ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ: ಮಗನ ಅಂಗಾಂಗ ದಾನ ಮಾಡಿದ ತಂದೆ-ತಾಯಿ
ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ ಪೋಷಕರು
ಮೈಸೂರು: ನಗರದಲ್ಲಿ ಮತ್ತೊಬ್ಬ ಯುವಕನ ಕುಟುಂಬ ಅಂಗಾಂಗ ದಾನ ಮಾಡಿದೆ. ಅಪಘಾತದಲ್ಲಿ (Accident) ಮೆದುಳು ನಿಷ್ಕ್ರಿಯಗೊಂಡಿದ್ದ (Brain dead) ಮಗನ ಅಂಗಾಂಗ ದಾನ (Organs donate) ಮಾಡಿ ಪೋಷಕರು ಮಾದರಿಯಾಗಿದ್ದಾರೆ. ಹೆಬ್ಬಾಳ ಬಡಾವಣೆ ನಿವಾಸಿ, ಇಂಜಿನಿಯರಿಂಗ್ ವಿದ್ಯಾರ್ಥಿ ಮನೋಜ್ ಶಂಕರ್ಗೆ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಕೋಮಾಗೆ ಜಾರಿದ್ದನು. ಈ ಸಂಬಂಧ ಮೊನೋಜ್ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಮನೋಜ್ ಮೆದುಳು ನಿಷ್ಕ್ರಿಯಗೊಂಡಿದ್ದು, ಎರಡು ದಿನ ಕಳೆದರೂ ಚೇತರಿಸಿಕೊಂಡಿರಲಿಲ್ಲ. ಹೀಗಾಗಿ ಮನೋಜ್ನ ತಂದೆ ಜಯಶಂಕರ್, ತಾಯಿ ಜಯಲಕ್ಷ್ಮೀ ಮಗನ ಹೃದಯ, ಲಿವರ್, ಕಿಡ್ನಿ, ಕಾರ್ನಿಯಾ ದಾನ ಮಾಡಿದ್ದಾರೆ. ಮನೋಜ್ಗೆ ಅಪೋಲೊ ಆಸ್ಪತ್ರೆಯ ಸಿಬ್ಬಂದಿ ಗೌರವ ಸಮರ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Sun, 30 October 22