ಮೈಸೂರು ದಸರಾ ವೆಚ್ಚ ಪಟ್ಟಿ ಬಿಡುಗಡೆ: ಸರಳ ಎನ್ನುತ್ತಲೇ ಕಳೆದ ಬಾರಿಗಿಂತ ಹೆಚ್ಚು ಖರ್ಚು

ದಸರಾ ವೆಚ್ಚದ ಪಟ್ಟಿಯನ್ನು ಮೈಸೂರು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಈ ಬಾರಿ ಮೈಸೂರು ದಸರಾದ ಒಟ್ಟು ವೆಚ್ಚ 27 ಕೋಟಿ ರೂ. ಕಳೆದ ಬಾರಿ ದಸರಾಗೆ 26 ಕೋಟಿ ರೂ. ಖರ್ಚು ಮಾಡಲಾಗಿತ್ತು. ಅಂದರೆ 1 ಕೋಟಿ ರೂ. ಹೆಚ್ಚು ಖರ್ಚು ಮಾಡಲಾಗಿದೆ. 

ಮೈಸೂರು ದಸರಾ ವೆಚ್ಚ ಪಟ್ಟಿ ಬಿಡುಗಡೆ: ಸರಳ ಎನ್ನುತ್ತಲೇ ಕಳೆದ ಬಾರಿಗಿಂತ ಹೆಚ್ಚು ಖರ್ಚು
ಮೈಸೂರು ದಸರಾ (ಸಂಗ್ರಹ ಚಿತ್ರ)
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Dec 02, 2023 | 5:30 PM

ಮೈಸೂರು, ಡಿಸೆಂಬರ್​​ 02: ರಾಜ್ಯದಲ್ಲಿ ಮಳೆ ಕಡಿಮೆಯಾಗಿ ರೈತರು ಸಂಕಷ್ಟದಲ್ಲಿದ್ದ ಹಿನ್ನೆಲೆ ಪ್ರಸಕ್ತ ವರ್ಷದ ಮೈಸೂರು ದಸರಾ (mysore dasara) ವನ್ನ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧಸಿತ್ತು. ಸದ್ಯ ದಸರಾ ವೆಚ್ಚದ ಪಟ್ಟಿಯನ್ನು ಮೈಸೂರು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಈ ಬಾರಿ ಮೈಸೂರು ದಸರಾದ ಒಟ್ಟು ವೆಚ್ಚ 27 ಕೋಟಿ ರೂ. ಕಳೆದ ಬಾರಿ ದಸರಾಗೆ 26 ಕೋಟಿ ರೂ. ಖರ್ಚು ಮಾಡಲಾಗಿತ್ತು. ಅಂದರೆ 1 ಕೋಟಿ ರೂ. ಹೆಚ್ಚು ಖರ್ಚು ಮಾಡಲಾಗಿದೆ.

ಸರ್ಕಾರ ಹಾಗೂ ಪ್ರಾಯೋಜಕತ್ವದಿಂದ 29 ಕೋಟಿ ರೂ. ಹಣ ಬಂದಿದೆ. ಪ್ರಾಯೋಜಕತ್ವದಿಂದ ದಸರಾಗೆ ಒಟ್ಟು 2 ಕೋಟಿ ರೂ. ಬಂದಿದೆ. ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್​​ನಿಂದ 1 ಕೋಟಿ ರೂಪಾಯಿ ಬಂದಿದೆ.

ಇದನ್ನೂ ಓದಿ: ರೈತಾಪಿ ವರ್ಗ ಸಂಕಷ್ಟ: ಪ್ರಸಕ್ತ ವರ್ಷ ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ

ಈ ವರ್ಷ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಕಳಗೆಟ್ಟಿತ್ತು. ಸತತ 4ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು ಬನ್ನಿಮಂಟಪವನ್ನ ತಲುಪಿದ್ದು ಜಂಬೂಸವಾರಿ ಯಶಸ್ವಿಯಾಗಿ ನೆರವೇರಿತ್ತು. ಕ್ಯಾಪ್ಟನ್ ಅಭಿಮನ್ಯು ಒಟ್ಟು 2 ಗಂಟೆ 16 ನಿಮಿಷದಲ್ಲಿ 5 ಕಿ. ಮೀ ಅಂಬಾರಿಯನ್ನ ಹೊತ್ತು ಸಾಗಿದ್ದ. ಬನ್ನಿಮಂಟಪಕ್ಕೆ ಅಂಬಾರಿ ತಲುಪಿದ ಬಳಿಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಗಿದ್ದು ದಸರಾಗೆ ಅದ್ಧೂರಿ ತೆರೆ ಬಿದ್ದಿತ್ತು.

ಅರಮನೆ ಅಂಗಳದಲ್ಲಿ ರಾಜವೈಭೋಗ ಮರುಕಳಿಸಿತ್ತು. ಅರಮನೆಯ ಕಿಟಕಿಯಿಂದಲೇ ರಾಜಮಾತೆ ಪ್ರಮೋದದೇವಿ, ರಾಣಿ ತ್ರಿಶಿಕಾ, ಯುವರಾಜ ಆಧ್ಯವೀರ ಜಂಬೂಸವಾರಿ ಕಣ್ತುಂಬಿಕೊಂಡಿದ್ದರು.

ಇದನ್ನೂ ಓದಿ: ದಸರಾ ವೇಳೆ ಮೈಸೂರು ಅರಮನೆ, ಮೃಗಾಲಯಕ್ಕೆ ಭೇಟಿ ಕೊಟ್ಟ ಪ್ರವಾಸಿಗರ ದಂಡು; ಆದಾಯ ಹೆಚ್ಚಳ

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ದಳ ಆಕರ್ಷಕ ಪಥಸಂಚಲನ ನಡೆಸಿದ್ದರು. ಅಶ್ವಾರೋಹಿ ಪಡೆಯ ಪೊಲೀಸರು ಟೆಂಟ್ ಪಿಕ್ಕಿಂಗ್ ಮಾಡಿದ್ದರು. ಶ್ವೇತಾಶ್ವ ತಂಡ ಬೈಕ್ ಸಾಹಸ ಪ್ರದರ್ಶನ ಮಾಡಿದ್ರೆ, ಡ್ರೋನ್ ಲೈಟ್, ಲೇಸರ್ ಶೋ ನೋಡುಗರ ಕಣ್ಮನ ಸೆಳೆದಿದ್ದವು.

ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಅನಾವರಣ

ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಧಾರವಾಡದ ಟ್ಯಾಬ್ಲೋ ಗಮನ ಸೆಳೆದಿತ್ತು. ಧಾರವಾಡ ಪೇಡಾ, ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಅನ್ನೋ ಟ್ಯಾಗ್‌ಲೈನ್‌ ಗಮನ ಸೆಳೆದಿತ್ತು. ಚಿಕ್ಕಮಗಳೂರಿನ ಸ್ತಬ್ಧಚಿತ್ರದಲ್ಲಿ ಬೆಟ್ಟದಿಂದ ಬಟ್ಟಲಿನವರೆಗೆ ಅನ್ನೋ ಅಡಿಬರಹ ಹಾಕಿ ಕಾಫಿ ತೋಟದಿಂದ ಕಾಫಿ ಬಟ್ಟಲುವರೆಗೂ ಕಲಾಕೃತಿಗಳಿದ್ವು. ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪು ಹೀಗೆ ಹಲವು ಜಿಲ್ಲೆಗಳ ಸ್ತಬ್ಧಚಿತ್ರಗಳು ವಿವಿಧತೆ ಏಕತೆಯನ್ನು ಸಾರಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:13 pm, Sat, 2 December 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್