ಸಾಂಸ್ಕೃತಿಕ ನಗರಿಯಲ್ಲಿ ಮರಳು ಲೂಟಿಗೆ ಕಡಿವಾಣ: ಖಾಕಿ ಪ್ಲ್ಯಾನ್ಗೆ ದಂಧೆಕೋರರು ಶಾಕ್!
ಮೈಸೂರು: ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಪಡೆದಿರೋ ಮೈಸೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗ್ತಿದೆ. ನದಿ ಒಡಲನ್ನು ಬಗೆದು ಮರಳನ್ನು ದೋಚುತ್ತಿದ್ದಾರೆ. ಆದ್ರೀಗ ಮೈಸೂರು ಎಸ್‌ಪಿ ಅಕ್ರಮಕ್ಕೆ ಬ್ರೇಕ್ ಹಾಕೋಕೆ ಮಾಸ್ಟರ್ ಪ್ಲ್ಯಾನ್ ಒಂದನ್ನ ಮಾಡಿದ್ದಾರೆ. ಇದ್ರಿಂದ ದಂಧೆಕೋರರು ದಂಗಾಗಿಹೋಗಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಗೆ ಖಾಕಿ ಮಾಸ್ಟರ್ ಪ್ಲ್ಯಾನ್! ಯೆಸ್.. ಮೈಸೂರು ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೀತಿದೆ. ಜಿಲ್ಲೆಯ ಜೀವನಾಡಿ ಕಾವೇರಿ, ಕಪಿಲಾ ನದಿ ತೀರ ದಂಧೆಕೋರರ ಪಾಲಿಗೆ ಚಿನ್ನದ ಮೊಟ್ಟೆ […]
ಮೈಸೂರು: ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಪಡೆದಿರೋ ಮೈಸೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗ್ತಿದೆ. ನದಿ ಒಡಲನ್ನು ಬಗೆದು ಮರಳನ್ನು ದೋಚುತ್ತಿದ್ದಾರೆ. ಆದ್ರೀಗ ಮೈಸೂರು ಎಸ್‌ಪಿ ಅಕ್ರಮಕ್ಕೆ ಬ್ರೇಕ್ ಹಾಕೋಕೆ ಮಾಸ್ಟರ್ ಪ್ಲ್ಯಾನ್ ಒಂದನ್ನ ಮಾಡಿದ್ದಾರೆ. ಇದ್ರಿಂದ ದಂಧೆಕೋರರು ದಂಗಾಗಿಹೋಗಿದ್ದಾರೆ.
ಅಕ್ರಮ ಮರಳುಗಾರಿಕೆ ತಡೆಗೆ ಖಾಕಿ ಮಾಸ್ಟರ್ ಪ್ಲ್ಯಾನ್! ಯೆಸ್.. ಮೈಸೂರು ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೀತಿದೆ. ಜಿಲ್ಲೆಯ ಜೀವನಾಡಿ ಕಾವೇರಿ, ಕಪಿಲಾ ನದಿ ತೀರ ದಂಧೆಕೋರರ ಪಾಲಿಗೆ ಚಿನ್ನದ ಮೊಟ್ಟೆ ಇಡೋ ಕೋಳಿಯಂತಾಗಿದೆ. ನಂಜನಗೂಡು, ಟಿ.ನರಸೀಪುರ ಹಾಗೂ ಕೆ.ಆರ್.ನಗರ ತಾಲೂಕಿನಲ್ಲಿ ನಡೆಯೋ ಈ ದಂಧೆ ಹಿಂದೆ ಪ್ರಭಾವಿಗಳ ಕೈಗಳೇ ಬಲವಾಗಿ ನಿಂತಿದೆ. ಈ ಬಗ್ಗೆ ರೈತರು ಸಾಕಷ್ಟು ಹೋರಾಟಗಳನ್ನೇ ಮಾಡುತ್ತಾ ಬಂದಿದ್ದಾರೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮೈಸೂರು ಎಸ್‌ಪಿ ರಿಷ್ಯಂತ್ ದಂಧೆಕೋರರಿಗೆ ಭರ್ಜರಿಯಾಗೇ ಶಾಕ್ ಕೊಟ್ಟಿದ್ದಾರೆ.
ಮೈಸೂರು ಪೊಲೀಸರ ನಿರ್ಧಾರಕ್ಕೆ ದಂಧೆಕೋರರು ಶಾಕ್! ಯೆಸ್.. ಎರಡು ಬಾರಿ ಪ್ರಕರಣದಲ್ಲಿ ಸಿಕ್ಕಿಬಿದ್ರೆ ಬೇಲ್ ಕ್ಯಾನ್ಸಲ್ ಮಾಡಿ ಅವ್ರ ವಿರುದ್ಧ ರೌಡಿಶೀಟ್ ಓಪನ್ ಮಾಡೋದಾಗಿ ಎಸ್‌ಪಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದಿಷ್ಟೇ ಅಲ್ಲ ಒಂದು ವೇಳೆ ಅಕ್ರಮ ಚಟುವಟಿಕೆಯಲ್ಲಿ ಯಾವುದೇ ವಾಹನ ಸಿಕ್ಕಿಬಿದ್ರೆ ಅಂತಹ ವಾಹನವನ್ನ ರಿಲೀಸ್ ಮಾಡಲ್ಲ. ಒಂದು ವೇಳೆ ಬಿಡ್ಬೇಕು ಅಂದ್ರೆ ಆ ವಾಹನದ ಮೌಲ್ಯದಷ್ಟೇ ಬ್ಯಾಂಕ್ ಶ್ಯೂರಿಟಿ ಕೊಟ್ಟ ಬಿಡಿಸಿಕೊಳ್ಳಬೇಕು.
ಇನ್ನು ಎಲ್ಲೆಲ್ಲಿ ಮರಳು ದಂಧೆ ನಡೆಯುತ್ತಿದೆ ಅನ್ನೋದನ್ನ ಪಚ್ಚೆ ಹಚ್ಚಲು ರಸ್ತೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಆ ಮೂಲಕ ತಪ್ಪಿಸಿಕೊಂಡು ಹೋದ್ರೂ ಹುಡುಕಿ ಮತ್ತೆ ಕ್ರಮಕೈಗೊಳ್ಳುತ್ತಾರಂತೆ. ಇಲಾಖೆಯವ್ರು ಭಾಗಿಯಾದ್ರೂ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಿದ್ದಾರೆ. ಎಸ್‌ಪಿಯವ್ರ ಈ ನಿರ್ಧಾರಕ್ಕೆ ರೈತರು ಹಾಗೂ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ನದಿಗಳನ್ನ ಉಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಡೆಗೆ ಸಿಕ್ಕಾಪಟ್ಟೆ ಪ್ರಶಂಸೆ ವ್ಯಕ್ತವಾಗ್ತಿದೆ. ಆದ್ರೆ ಅಕ್ರಮ ಮರಳು ದಂಧೆಕೋರರ ಹೆಡೆಮುರಿ ಕಟ್ಟಿ ತಕ್ಕ ಶಿಕ್ಷೆ ಕೊಡಿಸಬೇಕಿದೆ. ಆದ್ರೆ ಇದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ.
Published On - 5:04 pm, Fri, 14 February 20