ಡಿಕೆಶಿ ಬಗ್ಗೆ HDK ನಿನ್ನೆ ಸರಿಯಾಗಿಯೇ ಹೇಳಿದ್ದಾರೆ -ಸಚಿವ ಅಶೋಕ್
ಬೆಂಗಳೂರು: R.R.ನಗರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ FIR ದಾಖಲಿಸಿರುವ ವಿಚಾರಕ್ಕೆ ಸಂಬಂಧಿಸಿ ಇದು ರಾಜಕೀಯ ಪ್ರೇರಿತ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಅಧಿಕಾರದಲ್ಲಿದ್ದಾಗ ಡಿಕೆಶಿ ಏನು ಮಾಡಿದ್ದರೆಂದು ಮರೆತಿದ್ದಾರೆ. ಅಧಿಕಾರ ಹೋದ ಬಳಿಕ ಅವರಿಗೆ ಪ್ರಪಂಚವೇ ವಿರುದ್ಧವಾಗಿದೆ ಎಂದು ಡಿಕೆ ಶಿವಕುಮಾರ್ರನ್ನು ಆರ್. ಅಶೋಕ್ ಮಾತಿನಲ್ಲಿ ತಿವಿದಿದ್ದಾರೆ. ಡಿಕೆಶಿಗೆ ಒಂದು ಕಾನೂನು, ನನಗೆ ಒಂದು ಕಾನೂನು ಇರಲ್ಲ. ಎಲ್ಲರಿಗೂ ಒಂದೇ ರೀತಿಯಾದ ಕಾನೂನು ಇರುತ್ತೆ. ಕಾಂಗ್ರೆಸ್‌ನವರ ವಿರುದ್ಧ ಕೇಸ್ […]

ಬೆಂಗಳೂರು: R.R.ನಗರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ FIR ದಾಖಲಿಸಿರುವ ವಿಚಾರಕ್ಕೆ ಸಂಬಂಧಿಸಿ ಇದು ರಾಜಕೀಯ ಪ್ರೇರಿತ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಅಧಿಕಾರದಲ್ಲಿದ್ದಾಗ ಡಿಕೆಶಿ ಏನು ಮಾಡಿದ್ದರೆಂದು ಮರೆತಿದ್ದಾರೆ. ಅಧಿಕಾರ ಹೋದ ಬಳಿಕ ಅವರಿಗೆ ಪ್ರಪಂಚವೇ ವಿರುದ್ಧವಾಗಿದೆ ಎಂದು ಡಿಕೆ ಶಿವಕುಮಾರ್ರನ್ನು ಆರ್. ಅಶೋಕ್ ಮಾತಿನಲ್ಲಿ ತಿವಿದಿದ್ದಾರೆ. ಡಿಕೆಶಿಗೆ ಒಂದು ಕಾನೂನು, ನನಗೆ ಒಂದು ಕಾನೂನು ಇರಲ್ಲ. ಎಲ್ಲರಿಗೂ ಒಂದೇ ರೀತಿಯಾದ ಕಾನೂನು ಇರುತ್ತೆ. ಕಾಂಗ್ರೆಸ್‌ನವರ ವಿರುದ್ಧ ಕೇಸ್ ಹಾಕಿದ್ರೆ ವೋಟ್ ಬೀಳುತ್ತಾ?
ದೇವೇಗೌಡರನ್ನ ಒಂದು ಕಡೆ ಬೈತಾರೆ, ಒಂದು ಕಡೆ ಹೊಗಳ್ತಾರೆ:
ಸರ್ಕಾರವನ್ನ ಬೈದರೆ ನಾಯಕನಾಗ್ತೇನೆಂದು ಡಿಕೆಶಿ ತಿಳಿದಿದ್ದಾರೆ. ಅವರ ಬಗ್ಗೆ H.D.ಕುಮಾರಸ್ವಾಮಿ ನಿನ್ನೆ ಸರಿಯಾಗಿ ಹೇಳಿದ್ದಾರೆ. ಡಿಕೆಶಿಗೆ ಕೊಕ್ಕರೆ-ಮೀನು ಕಥೆ ಸೂಟ್ ಆಗುತ್ತೆ. ದೇವೇಗೌಡರನ್ನ ಒಂದು ಕಡೆ ಬೈತಾರೆ, ಒಂದು ಕಡೆ ಹೊಗಳ್ತಾರೆ. ಹೀಗೆ ಮಾಡುವುದರಿಂದ ಕಾಂಗ್ರೆಸ್‌ಗೆ ಮತಗಳು ಬೀಳುವುದಿಲ್ಲ.
ಅಧಿಕಾರಿಗಳು ಚುನಾವಣಾ ಆಯೋಗದ ಮಾತು ಕೇಳುತ್ತಾರೆ. ನಮ್ಮ ಪರವಾಗಿ ಅಧಿಕಾರಿಗಳು ಕೆಲಸ ಮಾಡಲ್ಲ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನ ತಳ್ಳಿದರೆ ಬಿದ್ದೋಗ್ತಾರೆ. ಅಂತಹವರ ವಿರುದ್ಧ ಕೇಸ್ ಹಾಕಿದ್ದಾರೆಂದು ಡಿಕೆಶಿ ಹೇಳ್ತಾರೆ. ಅವರ ಅಭ್ಯರ್ಥಿ ವಿರುದ್ಧ ಹಾಗೆ ಮಾತನಾಡುವುದು ತಪ್ಪು. ತಮ್ಮ ಅಭ್ಯರ್ಥಿ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ ಎಂದು ಸಚಿವ ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.
Published On - 2:50 pm, Thu, 15 October 20




