ರಾಜ್ಯದ ಏಕೈಕ ಸೂರ್ಯ ನಾರಾಯಣಸ್ವಾಮಿ ದೇವಸ್ಥಾನ ಎಲ್ಲಿದೆ ಗೊತ್ತಾ..?

ವಿಜಯ ನಗರ ಸಾಮ್ರಾಜ್ಯದಲ್ಲಿ ಭಾಸ್ಕರ ಕ್ಷೇತ್ರ ಎಂದೇ ಹೆಸರಾಗಿದ್ದ ಸ್ಥಳ ಜಿಲ್ಲೆಯ ಮುಳಬಾಗಿಲು. ಇಂದಿಗೂ ಸಾಂಸ್ಕೃತಿಕ ವೈಭವನ್ನು ಹೊಂದಿರುವ ಮುಳಬಾಗಿಲಿನ ಕುಂಬಾರಪಾಳ್ಯದಲ್ಲಿರುವ ಸೂರ್ಯನಾರಾಯಣಸ್ವಾಮಿ ದೇವಾಲಯ ರಾಜ್ಯದಲ್ಲಿಯೇ ಏಕೈಕ ಸೂರ್ಯ ದೇವಾಲಯ ಎಂಬ ಖ್ಯಾತಿ ಗಳಿಸಿದೆ.

ರಾಜ್ಯದ ಏಕೈಕ ಸೂರ್ಯ ನಾರಾಯಣಸ್ವಾಮಿ ದೇವಸ್ಥಾನ ಎಲ್ಲಿದೆ ಗೊತ್ತಾ..?
ಸೂರ್ಯ ನಾರಾಯಣಸ್ವಾಮಿ ದೇಗುಲದ ಒಂದು ದೃಶ್ಯ
Follow us
guruganesh bhat
|

Updated on:Dec 21, 2020 | 12:19 PM

ಕೋಲಾರ: ವಿಜಯನಗರ ಸಾಮ್ರಾಜ್ಯದಲ್ಲಿ ಭಾಸ್ಕರ ಕ್ಷೇತ್ರ ಎಂದೇ ಹೆಸರಾಗಿದ್ದ ಸ್ಥಳ ಜಿಲ್ಲೆಯ ಮುಳಬಾಗಿಲು. ಇಂದಿಗೂ ಸಾಂಸ್ಕೃತಿಕ ವೈಭವನ್ನು ಹೊಂದಿರುವ ಮುಳಬಾಗಿಲಿನ ಕುಂಬಾರಪಾಳ್ಯದಲ್ಲಿರುವ ಸೂರ್ಯನಾರಾಯಣಸ್ವಾಮಿ ದೇವಾಲಯ ರಾಜ್ಯದಲ್ಲಿಯೇ ಏಕೈಕ ಸುರ್ಯ ದೇವಾಲಯ ಎಂಬ ಖ್ಯಾತಿ ಗಳಿಸಿದೆ.

ಪ್ರತಿಷ್ಠಾಪಿಸಿದವರಾರು? ಈ ಪ್ರದೇಶದಲ್ಲಿ ನೂರಾರು ವರ್ಷಗಳ ಹಿಂದೆ ಯಾಜ್ಞವಲ್ಕರ ಆಶ್ರಮವಿತ್ತು ಎನ್ನುತ್ತದೆ ಸ್ಥಳೀಯ ಐತಿಹ್ಯ. ಶುಕ್ಲಯಜುರ್ವೇದಿಗಳು ಸೂರ್ಯನ ಆರಾಧನೆ ಮಾಡುತ್ತಿದ್ದರು. ಅಷ್ಟಗ್ರಹಕೂಟವಾದಾಗ ಶುಕ್ಲಯಜುರ್ವೇದಿಗಳು ಮುಳಬಾಗಿಲು ಹರಪ್ಪನಾಯಕನಹಳ್ಳಿ ಬಿಸ್ಸೇಗೌಡರ ವಂಶಸ್ಥರು ಸಹಾಯ ಪಡೆದು ಸೂರ್ಯ ದೇವಾಲಯವನ್ನು ಸ್ಥಾಪನೆ ಮಾಡಿದರು ಎಂಬ ಪ್ರತೀತಿ ಇದೆ.

ಮುಳಬಾಗಿಲಿನ ಸೂರ್ಯ ನಾರಾಯಣಸ್ವಾಮಿ

ಪ್ರಮುಖವಾಗಿ ಸೂರ್ಯದೇವರ ಆರಾಧನೆಯಿಂದ ಉಷ್ಣಾಂಶ ಕಡಿಮೆಯಾಗುತ್ತದೆ. ತೇಜಸ್ಸು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಮಕ್ಕಳು, ಮದುವೆಯಾಗಿ ಮಕ್ಕಳಾಗದವರು, ವ್ಯವಸಾಯದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ರೈತರು, ಬೋರ್​ವೆಲ್​ ಹಾಕುವ ಮುನ್ನ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.

ಯಾವುದೇ ಕಾಯಿಲೆಗಳಿದ್ದರೂ ಈ ಕ್ಷೇತ್ರದಲ್ಲಿ ಭಾನುವಾರ ಆದಿತ್ಯಹೃದಯ ಪಠನೆ ಮಾಡಿದರೆ ಭಕ್ತರ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ, ಪ್ರತಿ ಭಾನುವಾರ ಸಾವಿರಾರು ಭಕ್ತರು ಸೂರ್ಯದೇವನ ಆರಾಧನೆ ಮಾಡಿ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಅಲ್ಲದೇ, ಧರ್ಮ ಬೇಧವಿಲ್ಲದೇ ಎಲ್ಲಾ ಧರ್ಮದವರೂ ಹರಕೆ ಸಲ್ಲಿಸುತ್ತಾರೆ. ಈ ದೇವಾಲಯಕ್ಕೆ ಸಾಮಾನ್ಯ ಭಕ್ತರಂತೆ ಬಂದು ತಮ್ಮ ಹರಕೆಯನ್ನು ಈಡೇರಿಸಿಕೊಳ್ಳುತ್ತಾರೆ ಅನ್ನೋದು.

ವಿಶೇಷ ಪೂಜೆಗಳೂ ನಡೆಯುತ್ತವೆ.. ಪ್ರತಿ ಭಾನುವಾರವೂ ಈ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯುತ್ತದೆ. ಜೊತೆಗೆ ರಥಸಪ್ತಮಿಯಂದು ಸೂರ್ಯೋಪಾಸನೆ, ಮಾರ್ತಾಂಡ ಹೋಮ ಸೇರಿದಂತೆ ರಥೋತ್ಸವ ನಡೆಯುತ್ತದೆ. ಯಾಜ್ಞವಲ್ಕರ ಜಯಂತಿ, ಸೂರ್ಯ ಜಯಂತಿ, ನವರಾತ್ರಿ ಉತ್ಸವ, ಧನುರ್ಮಾಸಗಳಲ್ಲಿ ಸೂರ್ಯ ನಾರಾಯಣಸ್ವಾಮಿಗೆ ವಿಶೇಷ ಪೂಜೆಗಳು ನಡೆಯುತ್ತವೆ.

ದೇಗುಲದ ಹೊರವಲಯದಿಂದ ಕಾಣುವ ವಿಹಂಗಮ ನೋಟ

Published On - 7:20 am, Sat, 19 December 20