AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

25 ಎಕರೆಯಲ್ಲಿ ನಿರ್ಮಾಣವಾಗಲಿದೆ 6 ಅಂತಸ್ತಿನ, 770 ಕಂಬಗಳ ನೂತನ ಅನುಭವ ಮಂಟಪ

500 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗಲ್ಲಿದ್ದು, ಮಿನಿ ಪಾರ್ಲಿಮೆಂಟ್ ನಿರ್ಮಾಣಕ್ಕಾಗಿ ಒಟ್ಟು 25 ಎಕರೆಗಳಷ್ಟು ಜಾಗ ಮೀಸಲಿಡಲಾಗಿದೆ. ಇದರಲ್ಲಿ 7.5 ಎಕರೆ ವಿಸ್ತೀರ್ಣದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. ಈ ಅನುಭವ ಮಂಟಪ 182 ಅಡಿ ಎತ್ತರ, 2884 ಅಡಿ‌ ಸುತ್ತಳತೆಯನ್ನು ಹೊಂದಿರಲಿದೆ.

25 ಎಕರೆಯಲ್ಲಿ ನಿರ್ಮಾಣವಾಗಲಿದೆ 6 ಅಂತಸ್ತಿನ, 770 ಕಂಬಗಳ ನೂತನ ಅನುಭವ ಮಂಟಪ
ನೂತನ ಅನುಭವ ಮಂಟಪದ ನೀಲ ನಕ್ಷೆ
ಪೃಥ್ವಿಶಂಕರ
|

Updated on:Jan 06, 2021 | 1:37 PM

Share

ಬೀದರ್: ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ಸಂಸತ್​ ಕಟ್ಟಡ (Central Vista) ನಿರ್ಮಾಣಕ್ಕೆ ತಯಾರಿ ನಡೆಯುತ್ತಿರುವ ಘಳಿಗೆಯಲ್ಲೇ ಇಲ್ಲಿ ಶತಮಾನಗಳಷ್ಟು ಹಿಂದೆಯೇ ಸಂಸತ್ತು ಎಂಬುದನ್ನು ಅಳವಡಿಸಿಕೊಂಡಿದ್ದ ಬಸವಕಲ್ಯಾಣದಲ್ಲಿ..  ಬಸವಣ್ಣನವರು 12ನೇ ಶತಮಾನದಲ್ಲಿಯೇ ಸ್ಥಾಪಿಸಿದ್ದ ಹಾಗೂ ಜಗತ್ತಿನ ಮೊದಲ ಪಾರ್ಲಿಮೆಂಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅನುಭವ ಮಂಟಪವನ್ನು ಹೊಸ ಪರಿಕಲ್ಪನೆಯಲ್ಲಿ ಭವ್ಯ ಕಟ್ಟಡದ ರೂಪದಲ್ಲಿ ನಿರ್ಮಿಸಲು ಸಿದ್ಧತೆಗಳು ನಡೆದಿವೆ. ರಾಜ್ಯದ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಇಂದು ಆ ನೂತನ ಅನುಭವ ಮಂಟಪದ ನಿರ್ಮಾಣಕ್ಕಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಭೂಮಿ ಪೂಜೆ ನೇರವೇರಿಸಲಿದ್ದಾರೆ.

ನೂತನ ಅನುಭವ ಮಂಟಪದ ವಿಶೇಷತೆಗಳು.. 500 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗಲ್ಲಿದ್ದು, ಮಿನಿ ಪಾರ್ಲಿಮೆಂಟ್ ನಿರ್ಮಾಣಕ್ಕಾಗಿ ಒಟ್ಟು 25 ಎಕರೆಗಳಷ್ಟು ಜಾಗ ಮೀಸಲಿಡಲಾಗಿದೆ. ಇದರಲ್ಲಿ 7.5 ಎಕರೆ ವಿಸ್ತೀರ್ಣದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. ಈ ಅನುಭವ ಮಂಟಪ 182 ಅಡಿ ಎತ್ತರ, 2884 ಅಡಿ‌ ಸುತ್ತಳತೆಯನ್ನು ಹೊಂದಿರಲಿದೆ.

6 ಅಂತಸ್ತಿನ ಗೋಲಾಕಾರದ ಮಾದರಿಯ ಭವ್ಯವಾದ ಅನುಭವ ಮಂಟಪ ನಿರ್ಮಾಣವಾಗಲಿದೆ. ಈ ಅನುಭವ ಮಂಟಪದಲ್ಲಿ 770 ಕಂಬಗಳನ್ನು ನಿರ್ಮಾಣ ಮಾಡಲಾಗುತ್ತದೆ. 12ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಶರಣ, ಶರಣೆಯರ ಹೆಸರನ್ನು ಕಂಬದಲ್ಲಿ ಕೆತ್ತನೆ ಮಾಡಲಾಗುವುದು. ಒಂದನೆಯ ಅಂತಸ್ತು ಭಕ್ತ ಸ್ಥಳ, ಎರಡನೆಯ ಅಂತಸ್ತು ಮಹೇಶ ಸ್ಥಳ, ಮೂರನೇ ಅಂತಸ್ತು ಪ್ರಸಾದ ಸ್ಥಳ, ನಾಲ್ಕನೆಯ ಅಂತಸ್ತು ಪ್ರಾಣಲಿಂಗ ಸ್ಥಳ, ಐದನೇ ಅಂತಸ್ತು ಶರಣ ಸ್ಥಳ, ಆರನೇ ಅಂತಸ್ತು ಐಕ್ಯ ಸ್ಥಳಗಳಾಗಿ ವಿಂಗಡಣೆ ಮಾಡಲಾಗಿದೆ.

770 ಆಸನಗಳುಳ್ಳ ಸುಸಜ್ಜಿತ ಸಭಾ ಭವನ ಇರಲಿದೆ.. ಹೀಗೆ ಆರು ಅಂತಸ್ತು ಇರುವ ಭವ್ಯವಾದ ಮಿನಿ ಪಾರ್ಲಿಮೆಂಟ್ ನೀಲ ನಕ್ಷೆ ರೆಡಿಯಾಗಿದ್ದು, ಅನುಭವ ಮಂಟಪದ ಕಟ್ಟಡದ ತುದಿಯಲ್ಲಿ ನೂರು ಅಡಿ ವ್ಯಾಸದ ಬೃಹತ್ ಲಿಂಗಾಕಾರದ ಗೋಪುರ ನಿರ್ಮಾಣ ಮಾಡಲಾಗುತ್ತದೆ. ಕಟ್ಟಡದ ನೆಲ ಮಾಳಿಗೆಯಲ್ಲಿ ಸಾವಿರ ಜನರು ಪ್ರಸಾದ ಸ್ವೀಕರಿಸುವ ದಾಸೋಹ ಭವನ ಇರಲಿದೆ.

12 ನೇ ಶತಮಾನದ ಅನುಭವ ಮಂಟಪದ ಪ್ರತಿರೂಪವಾಗಿ 770 ಆಸನಗಳುಳ್ಳ ಸುಸಜ್ಜಿತ ಸಭಾ ಭವನ ಇರಲಿದೆ. ಇದರಲ್ಲಿ 12 ನೇಯ ಶತಮಾನದಲ್ಲಿ ಬಾಳಿ ಬದುಕಿದ ಶರಣ, ಶರಣೆಯರ ಜೀವನ ಚರಿತ್ರೆ, ಅವರ ವೇಶ ಭೂಷಣ ಅವರ ಬದುಕಿನ‌ ಶೈಲಿ ತಿಳಿಸುವ ಚಿತ್ರಣವನ್ನ ಸೃಷ್ಟಿಸಲಾಗುತ್ತದೆ.

ಶಂಕುಸ್ಥಾಪನೆಯಾದ ಎರಡರಿಂದ ಮೂರು ವರ್ಷದಲ್ಲಿ ಅನುಭವ ಮಂಟಪದ ‌ನಿರ್ಮಾಣ ಗುರಿ ಹೊಂದಲಾಗಿದೆ. 2017 ರಲ್ಲಿ ಗೋ. ರು. ಚನ್ನಬಸಪ್ಪ ಅವರ ನೇತೃತ್ವದ ತಜ್ಞರ ತಂಡ ನೀಡಿರುವ ವರದಿ ಅನ್ವಯ ಅನುಭವ ಮಂಟಪ ನಿರ್ಮಾಣವಾಗಲಿದೆ. ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿ ಅನುಭವ ಮಂಟಪ ಇರಲಿದೆ. ಸಿಮೆಂಟ್ ಮತ್ತು ಕಲ್ಲುಗಳನ್ನು ಬಳಸಿ ನೂತನ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತದೆ.

ಇಂದು ಸಿಎಂ ಯಡಿಯೂರಪ್ಪ ಬೀದರ್, ಯಾದಗಿರಿ ಜಿಲ್ಲಾ ಪ್ರವಾಸ.. ಹೊಸ ಹೊಸ ಕಾಮಗಾರಿಗೆ ಚಾಲನೆ

Published On - 1:29 pm, Wed, 6 January 21

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ