ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರ ಸಾವು ಪ್ರಕರಣ: ವಾಟರ್ ಟೆಸ್ಟಿಂಗ್ ರಿಪೋರ್ಟ್​ನಲ್ಲಿ ಸ್ಫೋಟಕ ಸತ್ಯ ಬಯಲು

ಪರೀಕ್ಷೆ ವೇಳೆ ಒಟ್ಟು 24 ಮಾದರಿಗಳಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ದೃಢಪಟ್ಟಿದೆ. ಪ್ರಾಥಮಿಕ ಹಂತದಲ್ಲೇ ಸಮಸ್ಯೆ ಆಗಿರುವ ಬಗ್ಗೆ ರಿಪೋರ್ಟ್​ನಲ್ಲಿ ಉಲ್ಲೇಖವಾಗಿದೆ.

ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರ ಸಾವು ಪ್ರಕರಣ: ವಾಟರ್ ಟೆಸ್ಟಿಂಗ್ ರಿಪೋರ್ಟ್​ನಲ್ಲಿ ಸ್ಫೋಟಕ ಸತ್ಯ ಬಯಲು
ಕಲುಷಿತ ನೀರು ಕುಡಿದು ಮಗು ಅಸ್ವಸ್ಥಗೊಂಡಿತ್ತು
Follow us
TV9 Web
| Updated By: sandhya thejappa

Updated on:Jun 07, 2022 | 9:44 AM

ರಾಯಚೂರು: ಕಲುಷಿತ ನೀರು (Contaminated water) ಕುಡಿದು ಮೂವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ವಾಟರ್ ಟೆಸ್ಟಿಂಗ್ ರಿಪೋರ್ಟ್ನಲ್ಲಿ (Testing Reoprt) ಸ್ಫೋಟಕ ಸತ್ಯ ಬಯಲಾಗಿದೆ. ರಾಂಪುರ ನೀರು ಶುದ್ಧೀಕರಣ ಘಟಕ ಸೇರಿ ತಜ್ಞರು ಸುಮಾರು 110 ಕಡೆ ಮಾದರಿಗಳನ್ನ ಕಲೆ ಹಾಕಿ ಪರೀಕ್ಷೆ ಮಾಡಿದ್ದರು. ಪರೀಕ್ಷೆ ವೇಳೆ ಒಟ್ಟು 24 ಮಾದರಿಗಳಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ದೃಢಪಟ್ಟಿದೆ. ಪ್ರಾಥಮಿಕ ಹಂತದಲ್ಲೇ ಸಮಸ್ಯೆ ಆಗಿರುವ ಬಗ್ಗೆ ರಿಪೋರ್ಟ್​ನಲ್ಲಿ ಉಲ್ಲೇಖವಾಗಿದೆ. ಬಲ್ಕ್ ವಾಟರ್ ಸಪ್ಲೈ ಹಂತದಲ್ಲೇ ನೀರಿನ ಸಮಸ್ಯೆ ಎದುರಾಗಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ಟೆಸ್ಟಿಂಗ್ ರಿಪೋರ್ಟ್​ ಬಂದ ಬೆನ್ನಲ್ಲೆ ನಗರದಾದ್ಯಂತ ನೀರು ಪರೀಕ್ಷೆ ಮಾಡಲು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಸೂಚನೆ ನೀಡಿದ್ದಾರೆ. ಡಿಎಚ್ಓ ಮೂಲಕ 1,000 ವಾಟರ್ ಸ್ಯಾಂಪಲ್ಸ್ ಪಡೆಯಲು ಸೂಚನೆ ನೀಡಲಾಗಿದೆ. ಡಿಸ್ಟ್ರಿಬ್ಯುಶನ್ ಪಾಯಿಂಟ್, ಬಲ್ಕ್ ಸಪ್ಲೈ, ಫಿಲ್ಟರೇಶನ್ ಪಾಯಿಂಟ್ ಸೇರಿ ವಿವಿಧ ಹಂತಗಳಲ್ಲಿ ವಾಟರ್ ಸ್ಯಾಂಪಲ್ಸ್ ಪಡೆಯಲು ಸೂಚಿಸಿದ್ದಾರೆ. ಸುಮಾರು 16 ವರ್ಷಗಳಿಂದ ರಾಂಪುರ ನೀರು ಶುದ್ಧೀಕರಣ ಘಟಕವನ್ನು ನಿರ್ವಹಣೆ ಮಾಡುತ್ತಿಲ್ಲ . ಹೀಗಾಗಿ ಹೂಳು ತುಂಬಿರುವ‌ ರೀತಿ ಕೆಸರು ತುಂಬಿಕೊಂಡಿದೆ. 15 ದಿನಗಳಿಂದ ಹರಸಾಹಸ ಪಟ್ಟರು ಶುದ್ಧೀಕರಣ ಕಾರ್ಯ ಮುಗಿದಿಲ್ಲ.

ಇದನ್ನೂ ಓದಿ: Joe Root: ಅನುಮಾನ ಮೂಡಿಸಿದ ಜೋ ರೂಟ್ ಬ್ಯಾಟ್: ಯಾವುದೇ ಆಧಾರವಿಲ್ಲದೆ ಮೈದಾನದಲ್ಲಿ ನಿಂತಿದ್ದೇಗೆ?

ಇದನ್ನೂ ಓದಿ
Image
Boris Johnson: ವಿಶ್ವಾಸ ಮತ ಯಾಚನೆಯಲ್ಲಿ ಭರ್ಜರಿ ಗೆಲುವು; ಇಂಗ್ಲೆಂಡ್ ಪ್ರಧಾನಿ ಪಟ್ಟ ಉಳಿಸಿಕೊಂಡ ಬೋರಿಸ್ ಜಾನ್ಸನ್
Image
Joe Root: ಅನುಮಾನ ಮೂಡಿಸಿದ ಜೋ ರೂಟ್ ಬ್ಯಾಟ್: ಯಾವುದೇ ಆಧಾರವಿಲ್ಲದೆ ಮೈದಾನದಲ್ಲಿ ನಿಂತಿದ್ದೇಗೆ?
Image
ಗದಗ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ; ಹೊರಗುತ್ತಿಗೆ ನೌಕರರನ್ನು ಮುಂದುವರಿಸಲು ಲಂಚಕ್ಕೆ ಬೇಡಿಕೆ ಇಟ್ಟ ಗದಗ ಡಿಹೆಚ್ಒ ಡಾ.ಜಗದೀಶ್ ನುಚ್ಚಿನ್
Image
ECIL Recruitment 2022: 10ನೇ ತರಗತಿ ಪಾಸಾದವರಿಗೆ ಇಸಿಐಎಲ್​ನಲ್ಲಿದೆ ಉದ್ಯೋಗಾವಕಾಶ

ನಗರದ ಇಂದಿರಾನಗರದಲ್ಲಿ ಮೇ 31 ಕ್ಕೆ ಕಲುಷಿತ ನೀರು ಕುಡಿದು ಸುಮಾರು 60ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ರಾಯಚೂರು ನಗರಸಭೆ ಸರಬರಾಜು ಮಾಡಿದ್ದ ನೀರು ಕುಡಿದು ಮೂವರು ಸಾವನ್ನಪ್ಪಿದ್ದರು.

ನಗರಸಭೆ ವಿರುದ್ಧ ಕಿಡಿ: ಕುಡಿಯಲು ಹೊಲಸು ನೀರು ಬಿಡುತ್ತಾರೆ. ಎರಡು ದಿನ ಆದ್ರೆ ಹುಳುಗಳು ಆಗ್ತವೆ. ಹುಡುಗರು,ದೊಡ್ಡೋರಿಗೆ ಇದೇ ರೀತಿ ಸಮಸ್ಯೆ ಆಗ್ತಿದೆ. ವಾಂತಿಬೇಧಿ ಹೆಚ್ಚಾದ ಕಾರಣ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದಿವಿ. ಫುಲ್ ಗಲೀಜ್ ನೀರು ಬರುತ್ತವೆ. ಇವತ್ತಿನ ನೀರು ನಾಳೆ‌ ನೋಡಿದ್ರೆ ಹುಳು ಆಡ್ತಿವೆ. ನೀರು ಕುಡಿದ್ರೆ ಒಳ್ಳೆಯದ್ದು ಅಂತ ವೈದ್ಯರು ಹೇಳ್ತಾರೆ.  ಆದ್ರೆ ನಮ್ಮಲ್ಲಿ ಹೊಸಲು ನೀರು ಬರುತ್ತೆ. ಅದನ್ನು ನೋಡಿದರೆ ಭಯ ಆಗುತ್ತೆ ಎಂದು ಇಂದಿರಾನಗರ ನಿವಾಸಿ ಜಮುನಾ ನಗರಸಭೆ ವಿರುದ್ಧ ಕಿಡಿಕಾರಿದ್ದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:32 am, Tue, 7 June 22

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ