ಮನದಲ್ಲಿ ಅಷ್ಟು ನೋವಿದ್ದರೂ ಯುಗಾದಿಯ ಶುಭಾಶಯ ತಿಳಿಸಿದ ಕನ್ನಡ ಪ್ರೇಮಿ ಸಯ್ಯದ್ ಇಸಾಕ್‌

ಕನ್ನಡ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ನಿನ್ನೆಯಿಂದ ಹಲವಾರು ಜನ ಬಂದು ಪುಸ್ತಕ ಹಾಗೂ ನೆರವನ್ನು ನೀಡಿ ಪ್ರೀತಿ ತೋರಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ವಿನಮ್ರ ಭಾವ ಹಂಚಿಕೊಂಡಿದ್ದಾರೆ.

  • TV9 Web Team
  • Published On - 17:22 PM, 11 Apr 2021
ಮನದಲ್ಲಿ ಅಷ್ಟು ನೋವಿದ್ದರೂ ಯುಗಾದಿಯ ಶುಭಾಶಯ ತಿಳಿಸಿದ ಕನ್ನಡ ಪ್ರೇಮಿ ಸಯ್ಯದ್ ಇಸಾಕ್‌
ಕನ್ನಡ ಪ್ರೇಮಿ ಸಯ್ಯದ್ ಇಸಾಕ್​ರ ಗ್ರಂಥಾಲಯ

ಮೈಸೂರು: ವಿದ್ಯೆ ಬಲ್ಲವನು ಏನು ಬೇಕಾದರೂ ಮಾಡಬಲ್ಲ. ಅದು ಪುಸ್ತಕಓದುವುದರಿಂದ ಮಾತ್ರ ಸಾಧ್ಯ. ಆದರೆ ಮೈಸೂರಿನ ಗ್ರಂಥಾಲಯಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಇಟ್ಟು ಗ್ರಂಥಾಲಯದಲ್ಲಿದ್ದ 11 ಸಾವಿರ ಪುಸ್ತಕಗಳು ಸುಟ್ಟು ಭಸ್ಮವಾಗಿದ್ದವು. ಸಾಂಸ್ಕೃತಿಕ ನಗರಿ ಮೈಸೂರಿನ ಕನ್ನಡ ಪ್ರೇಮಿ ಸಯ್ಯದ್ ಅವರ ಗ್ರಂಥಾಲಯಕ್ಕೆ ಬೆಂಕಿ ಹೊತ್ತುಕೊಂಡಿದ್ದು ಪುಸ್ತಕಗಳು ಬೆಂಕಿಗಾಹುತಿಯಾಗಿದ್ದವು.ಇಂತಹ ನೋವಿನ ಸಂದರ್ಭದಲ್ಲೂ ನೋವಿನಲ್ಲೂ ಕನ್ನಡ ಪ್ರೇಮಿ ಸಯ್ಯದ್ ಇಸಾಕ್‌ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

ಕನ್ನಡ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ನಿನ್ನೆಯಿಂದ ಹಲವಾರು ಜನ ಬಂದು ಪುಸ್ತಕ ಹಾಗೂ ನೆರವನ್ನು ನೀಡಿ ಪ್ರೀತಿ ತೋರಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ವಿನಮ್ರ ಭಾವ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ನನ್ನನ್ನು ದೂರವಾಣಿ ಮೂಲಕ ಮಾತನಾಡಿಸಿದ್ದಾರೆ. ಇದೇ ಜಾಗದಲ್ಲಿ ಗ್ರಂಥಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಪುಸ್ತಕ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದ ಸಯ್ಯದ್ ಇಸಾಕ್‌ ಹೇಳಿದ್ದಾರೆ.

ಮೈಸೂರಿನ ರಾಜೀವ್‌ ನಗರದಲ್ಲಿರುವ ಅಪ್ಪಟ ಕನ್ನಡ ಪ್ರೇಮಿ ಸಯ್ಯದ್ ಇಸಾಕ್ ಅವ​ರ ಗ್ರಂಥಾಲಯದ 11 ಸಾವಿರ ಪುಸ್ತಕಗಳು ಸುಟ್ಟು ಕರಕಲಾಗಿದ್ದವು. ಈ ಜ್ಞಾನ ದೇಗುಲವನ್ನು 2011ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಸಯ್ಯದ್ ಇಸಾಕ್ ತಮ್ಮ ಉಳಿತಾಯದ ಹಣದಲ್ಲಿ ಗುಡಿಸಿಲಿನಲ್ಲೇ ಗ್ರಂಥಾಲಯ ನಿರ್ಮಿಸಿದ್ದರು. ತನಗೆ ಅಕ್ಷರ ಜ್ಞಾನ ಇಲ್ಲದಿದ್ದರೇನಂತೆ ಇತರರಿಗೆ ಅಕ್ಷರ ಜ್ಞಾನ ನೀಡಲು ಮುಂದಾಗಿದ್ದ ಸಯ್ಯದ್​ರ ಗ್ರಂಥಾಲಯ ಹಾಗೂ ಅವರ ಈ ಪ್ರೀತಿ ಮೈಸೂರಿನಲ್ಲಿ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ದುಷ್ಕರ್ಮಿಗಳು ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಕೃತ್ಯ ಎಸಗಿದ್ದರು.

ಇದನ್ನೂ ಓದಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ 

ಪೆಟ್ರೋಲ್ ಬಂಕ್​ನಲ್ಲಿ ಹೊತ್ತಿ ಉರಿದ ಓಮ್ನಿ ಕಾರ್