯಕ್ತಿ ಸಾವು
ಸ್ವಾಮಿ (48) ಮೃತ ವ್ಯಕ್ತಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 24, 2024 | 7:31 PM

ಮೈಸೂರು, ಸೆ.24: ಬಹಿಷ್ಕಾರಕ್ಕೆ ಮನನೊಂದು ವ್ಯಕ್ತಿಯೋರ್ವ ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡು(Nanjanagudu)ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ. ಸ್ವಾಮಿ (48) ಮೃತ ವ್ಯಕ್ತಿ. ಒಂದು ವರ್ಷದ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಗ್ರಾಮದ ಮುಖಂಡರು ನಮಗೆ ಬಹಿಷ್ಕಾರ ಹಾಕಿದ್ದರು. ಒಂದು ಲಕ್ಷ ದಂಡ ಕಟ್ಟಿದರೆ ಮಾತ್ರ ಬಹಿಷ್ಕಾರ ವಾಪಸ್ಸು ಎಂದು ಹೇಳಿದ್ದರು.

ಈ ಹಿನ್ನಲೆ ಕಳೆದ ಒಂದು ವರ್ಷದಿಂದ ಗ್ರಾಮದ ಹೊರ ವಲಯದಲ್ಲಿ ನಮ್ಮ ಕುಟುಂಬ ವಾಸವಿತ್ತು. ಬಹಿಷ್ಕಾರದಿಂದ ಮನನೊಂದು ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ನನ್ನ ಮಗ ಸ್ವಾಮಿ ಅತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ತಾಯಿ ತಿಮ್ಮಮ್ಮ ಎನ್ನುವವರು ಗಂಭೀರ ಆರೋಪ ಮಾಡಿದ್ದು, ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಆತ್ಮಹತ್ಯೆ ತಾಣ ಆಗುತ್ತಿದೆಯಾ ನಮ್ಮ ಮೆಟ್ರೋ? 9 ತಿಂಗಳಲ್ಲಿ 7ನೇ ಘಟನೆ, ಇಬ್ಬರು ಸಾವು!

ಹೆಂಡತಿ ಮನೆಯವರ ವಿರುದ್ದ ವಿಡಿಯೋ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆ

ಕೋಲಾರ: ತಾಲೂಕಿನ ಮುದುವತ್ತಿ ಗ್ರಾಮದ ಬಳಿಯ ಮಾರ್ಕಂಡೇಶ್ವರ ಬೆಟ್ಟದಲ್ಲಿ ಪತ್ನಿಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಶ್ರೀಕಾಂತ್(31) ಎಂಬ ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ. ಪತ್ನಿ ಪಾವನಾ, ಮಾವ ಯಲ್ಲಪ್ಪರಿಂದ ಕಿರುಕುಳ ಹಾಗೂ ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿ ವಿಡಿಯೋ ಮಾಡಿಟ್ಟು ಬಳಿಕ ನೇಣಿಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​