ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜ್ ತೆರವು; ಅವಶೇಷಗಳು ಮೋರಿಯಲ್ಲಿ ಪತ್ತೆ
ಮೈಸೂರಿನ ಜೆಎಸ್ಎಸ್ ಕಾಲೇಜು ಬಳಿ ಇರುವ ಬಸ್ ಶೆಲ್ಟರ್ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ.
ಮೈಸೂರು: ಕೆಲವು ದಿನಗಳ ಹಿಂದೆ ವಿವಾದ ಸೃಷ್ಟಿಸಿದ್ದ ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜನ್ನು ತೆರವುಗೊಳಿಸಲಾಗಿದೆ. ಬಸ್ ಶೆಲ್ಟರ್ ಮೇಲಿದ್ದ ಮೂರು ಗುಂಬಜ್ಗಳ ಪೈಕಿ 2 ಗುಂಬಜ್ ತೆರವು ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಮೈಸೂರಿನ ಜೆಎಸ್ಎಸ್ ಕಾಲೇಜು ಬಳಿ ಇರುವ ಬಸ್ ಶೆಲ್ಟರ್ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ. ಇದೇ ಮಾದರಿಯಲ್ಲಿ 12 ಬಸ್ ಶೆಲ್ಟರ್ ನಿರ್ಮಾಣ ಮಾಡಲಾಗುತ್ತೆ. ಅರಮನೆ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸುವ ಉದ್ದೇಶ ಇತ್ತು. ಇದಕ್ಕೆ ಅನವಶ್ಯಕವಾಗಿ ಧರ್ಮದ ಲೇಪನ ಮಾಡಿದ್ದು ನೋವಾಗಿದೆ. ಹಿರಿಯರ ಸಲಹೆ ಮೇರೆಗೆ, ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೂ ಅನ್ಯತಾ ಭಾವಿಸಬಾರದು ಎಂದು ಮಾಧ್ಯಮ ಪ್ರಕಟಣೆ ಮೂಲಕ ಶಾಸಕ ರಾಮದಾಸ್ ಜನತೆಗೆ ಮನವಿ ಮಾಡಿದ್ದಾರೆ.
ಕಾಲಾವಕಾಶ ಕೋರಿ ಮಾತಿನಂತೆ ನಡೆದುಕೊಂಡ ಡಿಸಿಗೆ ಧನ್ಯವಾದ
ಇನ್ನು ಈ ಘಟನೆ ಸಂಬಂಧ ಗುಂಬಜ್ ತೆರವು ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಮಸೀದಿ ಬಸ್ ಶೆಲ್ಟರ್ ಪೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಮಧ್ಯದಲ್ಲಿ ದೊಡ್ಡ ಗುಂಬಜ್ ಅಕ್ಕಪಕ್ಕ 2 ಚಿಕ್ಕ ಗುಂಬಜ್ ಇದೆ. ಹೀಗೆ ಇದ್ದರೆ ಅದು ಮಸೀದಿನೆ, ಅದನ್ನು ತೆರವು ಮಾಡಿಸುವೆ ಎಂದಿದ್ದೆ. ಅದರಂತೆ ನಾನು ನಡೆದುಕೊಂಡಿದ್ದೇನೆ. ಕಾಲಾವಕಾಶ ಕೋರಿ ಮಾತಿನಂತೆ ನಡೆದುಕೊಂಡ ಡಿಸಿಗೆ ಧನ್ಯವಾದಗಳು. ಜನಾಭಿಪ್ರಾಯಕ್ಕೆ ತಲೆಬಾಗಿದ ಶಾಸಕ ರಾಮದಾಸ್ಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು. pic.twitter.com/9b1wPLULJ4
— Pratap Simha (@mepratap) November 27, 2022
ಮತ್ತೊಂದೆಡೆ ತೆರವುಗೊಳಿಸಿದ್ದ ಡೂಮ್ ಅವಶೇಷಗಳು ಮೋರಿಯಲ್ಲಿ ಪತ್ತೆಯಾಗಿವೆ. ಕೆಲಸಗಾರರು ಬಸ್ ಶೆಲ್ಟರ್ ಪಕ್ಕದ ಮೋರಿಗೆ ಅವಶೇಷಗಳನ್ನು ಎಸೆದಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:01 am, Sun, 27 November 22