AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಂದ ರಕ್ಕಸ ಮಗ: ಕಾರಣ ಕೇಳಿದ್ರೆ ಎಂತವರಿಗೂ ಪಿತ್ತ ನೆತ್ತಿಗೇರುತ್ತೆ!

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಜಕ್ಕೇರು ತಾಂಡಾದಲ್ಲಿ ಹಣಕ್ಕಾಗಿ ರಕ್ಕಸ ಮಗನೋರ್ವ ಹೆತ್ತ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.  ದುಡ್ಡಿಗಾಗಿ ತಾಯಿಯನ್ನು ಪೀಡಿಸಿರುವ ಪುತ್ರ, ವಾಗ್ವಾದದ ನಂತರ ಕಲ್ಲು ಎತ್ತಿಹಾಕಿ ಆಕೆಯ ಹತ್ಯೆಗೈದಿದ್ದಾನೆ. ಈ ಅಮಾನವೀಯ ಕೃತ್ಯಕ್ಕೆ ಇಡೀ ಜಿಲ್ಲೆ ಬೆಚ್ಚಿಬಿದ್ದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಂದ ರಕ್ಕಸ ಮಗ: ಕಾರಣ ಕೇಳಿದ್ರೆ ಎಂತವರಿಗೂ ಪಿತ್ತ ನೆತ್ತಿಗೇರುತ್ತೆ!
ಹತ್ಯೆಯಾದ ಚಂದವ್ವ ಮತ್ತು ಆರೋಪಿ ಕುಮಾರ್​​.
ಭೀಮೇಶ್​​ ಪೂಜಾರ್
| Edited By: |

Updated on: Jan 27, 2026 | 4:03 PM

Share

ರಾಯಚೂರು, ಜನವರಿ 27: ರಕ್ಕಸ ಮಗನೋರ್ವ ಹೆತ್ತ ತಾಯಿಯನ್ನೇ ಅಟ್ಟಾಡಿಸಿ, ಆಕೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಜಕ್ಕೇರು ತಾಂಡಾದಲ್ಲಿ ನಡೆದಿದೆ. ಚಂದವ್ವ (45) ಮೃತ ಮಹಿಳೆಯಾಗಿದ್ದು, ಆಕೆಯ ಮೊದಲ ಪುತ್ರ ಕುಮಾರನೇ ಆರೋಪಿಯಾಗಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಮಗನಿಂದಲೇ ಕೊಲೆಯಾದ ಚಂದವ್ವಗೆ ಒಟ್ಟು 6 ಜನ ಮಕ್ಕಳು. ಆ ಪೈಕಿ 4 ಜನ ಹೆಣ್ಣು ಮಕ್ಕಳು ಮತ್ತು ಓರ್ವ ಮಗನಿಗೆ ಮದುವೆಯಾಗಿದೆ. ಮತ್ತೋರ್ವ ಪುತ್ರ ಸಂತೋಷ್​​ ಎಂಬಾಂತ ಇದೇ ಜಕ್ಕೇರು ತಾಂಡಾದಲ್ಲಿ ಜೆಸಿಬಿ ಆಪರೇಟರ್ ಆಗಿದ್ದರೆ, ಮೊದಲ ಮಗ ಕುಮಾರ್​​ ಹೆಂಡತಿ ಮತ್ತು ಮಕ್ಕಳ ಜೊತೆ ಬೆಂಗಳೂರಲ್ಲಿ ನೆಲೆಸಿದ್ದ. ಆದರೆ ಈತ ಸ್ವಲ್ಪ ಕಿರಿಕ್​​ ಪಾರ್ಟಿಯಾಗಿದ್ದು, ಕುಡಿದು ಗಲಾಟೆ ಮಾಡೋದು ಈತನ ಕೆಟ್ಟ ಚಾಳಿಯಾಗಿ ಮಾರ್ಪಟ್ಟಿತ್ತು. ಈ ಮಧ್ಯೆ ಇತ್ತೀಚೆಗೆ ಬೆಂಗಳೂರಿನಿಂದ ಜಕ್ಕೇರು ತಾಂಡಾ ಗ್ರಾಮಕ್ಕೆ ಬಂದಿದ್ದ ಕುಮಾರ್, ತಾಯಿ ಚಂದವ್ವ ಜೊತೆ ಗಲಾಟೆ ಮಾಡಿದ್ದ. ನಿನ್ನೆ ಸಂಜೆ ತಾಯಿ ಜೊತೆ ವಾಗ್ವಾದವಾಗಿ ಆಕೆಯನ್ನ ಎಳೆದಾಡಿ ಹೊಡೆದಿದ್ದ. ಬಳಿಕ ತಾಯಿ ಕೂದಲು ಹಿಡಿದು ಎಳೆದೊಯ್ದು ಮನೆ ಪಕ್ಕದ ಸೇವಾಲಾಲ್ ಭವನದ ಕಟ್ಟಡದ ಬಳಿ ಬಿಸಾಡಿದ್ದ. ಈ ವೇಳೆ ತಲೆಗೆ ಗಂಭೀರ ಪೆಟ್ಟಾಗಿ ಚಂದವ್ವ ಕುಸಿದಿದ್ದು, ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪಾಪಿ ಮಗ ಕುಮಾರ್ ಹತ್ಯೆಗೈದಿದ್ದಾನೆ.

ಇದನ್ನೂ ಓದಿ: ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​; ಪತಿ, ಸೋದರ ಮಾವ ಸೂಸೈಡ್​​

ಇನ್ನು ಮಗ ಕುಮಾರ್​​, ತಾಯಿ ಚಂದವ್ವಳ ಹತ್ಯೆ ಮಾಡಲು ಕಾರಣ ಕೇಳಿದ್ರೆ ಕೋಪ ನೆತ್ತಿಗೇರತ್ತೆ. ದುಡಿದು ತಾಯಿ ಸಾಕಬೇಕಿದ್ದ ಮಗ ಕುಮಾರ್, 2 ಲಕ್ಷ ಹಣ ಕೊಡು ಎಂದು ಅಮ್ಮನನ್ನೇ ಪೀಡಿಸುತ್ತಿದ್ದ. ಆಕೆ ಕೊಡದೇ ಇದ್ದಾಗ ಮನೆ ಮಾಳಿಗೆಯ ಶೀಟ್ ಒಡೆದು ಹಾಕಿ ದೊಡ್ಡ ಗಲಾಟೆ ಮಾಡಿದ್ದ. ಜಮೀನು ಮಾರಿಯಾದರೂ ಹಣ ಕೊಡು ಎಂದು ಹೇಳಿದ್ದ ಆತ, ನಿನ್ನೆವರೆಗೆ ಆಕೆಗೆ ಡೆಡ್ ಲೈನ್ ಕೂಡ ಕೊಟ್ಟಿದ್ದ. ಆದ್ರೆ ನಿನ್ನೆ ತಾಯಿ ಚಂದವ್ವ, ನಿನ್ನ ತಮ್ಮ ಸಂತೋಷ್ ಮದುವೆ ಮಾಡಬೇಕಿದೆ. ಅದಕ್ಕೇ ಹಣ ಇಲ್ಲ, ನಿಂಗೆಲ್ಲಿ ಕೊಡಲಿ ಎಂದು ಬುದ್ದಿವಾದ ಹೇಳಿದ್ದಳು. ಇದೇ ವಿಚಾರಕ್ಕೆ ಕೆರಳಿದ ಪಾಪಿ ಕುಮಾರ್​, ತಾಯಿಯನ್ನ ಎಳೆದಾಡಿ ಅಟ್ಟಾಡಿಸಿ ರಸ್ತೆಯಲ್ಲೇ ಹೊಡೆದಿದ್ದಾನೆ. ಈ ವೇಳೆ ಬಿಡಿಸಲು ಹೋದ ಸ್ಥಳೀಯರ ಬಳಿ ನಿಮ್ಮನ್ನೂ ಮುಗಿಸ್ತಿನಿ ಅಂತ ಕಿರುಚಾಡಿದ್ದ ಎನ್ನಲಾಗಿದೆ. ಘಟನೆ ಬೆನ್ನಲ್ಲೇ ಮುದಗಲ್ ಪೊಲೀಸರು ಆರೋಪಿ ಕುಮಾರ್​​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಹೆತ್ತ ತಾಯಿಯನ್ನೇ ಕೊಲೆಗೈದಿರೊ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕುಟುಂಬಸ್ಥರು ಕಣ್ಣೀರು ಹಾಕಿ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಭೀಮೇಶ್​​ ಪೂಜಾರ್
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ