ಕೆಲಸಕ್ಕೆ ಹಾಜರ್, ಗೋಡೆ ಮೇಲೆ ಸಹಿ ಹಾಕಿ PDO ಋಜುವಾತು
ದಾವಣಗೆರೆ: ಗ್ರಾಮ ಪಂಚಾಯಿತಿ ಗೋಡೆ ಮೇಲೆ ತಾನು ಸೇವೆಗೆ ಹಾಜರಾಗಿದ್ದೇನೆ ಎಂದು ಗೋಡೆ ಮೇಲೆ ಬರೆದು ಪಿಡಿಓ ಸಹಿ ಮಾಡಿರುವ ವಿಚಿತ್ರ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಪಿಡಿಓ ಆಗಿರುವ ಕೆ.ಪಿ.ಗಾಯತ್ರಿ ಗೋಡೆ ಮೇಲೆ ಸಹಿ ಮಾಡಿ ಸೇವೆಗೆ ಹಾಜರಾಗಿದ್ದಾರೆ. ಸ್ಥಳೀಯ ಮುಖಂಡರ ತಿಕ್ಕಾಟದಿಂದ ಗಾಯತ್ರಿ ಅವರನ್ನ ಗ್ರಾಮ ಪಂಚಾಯಿತಿ ಒಳಗೆ ಬಿಟ್ಟುಕೊಳ್ಳದಂತೆ ಅಧ್ಯಕ್ಷ ಉಪಾಧ್ಯಕ್ಷರು ಆದೇಶಿಸಿದ್ದರು. ಇದಕ್ಕೆ ಸಂಬಂಧಿಸಿ 27.11.2019 ಸೇವೆಗೆ ಹಾಜರಾಗಲು ಆದೇಶವಾದ್ರು, ಕಛೇರಿಗೆ ಹೋಗಲು ಗ್ರಾಮ […]
ದಾವಣಗೆರೆ: ಗ್ರಾಮ ಪಂಚಾಯಿತಿ ಗೋಡೆ ಮೇಲೆ ತಾನು ಸೇವೆಗೆ ಹಾಜರಾಗಿದ್ದೇನೆ ಎಂದು ಗೋಡೆ ಮೇಲೆ ಬರೆದು ಪಿಡಿಓ ಸಹಿ ಮಾಡಿರುವ ವಿಚಿತ್ರ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಪಿಡಿಓ ಆಗಿರುವ ಕೆ.ಪಿ.ಗಾಯತ್ರಿ ಗೋಡೆ ಮೇಲೆ ಸಹಿ ಮಾಡಿ ಸೇವೆಗೆ ಹಾಜರಾಗಿದ್ದಾರೆ.
ಸ್ಥಳೀಯ ಮುಖಂಡರ ತಿಕ್ಕಾಟದಿಂದ ಗಾಯತ್ರಿ ಅವರನ್ನ ಗ್ರಾಮ ಪಂಚಾಯಿತಿ ಒಳಗೆ ಬಿಟ್ಟುಕೊಳ್ಳದಂತೆ ಅಧ್ಯಕ್ಷ ಉಪಾಧ್ಯಕ್ಷರು ಆದೇಶಿಸಿದ್ದರು. ಇದಕ್ಕೆ ಸಂಬಂಧಿಸಿ 27.11.2019 ಸೇವೆಗೆ ಹಾಜರಾಗಲು ಆದೇಶವಾದ್ರು, ಕಛೇರಿಗೆ ಹೋಗಲು ಗ್ರಾಮ ಪಂಚಾಯಿತಿ ಆಡಳಿತ ವರ್ಗ ಬಿಟ್ಟಿರಲಿಲ್ಲ. ಈಗಾಗಿ ಪೊಲೀಸ್ ಭದ್ರತೆಯಲ್ಲಿ ಗಾಯತ್ರಿ ಕೆಲಸಕ್ಕೆ ಹಾಜರಾಗಿದ್ದಾರೆ. ನನಗೆ ಸರ್ವೀಸ್ ಬುಕ್ ಕೊಟ್ಟಿಲ್ಲ. ಅದಕ್ಕೆ ಗೋಡೆ ಮೊರೆ ಹೋದೆ ಎಂದು ಪಿಡಿಓ ಗಾಯತ್ರಿ ಬರೆದು ಸಹಿಮಾಡಿದ್ದಾರೆ.
Published On - 11:39 am, Fri, 6 December 19