AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Boris Johnson: ವಿಶ್ವಾಸ ಮತ ಯಾಚನೆಯಲ್ಲಿ ಭರ್ಜರಿ ಗೆಲುವು; ಇಂಗ್ಲೆಂಡ್ ಪ್ರಧಾನಿ ಪಟ್ಟ ಉಳಿಸಿಕೊಂಡ ಬೋರಿಸ್ ಜಾನ್ಸನ್

ಸಂಸತ್‌ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಬೋರಿಸ್ ಜಾನ್ಸನ್ 211 ಮತಗಳನ್ನು ಗಳಿಸಿದ್ದಾರೆ. ಆದರೆ, ಅವರದ್ದೇ ಪಕ್ಷದ (ಕನ್ಸರ್‌ವೇಟಿವ್‌ ಪಾರ್ಟಿ) 148 ಸಂಸದರು ಬೋರಿಸ್‌ ಜಾನ್ಸನ್ ಅವರ ವಿರುದ್ಧ ಮತ ಚಲಾಯಿಸಿದ್ದಾರೆ.

Boris Johnson: ವಿಶ್ವಾಸ ಮತ ಯಾಚನೆಯಲ್ಲಿ ಭರ್ಜರಿ ಗೆಲುವು; ಇಂಗ್ಲೆಂಡ್ ಪ್ರಧಾನಿ ಪಟ್ಟ ಉಳಿಸಿಕೊಂಡ ಬೋರಿಸ್ ಜಾನ್ಸನ್
ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್Image Credit source: Vox
TV9 Web
| Updated By: ಸುಷ್ಮಾ ಚಕ್ರೆ|

Updated on:Jun 07, 2022 | 9:24 AM

Share

ಲಂಡನ್: ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ಮಂಡಿಸಲಾದ ಅವಿಶ್ವಾಸ ನಿರ್ಣಯದಲ್ಲಿ (No Confidence Vote) ವಿಶ್ವಾಸಮತ ಗೆದ್ದು ತಮ್ಮ ಪ್ರಧಾನಿ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಬೋರಿಸ್ ಜಾನ್ಸನ್ (Boris Johnson) 359 ಶಾಸಕರ ಪೈಕಿ 211 ಮತಗಳ ಬೆಂಬಲನ್ನು ಗೆದ್ದರು. ಈ ಮೂಲಕ ಅವರು ಸಂಸತ್​ನ ಶೇ. 59ರಷ್ಟು ಶಾಸಕರ ಬೆಂಬಲವನ್ನು ಪಡೆದರು. ಸಂಸತ್‌ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಜಾನ್ಸನ್ 211 ಮತಗಳನ್ನು ಗಳಿಸಿದರು. ಆದರೆ, ಅವರದ್ದೇ ಪಕ್ಷದ (ಕನ್ಸರ್‌ವೇಟಿವ್‌ ಪಾರ್ಟಿ) 148 ಮಂದಿ ಸಂಸದರು ಬೋರಿಸ್‌ ಜಾನ್ಸನ್ ಅವರ ವಿರುದ್ಧ ಮತ ಚಲಾಯಿಸಿದ್ದಾರೆ.

ಕೊವಿಡ್‌ ಸಾಂಕ್ರಾಮಿಕದ ವೇಳೆ ಲಾಕ್‌ಡೌನ್‌ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೊವಿಡ್‌ ನಿರ್ವಹಣೆಯಲ್ಲಿ ವಿಫಲರಾಗಿದ್ದು ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್‌ ಜಾನ್ಸನ್ ಅವರ ವಿರುದ್ಧ ಆರೋಪಿಸಿದ್ದರು. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಸೋಮವಾರ ಒಟ್ಟು 359 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 211 ಸಂಸದರು ಹಣದುಬ್ಬರ ಮತ್ತು ಪಾರ್ಟಿಗೇಟ್ ಹಗರಣದಿಂದ ತತ್ತರಿಸಿರುವ ಪಿಎಂ ಜಾನ್ಸನ್ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
Vote Of Confidence: ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ರಿಂದ ಇಂದು ವಿಶ್ವಾಸಮತ ಯಾಚನೆ
Image
ಯಾವ ದೇಶದ ಪ್ರಧಾನಿ ಹೆಚ್ಚು ಓದಿದ್ದು? ವಿವಿಧ ದೇಶಗಳ ಪ್ರಧಾನಿಗಳ ಶೈಕ್ಷಣಿಕ ಅರ್ಹತೆ ಏನು? ಇಲ್ಲಿದೆ ಮಾಹಿತಿ
Image
ನೀರವ್ ಮೋದಿ, ವಿಜಯ್ ಮಲ್ಯ ‌ಗಡೀಪಾರು ವಿಷಯ; ಬ್ರಿಟನ್ ಸರ್ಕಾರ ಹಸ್ತಾಂತರಕ್ಕೆ ಆದೇಶ ನೀಡಿದೆ: ಯುಕೆ ಪ್ರಧಾನಿ
Image
ಬೋರಿಸ್ ಜಾನ್ಸನ್- ನರೇಂದ್ರ ಮೋದಿ ಭೇಟಿ; ಭಾರತಕ್ಕೆ ಯುದ್ಧ ವಿಮಾನ ತಯಾರಿಕೆಗೆ ತರಬೇತಿ ನೀಡಲು ಮುಂದಾದ ಇಂಗ್ಲೆಂಡ್

ಬೋರಿಸ್ ಜಾನ್ಸನ್ ಅವರು ಜೂನ್ 6ರಂದು ಅವಿಶ್ವಾಸ ಮತವನ್ನು ಎದುರಿಸುವ ಮೂಲಕ ತಮ್ಮ ಪ್ರಧಾನಿ ಹುದ್ದೆಯ ಅತ್ಯಂತ ಕಠಿಣ ಪರೀಕ್ಷೆಯನ್ನು ಎದುರಿಸಿದರು. 40ಕ್ಕೂ ಹೆಚ್ಚು ಕನ್ಸರ್ವೇಟಿವ್ ಪಕ್ಷದ ಸಂಸದರು (ಬೋರಿಸ್ ಜಾನ್ಸನ್ ಅವರ ಸ್ವಂತ ಪಕ್ಷದ ಸದಸ್ಯರು) ಮತ್ತು ಅವರ ಸಿಬ್ಬಂದಿ ಕೊವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಪಾರ್ಟಿಗಳನ್ನು ನಡೆಸಿದ ನಂತರ ಪಿಎಂ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: Vote Of Confidence: ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ರಿಂದ ಇಂದು ವಿಶ್ವಾಸಮತ ಯಾಚನೆ

‘ಪಾರ್ಟಿಗೇಟ್’ ಎಂದು ಕರೆಯಲ್ಪಡುವ ಹಗರಣವು ಪಿಎಂ ಜಾನ್ಸನ್ ಅವರ ಭಾರತ ಭೇಟಿಯ ಸಮಯದಲ್ಲಿಯೂ ಅವರ ಮೇಲೆ ಒತ್ತಡವನ್ನು ಹೆಚ್ಚಿಸಿತ್ತು. ಪಾರ್ಟಿಗೇಟ್ ಹಗರಣದ ಬಗ್ಗೆ ಟೀಕೆಗಳು ಮುಂದುವರೆದಂತೆ, ಕನ್ಸರ್ವೇಟಿವ್ ಪಕ್ಷದ 54 ಸಂಸದರು ಅವರ ರಾಜೀನಾಮೆಯನ್ನು ಕೋರಿದ್ದರು. ಹೀಗಾಗಿ, ಬ್ರಿಟನ್ ಪಿಎಂ ಬೋರಿಸ್ ಜಾನ್ಸನ್ ಅವರ ಭವಿಷ್ಯವನ್ನು ನಿರ್ಧರಿಸಲು ವಿಶ್ವಾಸಮತ ಯಾಚನೆ ನಡೆಸಲಾಯಿತು.

ಅವಿಶ್ವಾಸ ಮತದಿಂದ ಪಾರಾಗಲು ಬೋರಿಸ್ ಜಾನ್ಸನ್‌ಗೆ 180 ಕನ್ಸರ್ವೇಟಿವ್ ಸಂಸದರ ಬೆಂಬಲ ಬೇಕಿತ್ತು. ಬ್ರಿಟಿಷ್ ಸಂಸತ್ತು ಹೌಸ್ ಆಫ್ ಕಾಮನ್ಸ್ ಒಟ್ಟು 359 ಸಂಸದರನ್ನು ಹೊಂದಿದೆ. ವಿಶ್ವಾಸ ಮತಯಾಚನೆ ವೇಳೆ ಬೋರಿಸ್ ಜಾನ್ಸನ್ 211 ಶಾಸಕರ ಬೆಂಬಲ ಪಡೆದಿದ್ದಾರೆ.

2019ರಲ್ಲಿ ಚುನಾವಣೆಯಲ್ಲಿ ಭರ್ಜರಿ ವಿಜಯವನ್ನು ಗಳಿಸಿದ ಬೋರಿಸ್ ಜಾನ್ಸನ್, COVID-19 ಕಾರಣದಿಂದಾಗಿ ಬ್ರಿಟನ್ ಕಟ್ಟುನಿಟ್ಟಾದ ಲಾಕ್‌ಡೌನ್‌ಗಳಲ್ಲಿದ್ದಾಗ ಅವರು ಮತ್ತು ಸಿಬ್ಬಂದಿ ತಮ್ಮ ಡೌನಿಂಗ್ ಸ್ಟ್ರೀಟ್ ಕಚೇರಿ ಮತ್ತು ನಿವಾಸದಲ್ಲಿ ಆಲ್ಕೋಹಾಲ್ ಪಾರ್ಟಿಗಳನ್ನು ನಡೆಸಿದ ನಂತರ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 am, Tue, 7 June 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?