ಪ್ರಣವ ಪಂಚಾಕ್ಷರಿ ಗುರುಪೀಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಸತ್ಯಾಸತ್ಯತೆ ಬಿಚ್ಚಿಟ್ಟ ಶ್ರೀಗಳು

ರಾಯಚೂರಿನ ಪ್ರಣವ ಪಂಚಾಕ್ಷರಿ ಗುರುಪೀಠದ ಶಂಭು ಸೋಮನಾಥ ಶಿವಾಚಾರ್ಯಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಈ ಆರೋಪ ಸಂಬಂಧ ಶ್ರೀಗಳು ಸ್ಪಷ್ಟನೆ ನೀಡಿದ್ದು ಆರೋಪವನ್ನು ತಳ್ಳಿ ಹಾಕಿದ್ದಾರೆ. ಆ ಮಹಿಳೆಯನ್ನು ಕೆಲಸದಿಂದ ತೆಗೆದು ನಾವೇ ಕಳುಹಿಸಿ ಕೊಟ್ಟಿದ್ದೀವಿ ಎಂದು ತಿಳಿಸಿದ್ದಾರೆ.

ಪ್ರಣವ ಪಂಚಾಕ್ಷರಿ ಗುರುಪೀಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಸತ್ಯಾಸತ್ಯತೆ ಬಿಚ್ಚಿಟ್ಟ ಶ್ರೀಗಳು
ಶಂಭು ಸೋಮನಾಥ ಶಿವಾಚಾರ್ಯಶ್ರೀಗಳು
Follow us
ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on: Sep 25, 2024 | 10:25 AM

ರಾಯಚೂರು, ಸೆ.25: ಜಿಲ್ಲೆಯ ದೇವದುರ್ಗ ತಾಲೂಕಿನ ಸುಲ್ತಾನ್​ಪುರದಲ್ಲಿರುವ ಪ್ರಣವ ಪಂಚಾಕ್ಷರಿ ಗುರುಪೀಠದ (Pranava Panchakshari Gurupeeth Mutt) ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು ನನ್ನ ವಿರುದ್ಧದ ಆರೋಪ ಸುಳ್ಳು ಎಂದ ಶಂಭು ಸೋಮನಾಥ ಶಿವಾಚಾರ್ಯಶ್ರೀಗಳು ತಿಳಿಸಿದ್ದಾರೆ. ಸಂತ್ರಸ್ತೆಗೆ ಒತ್ತಡ ಹಾಕಿ 10 ಲಕ್ಷ ನೀಡಿ ಸೆಟ್ಲ್​ಮೆಂಟ್ ಮಾಡಿರುವ ಆರೋಪವೂ ಸುಳ್ಳು. ಆ ಮಹಿಳೆಯನ್ನು ನಾವೇ ಕೆಲಸದಿಂದ ತೆಗೆದು ಕಳಿಸಿದ್ದೇವೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪ್ರಣವ ಪಂಚಾಕ್ಷರಿ ಗುರುಪೀಠದ ಶಂಭು ಸೋಮನಾಥ ಶಿವಾಚಾರ್ಯಶ್ರೀ ತಮ್ಮ ಮಠದ ಸೇವೆಗೆ ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೂಲತಃ ಆಂಧ್ರಪ್ರದೇಶ ಮೂಲದವರಾದ ಸಂತ್ರಸ್ತ ಮಹಿಳೆ ಕಳೆದ 6 ತಿಂಗಳಿಂದ ಅಪ್ರಾಪ್ತ ಪುತ್ರಿ ಜೊತೆ ಮಠದಲ್ಲೇ ವಾಸ್ತವ್ಯ ಹೂಡಿದ್ದರು ಅನ್ನೋ ಮಾಹಿತಿ ಸಿಕ್ಕಿದೆ. ದೌಜನ್ಯದ ಬಳಿಕ ಸ್ವಾಮೀಜಿ ವಿರುದ್ಧ ದೂರು ನೀಡಲು‌ ಸಂತ್ರಸ್ತೆ ಠಾಣೆಗಳಿಗೆ ಅಲೆದಾಡಿದ್ದಾರೆ. ಠಾಣೆಯ ವಿಜಿಟರ್ ರಿಜಿಸ್ಟರ್ ಬುಕ್​​ನಲ್ಲಿ ಸಂತ್ರಸ್ತ ಮಹಿಳೆಯ ಹೆಸರು, ವಿಳಾಸ ದಾಖಲಾಗಿದೆ. ಆದರೆ ಈಗ ಎಲ್ಲೂ ಕಾಣಿಸಿಕೊಳ್ಳದೆ ಮಗಳ ಜೊತೆ ಮಹಿಳೆ ತೆರಳಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಗಂಡ ಹೆಂಡತಿ ನಡುವಿನ ಗಲಾಟೆಗೆ‌ 5 ವರ್ಷದ ಮಗಳು ಬಲಿ

ಇನ್ನು ಈ ಘಟನೆ ಸಂಬಂಧ ಶ್ರೀ ಶಂಭುಸೋಮನಾಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪಗಳೆಲ್ಲಾ ನಿರಾಧಾರ. ಆ ಮಹಿಳೆ ಅನುಷ್ಠಾನದಲ್ಲಿರೋವಾಗ ಮಠದಲ್ಲಿ ಸೇವೆ ಮಾಡಲು ಬರ್ತಿನಿ ಅಂದ್ರು. ಆ ಮಹಿಳೆ ಮಠದ ಗೋಶಾಲೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಮಠದಲ್ಲಿ ನಮ್ಮ ಭಕ್ತರಿಗೂ ಮತ್ತೆ ಅವರಿಗೂ ಸ್ವಲ್ಪ ಜಗಳ ಆಗಿತ್ತು. ನೀವು ಇಲ್ಲಿರೋದು ಬೇಡವೆಂದು ನಾವೇ ಹೇಳಿ ಕಳುಹಿಸಿ ಕೊಟ್ಟಿದ್ದೀವಿ. ಈ ಬಗ್ಗೆ ಸಿಟ್ಟಾಗಿ ಪೊಲೀಸ್ ಠಾಣೆ ಹೋಗಿರುವ ವಿಚಾರ ಕೂಡ ಗೊತ್ತಾಯಿತು. ಕರೆದು ಬುದ್ದಿಮಾತು ಹೇಳಿ ಸಹ ಕಳುಹಿಸಿ ಕೊಟ್ಟಿದ್ದೀವಿ. ಅದನ್ನ ತಪ್ಪು ಕಲ್ಪನೆ ಮಾಡಿಕೊಂಡು ಅಪಪ್ರಚಾರ ಮಾಡುವುದು ಲಕ್ಷಣವಲ್ಲ. ಸಂತ್ರಸ್ತೆಗೆ ಒತ್ತಡ ತಂದು‌ 10 ಲಕ್ಷ ಹಣ ನೀಡಿ ಸೆಟಲ್ ಮೆಂಟ್ ಮಾಡಿರೊ ಆರೋಪ ಸುಳ್ಳು ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ