ಕರ್ನಾಟಕದಲ್ಲಿ 4 ವರ್ಷಗಳಲ್ಲಿ 1 ಲಕ್ಷಕ್ಕೂ ಅಧಿಕ ಮರಗಳ ನಾಶ; ರಸ್ತೆ ನಿರ್ಮಾಣಕ್ಕಾಗಿ ಉರುಳಿದ ಹಸಿರು ಮರಗಳು
ಒಂದೆಡೆ ಪರಿಸರ ರಕ್ಷಣೆ, ಸಸಿ ನೆಡಿ ಎಂಬ ಘೋಷಣೆ ಕೇಳುತ್ತಲೇ ಇರುತ್ತದೆ, ಮತ್ತೊಂದೆಡೆ ಮರ ಕಡಿಯುವ ಶಬ್ದವೂ ಕಿವಿಗೆ ಅಪ್ಪಳಿಸುತ್ತಿರುತ್ತದೆ. ಸೌಕರ್ಯ ಹೆಚ್ಚಿಸಲು ಮರಗಳ ನಾಶ ಮಾಡದೆ ಬೇರೆ ದಾರಿಯೇ ಇಲ್ಲ ಎಂಬಂತಾಗಿದೆ. ಹಾಗೇ ಕರ್ನಾಟಕದಲ್ಲಿ 2018-2021ರವರೆಗೆ ಸುಮಾರು 1 ಲಕ್ಷ ಮರಗಳನ್ನು ಕಡಿಯಲಾಗಿದೆ ಎಂದು ಪಿಡಬ್ಲ್ಯೂಡಿ (ಲೋಕೋಪಯೋಗಿ ಇಲಾಖೆ) ತಿಳಿಸಿದೆ. ಇವೆಲ್ಲ ಮರಗಳನ್ನು ಬರೀ ರಸ್ತೆ, ಹೆದ್ದಾರಿ ನಿರ್ಮಾಣಗಳಿಗಾಗಿಯೇ ಕಡಿಯಲಾಗಿದ್ದು, ಬಹುತೇಕ ಹಸಿರು ಮರಗಳೇ (ಒಣಮರಗಳಲ್ಲ) ಆಗಿವೆ. ಅದರಲ್ಲಿ 56,629 ಮರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ […]

ಒಂದೆಡೆ ಪರಿಸರ ರಕ್ಷಣೆ, ಸಸಿ ನೆಡಿ ಎಂಬ ಘೋಷಣೆ ಕೇಳುತ್ತಲೇ ಇರುತ್ತದೆ, ಮತ್ತೊಂದೆಡೆ ಮರ ಕಡಿಯುವ ಶಬ್ದವೂ ಕಿವಿಗೆ ಅಪ್ಪಳಿಸುತ್ತಿರುತ್ತದೆ. ಸೌಕರ್ಯ ಹೆಚ್ಚಿಸಲು ಮರಗಳ ನಾಶ ಮಾಡದೆ ಬೇರೆ ದಾರಿಯೇ ಇಲ್ಲ ಎಂಬಂತಾಗಿದೆ. ಹಾಗೇ ಕರ್ನಾಟಕದಲ್ಲಿ 2018-2021ರವರೆಗೆ ಸುಮಾರು 1 ಲಕ್ಷ ಮರಗಳನ್ನು ಕಡಿಯಲಾಗಿದೆ ಎಂದು ಪಿಡಬ್ಲ್ಯೂಡಿ (ಲೋಕೋಪಯೋಗಿ ಇಲಾಖೆ) ತಿಳಿಸಿದೆ. ಇವೆಲ್ಲ ಮರಗಳನ್ನು ಬರೀ ರಸ್ತೆ, ಹೆದ್ದಾರಿ ನಿರ್ಮಾಣಗಳಿಗಾಗಿಯೇ ಕಡಿಯಲಾಗಿದ್ದು, ಬಹುತೇಕ ಹಸಿರು ಮರಗಳೇ (ಒಣಮರಗಳಲ್ಲ) ಆಗಿವೆ. ಅದರಲ್ಲಿ 56,629 ಮರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳಿಗಾಗಿ ಕತ್ತರಿಸಲಾಗಿದೆ (ರಾಷ್ಟ್ರೀಯ ಹೆದ್ದಾರಿ ನಿರ್ಮಾಣ). 2018-2019ರ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯ ಭಾಗವಾದ ಬೆಂಗಳೂರು-ನಿಡಘಟ್ಟ ಯೋಜನೆಗಾಗಿ ಕತ್ತರಿಸಲಾಗಿದೆ ಎಂದು ಪಿಡಬ್ಲ್ಯೂಡಿ ಮಾಹಿತಿ ನೀಡಿದೆ.
ಕಳೆದ ನಾಲ್ಕು ವರ್ಷಗಳಲ್ಲಿ 1,03, 538 ಮರಗಳನ್ನು ಕಡಿಯಲಾಗಿದ್ದರೂ, ಅದಕ್ಕೆ ಬದಲಾಗಿ 5.3 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹಾಗಿದ್ದಾಗ್ಯೂ ನೆಟ್ಟ ಸಸಿಗಳೆಲ್ಲ ಬದುಕಿಲ್ಲ, ಶೇ. 60-70ರಷ್ಟು ಸಸಿಗಳು ಬದುಕಿವೆ. ನೆಟ್ಟು 10 ವರ್ಷದವರೆಗೆ ಅರಣ್ಯ ಇಲಾಖೆ ಸಸಿಗಳ ಕಾಳಜಿ ಮಾಡಲಿದೆ. ಅಷ್ಟಾದರೂ ರಸ್ತೆ ಬದಿಗಳಲ್ಲಿ ನೆಡಲಾಗುವ ಸಸಿಗಳು ಹಲವು ಕಾರಣಕ್ಕೆ ಒಣಗಿ, ಸತ್ತು ಹೋಗುತ್ತವೆ. ಅದರಲ್ಲೂ ಉತ್ತರ ಕರ್ನಾಟಕದಂಥ ಒಣಹವೆಯ ಪ್ರದೇಶಗಳಲ್ಲಿ ಸಸಿಗಳ ನಿರ್ವಹಣೆ ತುಂಬ ಕಷ್ಟ ಎಂದೂ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ವಿವಿಧೆಡೆ ರಸ್ತೆ ಅಗಲೀಕರಣ, ನಿರ್ಮಾಣದಂಥ ಯೋಜನೆಗಳು ಸದಾ ಅನುಷ್ಠಾನದಲ್ಲಿ ಇರುತ್ತವೆ. ಅದಕ್ಕೆ ಅನಿವಾರ್ಯವಾಗಿ ಮರಗಳನ್ನು ಕಡಿದುಕೊಳ್ಳಬೇಕು. ಹೀಗೆ ಮರ ಕಡಿಯುವವರಿಗೆ ಒಂದು ನಿಯಮವಿದೆ. ಒಂದು ಮರ ಕಡಿದವರು 10 ಗಿಡಗಳನ್ನು ನೆಡುವುದು ಕಡ್ಡಾಯ. ಆದರೆ ಅದೆಷ್ಟು ಮಂದಿ ನೆಡುತ್ತಾರೋ? ಅದರ ಆರೈಕೆ ಹೇಗೆ ಆಗುತ್ತದೆ ಎಂಬಿತ್ಯಾದಿಗಳು ಪಕ್ಕಾ ಲೆಕ್ಕಕ್ಕೆ ಸಿಗದೆ ಇರುವಂಥವು.
ಇದನ್ನೂ ಓದಿ:ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಇಲ್ಲಿದೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವ ಸುಲಭ ವಿಧಾನ