ಲಿಂಗಸಗೂರು ಗ್ರಾಮದಲ್ಲಿ ಕರುವಿನ ಮೇಲೆ ಅತ್ಯಾಚಾರ; ಯುವಕ ಅರೆಸ್ಟ್
ಯಾರೂ ಇಲ್ಲದ ವೇಳೆ ಅಮರೇಶ ಎಂಬ ವ್ಯಕ್ತಿಗೆ ಸೇರಿದ್ದ ಆಕಳ ಕರುವಿನ ಕಾಲು ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ.
ರಾಯಚೂರು: ಆಕಳು ಕರುವಿನ ಮೇಲೆ ಯುವಕ ಅತ್ಯಾಚಾರ ಎಸಗಿರುವ ವಿಕೃತ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸಗೂರು ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಲಿಂಗಸುಗೂರು ಠಾಣೆ ಪೊಲೀಸರು ಇಮ್ತಿಯಾಜ್ (24)ನನ್ನ ಬಂಧಿಸಿದ್ದಾರೆ.
ವೃತ್ತಿಯಲ್ಲಿ ಅಟೋ ಡ್ರೈವರ್ ಆಗಿದ್ದ ಆರೋಪಿ ಇಮ್ತಿಯಾಜ್, ಯಾವಾಗಲು ತೋಟದ ಮನೆಯಲ್ಲೇ ಮಲಗುತ್ತಿದ್ದ. ನಿನ್ನೆ ಯಾರೂ ಇಲ್ಲದ ವೇಳೆ ಅಮರೇಶ ಎಂಬ ವ್ಯಕ್ತಿಗೆ ಸೇರಿದ್ದ ಆಕಳ ಕರುವಿನ ಕಾಲು ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಸುಮಾರು 7-8 ಆಕಳು ಸಾಕಾಣಿಕೆ ಮಾಡುತ್ತಿದ್ದ ಅಮರೇಶ ಕೊಟ್ಟಿಗೆಯಲ್ಲಿ ಆಕಳು ಕಟ್ಟಿ ಮನೆಗೆ ಹೋದಾಗ ಘಟನೆ ನಡೆದಿದೆ. ಇಮ್ತಿಯಾಜ್ ನ ಪೈಶಾಚಿಕ ಕೃತ್ಯ ಕಣ್ಣಾರೆ ಕಂಡಿದ್ದ ಅಮರೇಶ ಬಳಿಕ ಇಮ್ತಿಯಾಜ್ ನ ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾರೆ. ಸೆಕ್ಷನ್ 377 ಅಡಿಯಲ್ಲಿ ಇಮ್ತಿಯಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ರೈತರು-ಸರ್ಕಾರದ ಮಧ್ಯೆ ಸಂಘರ್ಷ: ಹಾಸನದಲ್ಲಿ ಖೆಡ್ಡಾಗೆ ಬಿದ್ದ ಮರಿಯಾನೆ
ಅಂಗಡಿ ಮುಂದೆ ಇಟ್ಟಿದ್ದ ಹಾಲಿನ ಪ್ಯಾಕೆಟ್ಗಳ ಕಳ್ಳತನ
ಕೊಪ್ಪಳದ ತಹಶೀಲ್ದಾರ ಕಚೇರಿ ವೃತ್ತದ ಬಳಿ ಪಂಪಾಪತಿ ಎನ್ನುವರಿಗೆ ಸೇರಿದ ನಂದಿನಿ ಹಾಲು ಮಾರಾಟ ಮಳಿಗೆ ಮುಂದೆ ಕಳ್ಳತನ ನಡೆದಿದೆ. ನಸುಕಿನ ಜಾವ 2.46ಕ್ಕೆ 18 ಲೀಟರ್ ಹಾಲು ಕಳ್ಳತನ ಮಾಡಲಾಗಿದ್ದು ಹಾಲು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿಂದೆ ಸಹ ಅನೇಕ ಕಡೆಗಳಲ್ಲಿ ಹಾಲು ಕಳ್ಳತನ ನಡೆದಿತ್ತು. ನಗರದ ವಿವಿಧ ಪ್ರದೇಶಗಳಲ್ಲಿ ಹಾಲು ಕಳ್ಳತನವಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:45 am, Mon, 2 January 23